ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಐಯುಸಿಇಇ, ಈಡಬ್ಲ್ಯೂಬಿ, ಎಂಸಿಇ ಸ್ಟೂಡೆಂಟ್ಸ್ ಚಾಪಿಟರ್ ರವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ಅವಿಷ್ಕಾರ ಮಂಥನ್ ಎಂಬ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಭವಿಷ್ಯವನ್ನು ಉಜ್ವಲಗೊಳಿಸಲು ರಾಷ್ಟ್ರೀಯ ಮಟ್ಟದಲ್ಲಿ ವಿಚಾರ ಮಂಥನಗಳ ಅಗತ್ಯವಿದೆ ಎಂದರು.
ಇಂದು ನಾನಾ ಕಡೆಗಳಿಂದ ೧೫ಕ್ಕೂ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜಿನಿಂದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇವರಿಗೆ ಹೆಚ್ಚಿನ ಜ್ಞಾನ ಸಿಗಬೇಕಾದರೆ ಪರಿಣಿತರ ಮಾರ್ಗದರ್ಶನ ಪಡೆಯಲು ಈ ಕಾರ್ಯಕ್ರಮ ಅನುಕೂಲವಾಗಿದೆ. ಈ ಕಾರ್ಯಕ್ರಮದಿಂದ ವ್ಯಾಸಂಗಕ್ಕೆ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು, ಕಾರ್ಯಕ್ರಮದ ಆಯೋಜಕ ಡಾ. ಎಸ್. ಎಜಿಲ್ ವಣ್ಣನ್ ಮಾತನಾಡಿ, ಅವಿಷ್ಕಾರ್ ಮಂಥನ್ ಎಂಬ ಕಾರ್ಯಕ್ರಮದಲ್ಲಿ ನುರಿತ, ಅನುಭವಿ ತಜ್ಞರಿಂದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಇಂದು ತಂತ್ರಜ್ಞಾನದ ಯುಗದಲ್ಲಿ ಹೆಚ್ಚು ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಅಗತ್ಯತೆಯಿದೆ ಎಂದು ವಿವಿಧ ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಕಾಸ್ಟ್ ಅಕೌಂಟ್ ಕಾರ್ಯದರ್ಶಿ ಲೂಬ್ ಎನ್. ರವಿಂದ್ರನಾಥ್ ಕೌಶಿಕ್, ಕರ್ನಾಟಕ ಮತ್ತು ಫೌಂಡರ್ ಅಂಡ್ ಸಿಇಒ ಎಚ್. ಸುಂದರ್ ಮೂರ್ತಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.