- ಚಿಕ್ಕಮಗಳೂರು ನಗರದಲ್ಲಿ 46 ಸೋಲಾರ್ ಪವರ್ ಕ್ಯಾಮರಾ ಅಳವಡಿಕೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಾಹನ ಸಂಚಾರ ನಿಯಮಗಳ ಉಲ್ಲಂಘನೆಗಳಲ್ಲಿ ಸ್ವಯಂಚಾಲಿತ ದಂಡ ನಿರ್ವಹಣೆ, ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಐಸಿಸಿಸಿ (ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್) ಯೊಂದಿಗೆ ಒಟ್ಟು 46 ಸೋಲಾರ್ ಪವರ್ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಕ್ಯಾಮರಾ ಕಣ್ಗಾವಲು ಸಂಪರ್ಕ ಜಾಲವನ್ನು ಚಿಕ್ಕಮಗಳೂರು ನಗರದೆಲ್ಲೆಡೆ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಪೋಲಿಸ್ ವರಿಷ್ಟಾಧಿಕಾರಿ ಡಾ,ವಿಕ್ರಮ್ ಅಮಟೆ ತಿಳಿಸಿದ್ದಾರೆ.
ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಆಯ್ದ ಸೂಕ್ಷ್ಮ ಪ್ರದೇಶಗಳಲ್ಲಿ ವಾಹನ ಸಂಚಾರ ನೀತಿ ನಿಯಮ ಗಳ ಉಲ್ಲಂಘನೆ, ಸಂಚಾರದಟ್ಟಣೆ ಮತ್ತು ಅಪರಾಧ ಪ್ರಕರಣ ನಿಯಂತ್ರಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯ ದೂರದೃಷ್ಟಿಯೊಂದಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರ ಸಹಕಾರ, ಮೆಸ್ಕಾಂ ಸಹಯೋಗದಲ್ಲಿ ಸಿಎಸ್‌ಆರ್ (ಎಐ) ಅಡಿ ಅಂದಾಜು ₹1.75 ಕೋಟಿ ರು. ಯೋಜನಾ ವೆಚ್ಚದಲ್ಲಿ ಎರಡು ಹಂತಗಳಲ್ಲಿ ಐಸಿಸಿಸಿ (ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್) ಯೊಂದಿಗೆ ಸೋಲಾರ್ ಪವರ್ ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕ್ಯಾಮರಾ ಕಣ್ಗಾವಲು ಸಂಪರ್ಕ ಜಾಲ ವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.
ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಮೊದಲನೇ ಹಂತದಲ್ಲಿ ₹95 ಲಕ್ಷ ಗಳ ಮಂಜೂರಾಗಿದ್ದು, ಸ್ಥಳೀಯ ಚಿಪ್ ಸ್ಕೇಪ್ ಕಂಪನಿಗೆ ಕಾರ್ಯಾದೇಶ ನೀಡಲಾಗಿದೆ. ಯೋಜನೆ ಮೊದಲ ಹಂತದ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದಿದ್ದಾರೆ.ಮೊದಲನೇ ಹಂತನಗರದ ಪ್ರಮುಖ ಸ್ಥಳಗಳಾದ ಎಐಟಿ ಸರ್ಕಲ್, ಆಜಾದ್ ಪಾರ್ಕ್, ಹನುಮಂತಪ್ಪ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್, ಟೌನ್ ಕ್ಯಾಂಟೀನ್ ಸರ್ಕಲ್, ರಾಂಪುರ ಸರ್ಕಲ್ ಮತ್ತು ಪೈ ಸರ್ಕಲ್ ಕಡೆಗಳಲ್ಲಿ 4 ಬಾಕ್ಸ್ ಕ್ಯಾಮರಾ ಹಾಗೂ 20 ಐದು ಮೆಗಾ ಫಿಕ್ಸಲ್ ಮೋಟಾರೈಸ್ಡ್ ಬುಲೆಟ್ ಕ್ಯಾಮರಾ ಸೇರಿದಂತೆ 24 ( ಆರ್ಟಿಫಿಶಿಯಲ್ ಇಂಟಲಿಜೆನ್ಸ್ ) ವಿಶೇಷತೆ ಹೊಂದಿದ ಕ್ಯಾಮರಾಗಳನ್ನು ಅಳವಡಿಸಲಾಗುವುದು.
ಕೇಬಲ್ ನೆಟ್ ವರ್ಕ್‌ನೊಂದಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿನ ಕಂಟ್ರೋಲ್ ಸೆಂಟರ್ ಗೆ ಕೇಂದ್ರೀಕೃತ ವ್ಯವಸ್ಥೆ ಅಡಿ ವಿಡಿಯೋ ಮ್ಯಾನೇಜ್ ಮೆಂಟ್ ಸರ್ವರ್‌ಗಳಿಗೆ ಸಂಪರ್ಕ ಕಲ್ಪಿಸಿ ನೆಟ್‌ವರ್ಕ್ ವಿಡಿಯೋ ರೆಕಾರ್ಡರ್ ಗಳಲ್ಲಿ ದತ್ತಾಂಶ ಸಂಗ್ರಹಿಸಿ ನಿರ್ವಹಣೆ ಮಾಡಲಾಗುತ್ತದೆ.ಎರಡನೇ ಹಂತದ ಕಾಮಗಾರಿಯಲ್ಲಿ ನಗರದ ಪ್ರಮುಖ ಸ್ಥಳಗಳಾದ ಎನ್‌ಎಂಸಿ ಸರ್ಕಲ್, ಅಂಡೆ ಚತ್ರ, ಮಾರ್ಕೆಟ್ ರಸ್ತೆ, ಉಪ್ಪಳ್ಳಿ, ಬದ್ರಿಯಾ ಸರ್ಕಲ್, ಟಿಪ್ಪು ಸರ್ಕಲ್, ಸಂತೆ ಮೈದಾನ ಕಡೆಗಳಲ್ಲಿ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ ಮಾಡುವ 20 ಐದು ಮೆಗಾ ಪಿಕ್ಸೆಲ್ ಬುಲೆಟ್ ಕ್ಯಾಮರ ಸೇರಿದಂತೆ ಒಟ್ಟು 22 ಕ್ಯಾಮರಾ ಅಳವಡಿಸಲಾಗುವುದು.-- ಬಾಕ್ಸ್ --ಯೋಜನೆಯ ಪ್ರಮುಖ ಉದ್ದೇಶಗಳು1) ಆಡ್ವಾನ್ಸಡ್ ವಿಡಿಯೋ ಅನಾಲಿಟಿಕ್ಸ್ ಹಾಗೂ ಎಎನ್‌ಪಿಆರ್ ಸಾಫ್ಟ್ ವೇರ್ ಬಳಸಿ ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಾದ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು, ಟ್ರಿಪಲ್ ರೈಡಿಂಗ್, ಸ್ಪೀಡ್ ಲಿಮಿಟ್ ಮೀರಿ ವಾಹನ ಚಾಲನೆ ಇತ್ಯಾದಿ ಪ್ರಕರಣಗಳಲ್ಲಿ ಇ -ಚಲನ್ ದಂಡ ವಸೂಲಿ ವ್ಯವಸ್ಥೆ ಇರಲಿದೆ.ಇ-ಚಲನ್ ಸರ್ವರ್ ಸಾಫ್ಟ್ ವೇರ್ ಆರ್‌ಟಿಒ ಸರ್ವರ್ ಸಾಫ್ಟ್ ವೇರ್ ನೊಂದಿಗೆ ಲಿಂಕ್ ಆಗಿರಲಿದ್ದು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ಹೆಸರು, ವಿಳಾಸ ಮತ್ತು ಕಾಂಟಾಕ್ಟ್ ವಿವರ ಪಡೆದು ದಂಡದ ಮೊತ್ತ ಹೊಂದಿರುವ ರಸೀದಿಯನ್ನು ಸಂಬಂಧಪಟ್ಟವರಿಗೆ ಇ-ಮೇಲ್, ವಾಟ್ಸಾಪ್ಪ್ ಹಾಗೂ ರಿಜಿಸ್ಟರ್ ಪೋಸ್ಟ್ ನಲ್ಲಿ ಅವರ ಮನೆಗಳಿಗೆ ನೋಟೀಸ್ ಕಳುಹಿಸುವ ವ್ಯವಸ್ಥೆ. ದಂಡದ ಮೊತ್ತವನ್ನು ಪಾವತಿಸುವವರೆಗೂ ಆರ್‌ಸಿ ಬುಕ್ ನಲ್ಲಿ ಬಾಕಿ ಇರಲಿದ್ದು ಮುಂದಿನ ಯಾವುದೇ ಪ್ರಕ್ರಿಯೆಗಳಿಗೆ ಅಡಚಣೆ ಆಗಲಿದೆ.2) ಯಾವುದಾದರೂ ಘಟನೆ ಅಥವಾ ಪ್ರಕರಣಗಳಿಗೆ ಸಂಬಂಧಿಸಿದ ಲೈವ್ ಆ್ಯಂಡ್ ರೆಕಾರ್ಡೆಡ್ ವಿಡಿಯೋ ಫುಟೇಜ್ ಪರಿಶೀಲಿಸಿ ಕಾನೂನು ಕ್ರಮ ಜರುಗಿಸುವುದು.3) ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಜನಸಂದಣಿ, ಮೆರವಣಿಗೆ ಗುಂಪು ಗುಂಪಾಗಿ ಜನರು ಸೇರುವ ಕಡೆ ನಿಗಾವಹಿಸುವ ಸಲುವಾಗಿ ಹಾಗೂ ತಂತ್ರಜ್ಞಾನದ ನೆರವಿನೊಂದಿಗೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಈ ಯೋಜನೆ ಸಹಕಾರಿ. 20 ಕೆಸಿಕೆಎಂ 3ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಮೇಲೆ ನಿಗಾ ಇಡಲು ನೂತನ ತಂತ್ರಜ್ಞಾನ ಹೊಂದಿರುವ ಕ್ಯಾಮರಾಗಳು ಚಿಕ್ಕಮಗಳೂರು ನಗರದಲ್ಲಿ ಅಳವಡಿಸಿರುವುದು.