-ಹೈವೇ ಶಾಲೆಯಲ್ಲಿ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ಕಡೂರುಶಾಲೆಗಳು ಮಕ್ಕಳಿಗೆ ಶಿಕ್ಷಣ ನೀಡುವ ಜೊತೆ ಸ್ವಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಹೈವೇ ಇಂಗ್ಲೀಷ್ ಶಾಲೆಯಲ್ಲಿ ನಡೆದ ಹೈವೇ ಗ್ಯಾಲಾಕ್ಸಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಶಾಲೆ ಆಡಳಿತ ಮಂಡಳಿ ತಾಲೂಕಿನಲ್ಲಿಯೇ ಪ್ರಥಮ ಇಂಗ್ಲೀಷ್ ಶಾಲೆಯನ್ನು ಕಡೂರು ಪಟ್ಟಣದಲ್ಲಿ ಪ್ರಾರಂಭಿಸಿ ಸಾವಿರಾರು ಮಕ್ಕಳಿಗೆ ಅಕ್ಷರ ಜ್ಞಾನವನ್ನು ಕಳೆದ 35 ವರ್ಷದಿಂದ ನೀಡುತ್ತಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಕಲಿಕೆ ತಮ್ಮ ಮಕ್ಕಳಿಗೆ ಮತ್ತಷ್ಟು ಸಿಗಬೇಕಾಗಿದೆ ಎಂದರು.ಮಕ್ಕಳಿಗೆ ಅಂಕ ಗಳಿಕೆ ಪಾಠದ ಜೊತೆಗೆ ಹಿರಿಯರಿಗೆ ಗೌರವ ಕೊಡುವ ಸಂಸ್ಕಾರ, ಭಾಷೆ, ಸಂಸ್ಕೃತಿ ಪರಂಪರೆ ಕಲಿಸಬೇಕಾಗಿದೆ. ಆದರೆ ಇಂಗ್ಲೀಷ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಆಸೆಯಾಗಿದೆ. ಈ ಶಾಲೆ ಗುಣಮಟ್ಟದ ಕಟ್ಟಡ, ವಿಶಾಲವಾದ ಮೈದಾನ ಹೊಂದಿದ್ದು, ಪಠ್ಯ ಕ್ರಮಕ್ಕೆ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸು ವಂತಾಗಬೇಕು ಎಂದರು.
ಕಡೂರು ಪಟ್ಟಣದಲ್ಲಿ ಗುಣಮಟ್ಟದ ಬೋಧನೆಯ ಪಿಯು ಕಾಲೇಜು ಅಗತ್ಯವಿದ್ದು, ಹೈವೆ ಶಾಲೆ ಇದನ್ನು ಪ್ರಾರಂಭಿಸಲು ಚಿಂತನೆ ನಡೆಸಬೇಕು. ಪ್ರತಿಯೊಬ್ಬ ಮಗುವಿನಲ್ಲಿ ಉತ್ತಮ ಪ್ರತಿಭೆ ಇದೆ. ಅಂತಹ ಪ್ರತಿಭೆ ಹೊರತೆಗೆಯಲು ಇಂತಹ ವೇದಿಕೆಗಳು ಸಹಕಾರಿ. ಮಕ್ಕಳು ಶಿಕ್ಷಕರಿಗೆ, ಪೋಷಕರಿಗೆ ಹೆಸರು ತರಲು ಓದಿಗೆ ಸೀಮಿತವಾಗದೆ ಕ್ರೀಡಾಭಿಮಾನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು. ಈ ಶಾಲೆ ಹಣ ಮಾಡುವ ಉದ್ದೇಶ ಹೊಂದದೆ ಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಶಿಕ್ಷಣಾಧಿಕಾರಿ ಆರ್ . ಸಿದ್ದರಾಜ ನಾಯ್ಕ ಮಾತನಾಡಿ, ಕಳೆದ ಬಾರಿಯ ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಶಾಲೆಯ ವಿದ್ಯಾರ್ಥಿನಿ ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಹೈವೆ ಶಾಲೆ ಅಧ್ಯಕ್ಷ ಬಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಿಯಾನಾ ಡಾಗಾ, ಶಾಲೆಯ ನಿರ್ದೇಶಕ ರಾದ ಜತನ್‍ಲಾಲ್ ಡಾಗಾ, ನಾಗಾನಂದ್, ಡಾ. ಎಸ್.ವಿ. ದೀಪಕ್, ಗುರುಪ್ರಸಾದ್, ನಾರಾಯಣ ಸ್ವಾಮಿ, ಪ್ರಾಂಶುಪಾಲ ಗಣೇಶ್ ಸಾಲಿಯಾನ, ಮಂಜುನಾಥ್ ಮತ್ತಿತರಿದ್ದರು. 4ಕೆಕೆಡಿಯು1.ಕಡೂರು ಪಟ್ಟಣದ ಹೈವೆ ಇಂಗ್ಲೀಷ್ ಶಾಲೆಯಲ್ಲಿ ನಡೆದ ಹೈವೇ ಗ್ಯಾಲಾಕ್ಸಿ ಸಮಾರಂಭವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.