ನೈತಿಕತೆ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಿ: ಮೋಹನದೇವ ಆಳ್ವ

KannadaprabhaNewsNetwork |  
Published : Apr 05, 2024, 01:09 AM IST
ಹಿರಿಯ ಚೇತನಗಳ ಸಂಸ್ಮರಣೆ ಕಾರ್ಯಕ್ರಮವನ್ನು ಕೆ. ಮೋಹನದೇವ ಆಳ್ವ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಾತಃಸ್ಮರಣೀಯರಾದ ಸ.ಪ. ಗಾಂವಕರ, ದಿನಕರ ದೇಸಾಯಿಯವರ ಸಮಾಜಮುಖಿ ಬದುಕು ನಮ್ಮ ಯುವ ಜನಾಂಗಕ್ಕೆ ಆದರ್ಶವಾಗಬೇಕು ಎಂದು ಕೆ. ಮೋಹನದೇವ ಆಳ್ವ ತಿಳಿಸಿದರು.

ಅಂಕೋಲಾ: ಸಮಾಜದ ಇಂದಿನ ದುಸ್ಥಿತಿಗೆ ಮಾನವೀಯ ಮೌಲ್ಯಗಳ ಅವಗಣನೆ ಪ್ರಮುಖ ಕಾರಣವಾಗಿದೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ನೈತಿಕ ಮೌಲ್ಯಗಳ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳದಿದ್ದರೆ ಪ್ರಯೋಜನವಿಲ್ಲ ಎಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದ ನಿರ್ದೇಶಕ ಹಾಗೂ ಡಾ. ರಾಜಕುಮಾರ ಪ್ರತಿಷ್ಠಾನದ ಸದಸ್ಯ ಕೆ. ಮೋಹನದೇವ ಆಳ್ವ ತಿಳಿಸಿದರು.

ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ೪೦ನೇ ವರ್ಷಾಚರಣೆ ಅಂಗವಾಗಿ ಅಂಕೋಲೆಯ ನಾಡವರ ಭವನದಲ್ಲಿ ಏರ್ಪಡಿಸಿದ್ದ ಹಿರಿಯ ಚೇತನಗಳ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾತಃಸ್ಮರಣೀಯರಾದ ಸ.ಪ. ಗಾಂವಕರ, ದಿನಕರ ದೇಸಾಯಿಯವರ ಸಮಾಜಮುಖಿ ಬದುಕು ನಮ್ಮ ಯುವ ಜನಾಂಗಕ್ಕೆ ಆದರ್ಶವಾಗಬೇಕು ಎಂದರು.

ಪ್ರತಿಷ್ಠಾನದ ಕುರಿತು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಅಮ್ಮೆಂಬಳ ಅವರು, ದಿನಕರ ಪ್ರತಿಷ್ಠಾನ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದುವರಿಯುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.

ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಮಾತನಾಡಿ, ನಾವೆಲ್ಲ ಕಟ್ಟಿ ಬೆಳೆಸಿದ ದಿನಕರ ಪ್ರತಿಷ್ಠಾನ ಮುಂದುವರಿಸಿಕೊಂಡು ಹೋಗುವುದು ಯುವ ಜನಾಂಗದ ಹೊಣೆಗಾರಿಕೆಯಾಗಿದೆ ಎಂದರು.

ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ ಡಾ. ದಿನಕರ ದೇಸಾಯಿ, ಡಾ. ನಾಗಪ್ಪ ಆಳ್ವ, ಸ.ಪ. ಗಾಂವಕರ, ಡಾ. ಅಮ್ಮೆಂಬಳ ಬಾಳಪ್ಪ, ಸಾಹಿತಿ ವಿಷ್ಣು ನಾಯ್ಕರ ಸ್ಮರಣೆಯ ಕುರಿತು ಉಪನ್ಯಾಸವನ್ನು ಸಿದ್ದಲಿಂಗಸ್ವಾಮಿ ವಸ್ತ್ರದ, ರಾಮಕೃಷ್ಣ ಗುಂದಿ, ಅರುಣಕುಮಾರ ಹಬ್ಬು, ಶ್ರೀಧರ ನಾಯಕ, ವಿನಾಯಕ ಹೆಗಡೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು ಮಾತನಾಡಿದರು. ಪ್ರಾರಂಭದಲ್ಲಿ ಸ.ಪ. ಗಾಂವಕರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಮೇಘನಾ ಗೌಡ, ಯಕ್ಷನೃತ್ಯವನ್ನು ಪ್ರದರ್ಶಿಸಿದರು. ಆರ್ಯ, ಮೇಘನಾ ದಿನಕರ ದೇಸಾಯಿಯವರ ಆಶಯ ಗೀತೆಯನ್ನು, ಕ್ಷಮಾ ಅವರು ಸಾಹಿತಿ ವಿಷ್ಣು ನಾಯ್ಕರ ಆಶಯಗೀತೆಯನ್ನು ಪ್ರಸ್ತುತ ಪಡಿಸಿದರು.

ಜಿ.ಆರ್. ನಾಯಕ ಪ್ರಾರ್ಥಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಸ್ವಾಗತಿಸಿದರು. ರವೀಂದ್ರ ಕೇಣಿ, ಮಹಾಂತೇಶ ರೇವಡಿ, ಲಲಿತಾ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಪತ್ರಕರ್ತ ಸುಭಾಶ್ ಕಾರೇಬೈಲ್ ನಿರೂಪಿಸಿದರು. ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ ವಂದಿಸಿದರು. ಕೆ. ಮೋಹನದೇವ ಆಳ್ವ ಹಾಗೂ ಶಾಂತಾರಾಮ ನಾಯಕ ಹಿಚಕಡರವರನ್ನು ಪ್ರತಿಷ್ಠಾನದ ಪರವಾಗಿ ಸನ್ಮಾನಿಸಲಾಯಿತು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು