ದೇವನೂರ ಒಳ ಮೀಸಲಾತಿ ಒಡಕಿನ ದಾರಿ ಎನ್ನದಿರಲಿ

KannadaprabhaNewsNetwork | Published : Aug 4, 2024 1:19 AM

ಸಾರಾಂಶ

ದಲಿತ ಸಂಘರ್ಷ ಸಮಿತಿ ಹರಿದು ಹಂಚಿ ಹೋದಾಗ ನಗೆಪಾಟಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರುದಲಿತ ಸಂಘರ್ಷ ಸಮಿತಿ ಹರಿದು ಹಂಚಿ ಹೋದಾಗ ಇದು ವಿಸ್ತಾರ, ಒಡಕಲ್ಲ ಎಂದಿದ್ದ ದೇವನೂರ ಮಹಾದೇವ ಅವರು ಈಗ ಒಳ ಮೀಸಲಾತಿ ಒಡಕಿಗೆ ದಾರಿ ಎನ್ನದಿರಲಿ ಎಂದು ಚಿಂತಕ ಪ್ರೊ.ಎಚ್. ಗೋವಿಂದಯ್ಯ ಮಾರ್ಮಿಕವಾಗಿ ಹೇಳಿದರು.ಮಾನಸ ಗಂಗೋತ್ರಿಯ ಇ.ಎಂ.ಎಂ.ಆರ್.ಸಿ ಸಭಾಂಗಣದಲ್ಲಿ ಪಂಚಮ ಮತ್ತು ಸಾಮಾಜಿಕ ನ್ಯಾಯಪರ ವೇದಿಕೆ, ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ''''ಸ್ವಾರ್ಥವಿಲ್ಲದ ಪಾರ್ಥ'''' ಸಿ.ಎಸ್. ಪಾರ್ಥಸಾರಥಿ ಅವರ ನುಡಿ ನಮನ ಹಾಗೂ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದಲಿತ ಸಂಘರ್ಷ ಸಮಿತಿ ಹರಿದು ಹಂಚಿ ಹೋದಾಗ ನಗೆಪಾಟಲಾಯಿತು. ಆಗ ಇದು ವಿಸ್ತಾರ ಎಂದಿದ್ದರು ದೇವನೂರ ಮಹದೇವ. ಈಗ ಒಳ ಮೀಸಲಾತಿ ಜಾರಿಯಾಗುವ ವೇಳೆ ಇದು ಒಗ್ಗಟ್ಟು ನಾಶ ಮಾಡುತ್ತದೆ ಎಂಬ ಸುಳ್ಳು ಅಪಾದನೆ ಮಾಡುವುದು ನಿಲ್ಲಿಸಬೇಕು. ಇವರೇನು ಒಗ್ಗಟ್ಟಾಗಿದ್ದಾರಾ? ದಲಿತ ಒಳಮೀಸಲಾತಿ ಬಗ್ಗೆ ಮಾತನಾಡುವವರು ಏನು ಮಾಡುತ್ತಿದ್ದಾರೆ ಎಂಬುದನ್ನು ಯೋಚಿಸಲಿ ಎಂದರು.ದೇಶದ ಸರ್ವೋಚ್ಛ ನ್ಯಾಯಾಲಯವೇ ತನ್ನ ತೀರ್ಪಿನ ಮೂಲಕ ಪಾರ್ಥಸಾರಥಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಇದು ಸಮಾನ್ಯ ವಕ್ತಿಯೊಬ್ಬರ ಅಸಾಮಾನ್ಯ ಶಕ್ತಿ. ಒಳ ಮೀಸಲಾತಿಗಾಗಿ ತನ್ನ ಪ್ರಾಣವನ್ನೇ ತೆತ್ತಿದ್ದಾರೆ. ಪಾರ್ಥ ಸಾರಥಿ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸದಿದ್ದರೆ ಈ ತೀರ್ಪು ಬರುತ್ತಲೇ ಇರಲಿಲ್ಲ. ಒಳ ಮೀಸಲಾತಿಗಾಗಿ ಪ್ರಾರ್ಥಸಾರಥಿ ಮತ್ತು ದಲಿತ ಮುಖಂಡ ವೆಂಕಟೇಶ್, ಮರಳ್ಳಿಪುರ ರವಿಕುಮಾರ್ ಅರ್ಜಿ ಸಲ್ಲಿಸಿದ್ದರು. ಇಡೀ ದಕ್ಷಿಣ ಭಾರತದ ದಲಿತರ ಒಳ ಮೀಸಲಾತಿಯ ಸಾಧ್ಯತೆಗಳ ಬಗ್ಗೆ ಮಾಹಿತಿಯನ್ನು ವ್ಯವಸ್ಥಿತವಾಗಿ ಸಲ್ಲಿಸಿದ ವ್ಯಕ್ತಿ ಪ್ರಾರ್ಥಸಾರಥಿ. ಈತ ಜೀವಂತವಾಗಿದಿದ್ದರೆ ಆ. 1ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ನೋಡಿ ಎಷ್ಟು ಖುಷಿ ಪಡುತ್ತಿದ್ದ ಏನೋ ಗೊತ್ತಿಲ್ಲ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ಪಾರ್ಥಸಾರಥಿ ಜೀವನದ ಉದ್ದಕ್ಕೂ ಹಗಲು ರಾತ್ರಿ ಎನ್ನದೇ ಸಮುದಾಯಕ್ಕಾಗಿ ದುಡಿದ ವ್ಯಕ್ತಿ. ತನ್ನ ಸಮುದಾಯವನ್ನು ಸ್ವಾರ್ಥಕ್ಕಾಗಿ ಹೆಚ್ಚಾಗಿ ಬಳಸಿಕೊಳ್ಳುವ ಇಂದಿನ ದಿನಗಳಲ್ಲಿ ಒಳಗೆ ನೋವಿದ್ದರೂ ಸದಾ ಸಮಾಜದ ಸಂಘಟನೆ, ಬೆಳವಣಿಗೆ ಬಗ್ಗೆ ಚಿಂತಿಸುತ್ತಿದ್ದ ಪಾರ್ಥಸಾರಥಿ ಇದೀಗ ಮರೆಯಾಗಿದ್ದು, ಸಮುದಾಯದಕ್ಕೆ ಬಹು ದೊಡ್ಡ ನಷ್ಟ ಎಂದರು.ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಡಿ. ಡೊಮಿನಿಕ್ ಮಾತನಾಡಿ, ತಾನು, ತಮ್ಮವರು, ತಮ್ಮ ಮನೆಗಿಂಥ ಸಮಾಜದ ಬಗ್ಗೆಯೇ ಚಿಂತಿಸುತ್ತಿದ್ದ ಅವರಿಗೆ ಶಾಪವಾಗಿ ಕಾಡಿ, ಬಲಿ ಪಡೆದಿದ್ದು ಅವರ ಆರೋಗ್ಯದ ದುಸ್ಥಿತಿ ಎಂದರು.ಪ್ರಾರ್ಥಸಾರಥಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತ ಡಾ.ಎಲ್. ಕೃಷ್ಣಮೂರ್ತಿ, ಗ್ರಂಥಾಲಯ ಇಲಾಖೆ ಉಪ ನಿರ್ದೇಶಕಿ ಸಿ.ಎಸ್. ಪೂರ್ಣಿಮಾ, ದಸಂಸ- ಭೀಮವಾದ ರಾಜ್ಯ ಸಂಚಾಲಕ ಆರ್. ಮೋಹನ್ ರಾಜ್, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಪ್ರಾರ್ಥಸಾರಥಿ ಅವರ ಪತ್ನಿ ಸುಗಂಧಿನಿ ಪಾರ್ಥಸಾರಥಿ ಇದ್ದರು.

Share this article