ಕನ್ನಡಪ್ರಭ ವಾರ್ತೆ ಮೈಸೂರು
ಕ್ರೀಡಾ ಭಾರತಿ ವತಿಯಿಂದ ಫೆ. 11ರಂದು ರಾಜ್ಯಮಟ್ಟದ ಓಪನ್ ಬ್ಯಾಡ್‌ಮಿಂಟನ್ ಸ್ಪರ್ಧಾ ಕೂಟವನ್ನು ಕ್ರೀಡಾ ಭಾರತಿಯ ಜಿಲ್ಲಾಧ್ಯಕ್ಷ ಅಮೃತ್ ಪುರೋಹಿತ್ ನೇತೃತ್ವದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಮೈಸೂರಿನ ಮುಖ್ಯಸ್ಥ ಡಾ. ಸದಾನಂದ ಚಾಲನೆ ನೀಡಿದರು.ನಂತರ ಅವರು ಮಾತನಾಡಿ, ಈ ಕ್ರೀಡೆಯಿಂದ ಶಿಸ್ತು, ತಾಳ್ಮೆ, ಕ್ರಿಯಾಶೀಲತೆ, ವ್ಯಕ್ತಿತ್ವ ನಿರ್ಮಾಣ ಹಾಗೂ ಯಂಗ್‌ಇಂಡಿಯಾ ನಿರ್ಮಾಣದ ಕಡೆಗೆ ಸಹಕಾರಿಯಾಗಿದೆ ಎಂದರು.
ಪ್ರಯೋಜಕರಾದ ಜಿಎಸ್‌ಎಸ್ ಮಾಧ್ಯಮ ಯುಟ್ಯೂಬ್ ಚಾನೆಲ್‌ಮುಖ್ಯ ನಿರ್ದೇಶಕಿ ರೂಪಶ್ರೀ, ಆಯೋಜಕರಾದ ಮಗ್ಗದ ಮನೆಯ ಪ್ರಶಾಂತ್, ರೆಡ್ ಎಫ್.ಎಂ 93.5 ನ ಶ್ರೀರಾಘವ ಮೈಸೂರು, ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹೇಂದ್ರ ಪ್ರಸಾದ್, ಸ್ಪೋಟ್ಸ್‌ಸ್ಪಾರ್ಕ್ ಮಾಲೀಕರು ಶ್ರೀಕಾಂತ್ ಅವರು ನೆರವೇರಿಸಿಕೊಟ್ಟರು.ಭಾರತಮಾತೆ ಹಾಗೂ ಆಂಜನೇಯನಿಗೆ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಒಟ್ಟು ದಕ್ಷಿಣ ಪ್ರಾಂತ್ಯದಿಂದ 70 ತಂಡಗಳು ಬಂದಿದ್ದವು. ಅದರಲ್ಲಿ ತಂಡಗಳನ್ನ 4 ವಿಭಾಗಗಳಾಗಿ ವಿಂಗಡಿಸಲಾಗಿದೆ.
ಮೆನ್ಸ್ ಓಪನ್ ಡಬಲ್ಸ್, ಮೆನ್ಸ್ 75+ ಡಬಲ್ಸ್, ಮಿಕ್ಸ್ ಡಬಲ್ಸ್ ವಿಮೆನ್ಸ್ ಡಬಲ್ಸ್. ಇದರಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಮೊದಲು ಬಂದ ಎರಡು ತಂಡಗಳಿಗೆ ನಾಲ್ಕು ವಿಭಾಗಗಳಲ್ಲಿ ಜಿಎಸ್ಎಸ್ ಮಾಧ್ಯಮದ ಪ್ರಾಯೋಜಕತ್ವದಲ್ಲಿ 40 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು.ಪುರುಷ ಡಬ್ಬಲ್ಸ್ ಓಪನ್- ವಿಜೇತರು - 8 ಸಾವಿರ, ರನ್ನರ್ಸ್ - 6 ಸಾವಿರ.
ಪುರುಷ 75+ - ವಿಜೇತರು - 6 ಸಾವಿರ, ರನ್ನರ್ಸ್ - 5 ಸಾವಿರ. - ಮಿಕ್ಸ್ ಡಬ್ಬಲ್ಸ್- ವಿಜೇತರು - 5 ಸಾವಿರ, ರನ್ನರ್ಸ್ - 3 ಸಾವಿರ. ಮಹಿಳಾ ಡಬ್ಬಲ್ಸ್- ವಿಜೇತರು - 4 ಸಾವಿರ, ರನ್ನರ್ಸ್ - 2 ಸಾವಿರ.