ಬುದ್ಧನ ಬೋಧನೆಗಳು ಸರ್ವಕಾಲಕ್ಕೂ ಸಮ್ಮತ: ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ

KannadaprabhaNewsNetwork | Published : Mar 14, 2024 2:04 AM

ಸಾರಾಂಶ

ದೇಶದಲ್ಲಿ ಬೌದ್ಧ ಧರ್ಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ವೀಕಾರ ಮಾಡಬೇಕು. ದೇಶಗಳಲ್ಲಿ ಹೆಚ್ಚು ಪ್ರಚಾರದಲ್ಲಿ ಇರುವ ಬೌದ್ಧ ಧರ್ಮವು ಪ್ರಸ್ತುತ ಭಾರತೀಯರಿಗೆ ಅನಿವಾರ್ಯವಾಗಿದೆ. ವಿಶ್ವರ ಹಲವು ದೇಶಗಳಲ್ಲಿ ಬೌದ್ದ ಧರ್ಮದ ಚಿಂತನೆಗಳನ್ನು ಒಪ್ಪಿ ಸ್ವಯಂ ಪ್ರೇರಿತವಾಗಿ ಬೌದ್ಧ ಧರ್ಮವನ್ನು ಸ್ವೀಕಾರ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಸಾರಿದ ಬುದ್ಧರ ಬೋಧನೆಗಳು ಸರ್ವಕಾಲಕ್ಕೂ ಸಮ್ಮತವಾಗಿವೆ. ದೇಶದಲ್ಲಿ ಬೌದ್ಧ ಧರ್ಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ವೀಕಾರ ಮಾಡಬೇಕೆಂದು ಎಂದು ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ಬಾಚನಹಳ್ಳಿ ಬಳಿ ಮಿಲಿಂದ ಬುದ್ಧ ವಿಹಾರ ಆವರಣದಲ್ಲಿ ನವೋದಯ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿರುವ ಭಗವಾನ್ ಬುದ್ಧರ ಪುತ್ಥಳಿಯ ಮೊದಲನೇ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ದೇಶಗಳಲ್ಲಿ ಹೆಚ್ಚು ಪ್ರಚಾರದಲ್ಲಿ ಇರುವ ಬೌದ್ಧ ಧರ್ಮವು ಪ್ರಸ್ತುತ ಭಾರತೀಯರಿಗೆ ಅನಿವಾರ್ಯವಾಗಿದೆ. ವಿಶ್ವರ ಹಲವು ದೇಶಗಳಲ್ಲಿ ಬೌದ್ದ ಧರ್ಮದ ಚಿಂತನೆಗಳನ್ನು ಒಪ್ಪಿ ಸ್ವಯಂ ಪ್ರೇರಿತವಾಗಿ ಬೌದ್ಧ ಧರ್ಮವನ್ನು ಸ್ವೀಕಾರ ಮಾಡುತ್ತಿದ್ದಾರೆ ಎಂದರು.

ಭಾರತೀಯ ಬೌದ್ಧ ಮಹಸಭಾ ಯೂತ್ ವಿಂಗ್ ರಾಜ್ಯ ಅಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಮಾತನಾಡಿ, ಬೌದ್ದ ಧಮ್ಮವನ್ನು ಪ್ರತಿಯೊಬ್ಬರು ಸ್ವೀಕಾರ ಮಾಡಬೇಕೆಂಬ ಆಶಯವನ್ನು ಹೊಂದಿದ್ದಾರೆ. ಬುದ್ದನ ಚಿಂತನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯ ನಡೆಯಬೇಕಿದೆ ಎಂದರು.

ಡಾ.ಬಿ.ಆರ್. ಅಂಬೇಡ್ಕರ್‌ರವರ ಆಶಯದಂತೆ ತಾಲೂಕಿನಲ್ಲಿ ಬೌದ್ದ ಧಮ್ಮದ ಪ್ರಚಾರದ ಉದ್ದೇಶಕ್ಕಾಗಿ ಭಗವಾನ್ ಬುದ್ದರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿ ಭಾರತೀಯ ಬೌದ್ಧ ಮಹಸಭಾದ ಯುವ ಘಟಕದ ಸಮಿತಿ ಸ್ಥಾಪನೆ ಮಾಡಲಾಗಿದೆ ಎಂದರು.

ಕೊಳ್ಳೇಗಾಲ ಚೇತನವನದ ಮನೋರಖ್ಖಿತ ಭಂತೇಜಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಬೌದ್ಧ ಧಮ್ಮದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವುದರ ಮೂಲಕ ಧರ್ಮಕ್ಕೆ ಭದ್ರ ಅಡಿಪಾಯ ಹಾಕಲು ಮುಂದಾಗಬೇಕು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಕ್ಕಾ ಐಎಎಸ್ ಅಕಾಡೆಮಿ ಸಂಸ್ಥಾಪಕ ಶಿವಕುಮಾರ್, ಬೌದ್ಧ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಮಾರ್ಕಾಲು ನಟರಾಜು, ಮುಖಂಡರಾದ ಎಂ.ಎನ್.ಜಯರಾಜು, ಸಿದ್ದರಾಮು, ಕಸಾಪ ತಾಲೂಕು ಅಧ್ಯಕ್ಷ ಚೇತನ್‌ಕುಮಾರ್ ಸೇರಿದಂತೆ ಇತರರು ಇದ್ದರು.

Share this article