ತಳಮಟ್ಟದಿಂದ ಬಿಜೆಪಿ ಕಾರ್ತಕರ್ತರು ಕೆಲಸ ಮಾಡಿ: ಮಾಜಿ ಸಚಿವ ರಾಜೂಗೌಡ

KannadaprabhaNewsNetwork | Published : Mar 19, 2024 12:47 AM

ಸಾರಾಂಶ

ಹುಣಸಗಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಭಗೀರಥ ಸಮುದಾಯದ ನೂರಾರು ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕಿ ಬರಮಾಡಿಕೊಂಡು ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ತಳಮಟ್ಟದಲ್ಲಿ ಕೆಲಸ ಮಾಡಿದಾಗ ಮಾತ್ರ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಹೇಳಿದರು.

ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಭಗೀರಥ ಸಮುದಾಯದ ನೂರಾರು ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕಿ ಬರಮಾಡಿಕೊಂಡು ಅವರು ಮಾತನಾಡಿದರು.

ಬಿಜೆಪಿ ಕಾರ್ಯಕರ್ತರ ಗುರಿ 3ನೇ ಬಾರಿಗೆ ನರೇಂದ್ರ ಮೋದಿಯವರಿಗೆ ಪ್ರಧಾನಮಂತ್ರಿ ಮಾಡುವುದು ಸುರಪುರ ವಿಧಾನಸಭೆ ಉಪ ಚುನಾವಣೆ ಗೆಲುವು ಸಾಧಿಸುವುದು ನಮ್ಮ ಗುರಿಯಾಗಿಟ್ಟುಕೊಂಡು ಪ್ರತಿಯೊಬ್ಬ ಕಾರ್ಯಕರ್ತನು ತಳಮಟ್ಟದಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.

ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ರೈತರ ಬೆಳೆ ಹಾನಿಯಾದರೆ ತಕ್ಷಣವೆ ಕ್ಷೇತ್ರದ ರೈತರಿಗೆ ₹50 ಸಾವಿರಗಳನ್ನು ಸಾವಿರಾರು ರೈತರ ಖಾತೆಗೆ ಜಮಾ ಮಾಡಲಾಗಿತ್ತು. ಇಂತಹ ಕೆಲಸ ಕಾಂಗ್ರೆಸ್ ಮಾಡುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಜಾರಿಗೆ ತಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಹೊರತು ಅಭಿವೃದ್ಧಿ ಪರ ಕೆಲಸ ಮಾಡುತ್ತಿಲ್ಲ ಎಂದರು.

ಪ್ರತಿ ಕುಟುಂಬದ ಒಡತಿಗೆ ಪ್ರತಿ ತಿಂಗಳು ₹2 ಸಾವಿರ ಹಾಕುತ್ತೇವೆ ಎಂದು ಹೇಳಿದ್ದಾರೆ. ಆದರೆ ಅದು ಕೂಡ ಸಮರ್ಪಕವಾಗಿ ಫಲಾನುಭವಿಗಳಿಗೆ ಮುಟ್ಟುತ್ತಿಲ್ಲ. ಇದರಿಂದ ಜನರಿಗೆ ಕಾಂಗ್ರೆಸ್ ಪಕ್ಷದ ನಿಜ ಬಣ್ಣ ಬಯಲಾಗುತ್ತಿದೆ ಎಂದರು. ವಿಧಾನಸಭೆ ಚುನಾವಣೆ ಮುಗಿದು ವರ್ಷ ಕಳೆಯುವುದಕ್ಕೆ ಬಂದರೂ ಸುರಪುರ ಮತಕ್ಷೇತ್ರದಲ್ಲಿ ಒಂದಾದರೂ ಅಭಿವೃದ್ಧಿ ಪರ ಕೆಲಸ ತೋರಿಸಿ ನೋಡೊಣ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು.

ಈ ವೇಳೆ ಪಕ್ಷಕ್ಕೆ ಸೇರ್ಪಡೆಯಾದ ಭಗೀರಥ ಸಮಾಜದ ಮುಖಂಡ ಮಡಿವಾಳಪ್ಪ ಕಟ್ಟಿಮನಿ (ಮಿಲ್ಟ್ರಿ) ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದ ಮುಖಂಡರು ಬೆಲೆ ಕೊಡುತ್ತಿಲ್ಲ. ಚುನಾವಣೆ ಗೆಲ್ಲಲು ಆಶ್ವಾಸನೆ ಕೊಡುತ್ತಾರೆ. ಆಮೇಲೆ ಮುಖಂಡರ ಎಲ್ಲವನ್ನು ತಮ್ಮ ಮುಷ್ಟಿಯಲ್ಲಿ ಹಿಡಿದುಕೊಂಡು ಕಾರ್ಯಕರ್ತರಿಗೆ ಆಟ ಆಡಿಸುತ್ತಾರೆ. ಇದರಿಂದ ಬೇಸತ್ತು ಭಗೀರಥ ಸಮಾಜದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೆರ್ಪಡೆಯಾಗಿದ್ದೇವೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ವೈಲಿ, ವಿರೇಶ ಸಾಹುಕಾರ, ಬಸಣ್ಣ ದೇಸಾಯಿ, ಬಸವರಾಜ ಸ್ಥಾವರಮಠ, ಸೋಮಶೇಖರ ಸ್ಥಾವರಮಠ, ಎಂ.ಎಸ್. ಚಂದಾ, ಸಿದ್ದಣ ಅಂಕಲಕೋಟಿ, ಗುರಲಿಂಗಪ್ಪ ಸಜ್ಜನ್, ಭೀಮಣ್ಣ ಕಟ್ಟಿಮನಿ, ಸುರೇಶ ದೊರೆ, ಮಲ್ಲು ಹೆಬ್ಬಾಳ, ಸಿದ್ದನಗೌಡ ಕರಿಭಾವಿ, ಬಸಣ್ಣ ಬಾಲಗೌಡ್ರ, ನಂದಪ್ಪ ಪೀರಾಪೂರ, ಮೇಲಪ್ಪ ಗುಳಗಿ, ಪರಮಾನಂದ ಚೆಟ್ಟಿ ಸೇರಿದಂತೆ ಇತರರಿದ್ದರು.

Share this article