ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಟಿಟ್ಪಾಡಿಯ ಬಾಯ್ಸ್ ಕ್ರಿಕೆಟರ್ಸ್ ವತಿಯಿಂದ ಉಡುಪಿ ಎಂ.ಜಿ.ಎಂ. ಕಾಲೇಜು ಕ್ರೀಡಾಂಗಣದಲ್ಲಿ ಕೊರಗ ಸಮುದಾಯದವರಿಗಾಗಿಯೇ ನಡೆದ ಎರಡು ದಿನಗಳ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದ ಪ್ರಶಸ್ತಿಯನ್ನು ಉಡುಪಿ ಬೀಡಿಣಗುಡ್ಡೆಯ ನಸೀಬ್ ತಂಡ ಮುಡಿಗೇರಸಿಕೊಂಡಿದೆ.ಅವಿಭಜಿತ ದ.ಕ. ಜಿಲ್ಲೆಯ ಕೊರಗ ಸಮುದಾಯದ ದಾಖಲೆಯ ೪೭ ತಂಡಗಳು ಭಾಗವಹಿಸಿದ್ದ ಈ ಟೂರ್ನಮೆಂಟ್‌ನ ಫೈನಲ್ ಪಂದ್ಯಾಟದಲ್ಲಿ ಉಡುಪಿಯ ನಸೀಬ್ ತಂಡ, ಅಲೆವೂರಿನ ಸಿದ್ಧಾರ್ಥ್ ತಂಡವನ್ನು ಸೋಲಿಸಿತು. ಈ ಮೂಲಕ ಸಿದ್ಧಾರ್ಥ್ ಅಲೆವೂರು ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿತು.ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯಾಟದಲ್ಲಿ ಸಿದ್ದಾರ್ಥ ಅಲೆವೂರು ತಂಡವು ಉಡುಪಿಯ ವಿಶ್ವಾಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ, ಎರಡನೇ ಸೆಮಿಫೈನಲ್‌ನಲ್ಲಿ ಉಡುಪಿಯ ನಸೀಬ್ ತಂಡವು ಮಂಗಳೂರಿನ ಸಾಗರ್ ಪಿಲಿಕುಳ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಪಡೆಯಿತು.ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಸಿದ್ಧಾರ್ಥ ಅಲೆವೂರಿನ ಆಕಾಶ್ ಪಡೆದರೆ, ಉತ್ತಮ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ನಸೀಬ್ ಉಡುಪಿಯ ಅಮಿತ್ ಪಡೆದರು. ಉತ್ತಮ ಬೌಲರ್ ಪ್ರಶಸ್ತಿಯನ್ನು ಸಿದ್ಧಾರ್ಥ ಅಲೆವೂರಿನ ರಾಜೇಶ್ ಪಡೆದರೆ, ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ನಸೀಬ್ ತಂಡದ ಅಮಿತ್ ಪಡೆದರು. ಫೈನಲ್ ಪಂದ್ಯಾಟದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ನಸೀಬ್ ತಂಡದ ಕಿಶನ್ ಪಡೆದರು.ವಿಜೇತರಿಗೆ ಯುವ ವಕೀಲ ಅಸದುಲ್ಲಾ ಕಟಪಾಡಿ ಪ್ರಶಸ್ತಿ ವಿತರಿಸಿದರು. ಕ್ರಿಕೆಟ್ ಆಟಗಾರರಾದ ಪ್ರದೀಪ್ ಶೆಟ್ಟಿ, ಶಶಾಂಕ್ ಕುಲಾಲ್, ಬಾಯ್ಸ್ ಚಿಟ್ಪಾಡಿಯ ನಾಯಕ ಸುನಿಲ್, ಜಯರಾಮ ಬೀಡಿನಗುಡ್ಡೆ, ಶ್ಯಾಮ್, ಆನಂದ, ಜಗದೀಶ ಇದ್ದರು. ಪಥುಲ್ ಹಿರಿಯಡ್ಕ ಕಾರ್ಯಕ್ರಮ ನಿರ್ವಹಿಸಿದರು.
--------------ಅಂತರ್ ವಿಶ್ವವಿದ್ಯಾನಿಲಯ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಎಸ್‌ಆರ್‌ಎಂ ಚೆನ್ನೈ
ಕನ್ನಡಪ್ರಭ ವಾರ್ತೆ ಮಣಿಪಾಲಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆಶ್ರಯದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಲಯ ಅಂತರ್ ವಿಶ್ವವಿದ್ಯಾನಿಲಯ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚೆನೈನ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಪ್ರಶಸ್ತಿ ಗೆದ್ದುಕೊಂಡಿದೆ.ಎರಡನೇ ಸ್ಥಾನವನ್ನು ಚೆನ್ನೈಯ ಅಣ್ಣಾ ವಿಶ್ವವಿದ್ಯಾನಿಲಯ ಮತ್ತು ಮೂರನೇ ಸ್ಥಾನವನ್ನು ಕಲ್ಕತ್ತಾದ ಅದ್ಮಾಸ್ ವಿಶ್ವವಿದ್ಯಾನಿಲಯವು ಪಡೆದುಕೊಂಡಿವೆ.ಫೆ.16ರಿಂದ 18ರ ವರೆಗೆ ಮೂರು ದಿನಗಳ ಕಾಲ ಜರುಗಿದ ಈ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಾದ್ಯಂತದ ವಿಶ್ವವಿದ್ಯಾನಿಲಯಗಳ ಸುಮಾರು 100 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಆರು ಮಂದಿ ಅಂತಾರಾಷ್ಟ್ರೀಯ ಮಾಸ್ಟರ್‌ಗಳು ಮತ್ತು ನಾಲ್ಕು ಮಂದಿ ಗ್ರ್ಯಾಂಡ್‌ಮಾಸ್ಟರ್‌ಗಳಿದ್ದರು.