ಎಸ್ಸೆಸ್ಸೆಲ್ಸಿ ಫಲಿತಾಂಶ ಟಾಪ್‌ 5ರೊಳಗೆ ತನ್ನಿ

KannadaprabhaNewsNetwork |  
Published : Sep 01, 2025, 01:03 AM IST
೩೧ಕೆಎಲ್‌ಆರ್-೧ಕೋಲಾರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯ ಶಿಕ್ಷಕರನ್ನುದ್ದೇಶಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಮಾತನಾಡಿದರು. | Kannada Prabha

ಸಾರಾಂಶ

ಲಕ್ಷ ಲಕ್ಷ ಸಂಬಳ ಪಡೆಯುವ ಶಿಕ್ಷಕರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು, ಇಷ್ಟಬಂದಂತೆ ನೀವೂ ರಜೆ ಹಾಕಬೇಡಿ, ಶಿಕ್ಷಕರಿಗೂ ರಜೆ ನೀಡಬೇಡಿ, ನೀವು ಬಿಇಒ ಗಮನಕ್ಕೆ ತಂದು ರಜೆ ಹಾಕಬೇಕು, ಶಿಕ್ಷಕರಿಗೆ ಮೊದಲೇ ರಜೆ ಚೀಟಿ ಪಡೆದು ರಜೆ ಮಂಜೂರು ಮಾಡಿಸಿಕೊಂಡರೆ ಮಾತ್ರ ಅವಕಾಶ ನೀಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರಶಾಲೆಗೆ ಅರ್ಧಗಂಟೆ ಮುಂಚೆ ಬನ್ನಿ, ಮಕ್ಕಳ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ, ಹಣಕಾಸು ನಿರ್ವಹಣೆ ಸರಿಯಾಗಿರಲಿ, ಸದಾ ಕ್ರಿಯಾಶೀಲರಾಗಿದ್ದು, ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಟಾಫ್ ೫ರೊಳಗೆ ಬರುವಂತೆ ಕ್ರಮವಹಿಸಿ ಎಂದು ಜಿಲ್ಲೆಯ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ತಾಕೀತು ಮಾಡಿದರು.ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಡಯಟ್‌ನಿಂದ ಜಿಲ್ಲೆಯ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಶಾಲಾ ಅವಧಿಯಲ್ಲಿ ಕಚೇರಿಗಳಿಗೆ ಓಡಾಟ ಬೇಡ, ಶಾಲೆಗಳಲ್ಲಿ ಕೇಂದ್ರೀಕೃತ ಶಿಕ್ಷಣ ಅಗತ್ಯವಿದೆ ಎಂದರು.ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ಮುಖ್ಯ ಶಿಕ್ಷಕರಿಗೆ ಹೆಚ್ಚಿನ ಅಧಿಕಾರ ಇಲಾಖೆ ನೀಡಿದೆ, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಸದ್ಬಳಕೆ ಮಾಡಿಕೊಳ್ಳಿ, ಶಿಕ್ಷಕರಲ್ಲಿ ಸಮಯಪ್ರಜ್ಞೆ ಬೆಳೆಸಿಕೊಳ್ಳಿ ಎಂದರು. ಲಕ್ಷ ಲಕ್ಷ ಸಂಬಳ ಪಡೆಯುವಾಗ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು, ಇಷ್ಟಬಂದಂತೆ ನೀವೂ ರಜೆ ಹಾಕಬೇಡಿ, ಶಿಕ್ಷಕರಿಗೂ ರಜೆ ನೀಡಬೇಡಿ, ನೀವು ಬಿಇಒ ಗಮನಕ್ಕೆ ತಂದು ರಜೆ ಹಾಕಬೇಕು, ಶಿಕ್ಷಕರಿಗೆ ಮೊದಲೇ ರಜೆ ಚೀಟಿ ಪಡೆದು ರಜೆ ಮಂಜೂರು ಮಾಡಿಸಿಕೊಂಡರೆ ಮಾತ್ರ ಅವಕಾಶ ನೀಡಿ ಎಂದು ಸೂಚಿಸಿದರು.ಕಲಿಕಾ ಹಿಂದುಳಿದ ೨೯ ಸಾವಿರ ಮಕ್ಕಳು:

ಉಪನಿರ್ದೇಶಕ ಹಾಗೂ ಡಯಟ್ ಪ್ರಾಂಶುಪಾಲ ಚಂದ್ರಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ೨೯ ಸಾವಿರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿದ್ದಾರೆ, ಅವರ ಶೈಕ್ಷಣಿಕ ಪ್ರಗತಿಗೆ ಇಲಾಖೆ ಸೂಚಿಸಿರುವ ಎಲ್‌ಬಿಎ(ಪಾಠ ಆಧಾರಿತ ವಿಶ್ಲೇಷಣೆ) ಬುನಾದಿ ಶಿಕ್ಷಣದ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಿ ಎಂದು ಸೂಚಿಸಿದರು.ಇದೇ ಸಂದರ್ಭದಲ್ಲಿ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್, ಉಪನಿರ್ದೇಶಕರಾದ ಚಂದ್ರಪಾಟೀಲ್ ಅವರನ್ನು ಬಿಆರ್‌ಸಿ ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಡಯಟ್ ಉಪನ್ಯಾಸಕ ಬಾಲಾಜಿ, ಬಿಇಒ ಮಧುಮಾಲತಿ ಪಡುವಣೆ, ಹಿರಿಯ ಉಪನ್ಯಾಸಕ ನಂಜುಂಡಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ರಾಧಮ್ಮ,ಬಿಆರ್‌ಪಿ ಪ್ರವೀಣ್, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ನಂಜುಂಡಗೌಡ, ಲೇಖಾ, ಮುಖ್ಯಶಿಕ್ಷಕಿ ಗಾಯತ್ರಿ ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ