ವೈದ್ಯೆ ಕೊಲೆ ಖಂಡಿಸಿ ಕೊಪ್ಪಳದಲ್ಲಿ ಮೊಂಬತ್ತಿ ಮೆರವಣಿಗೆ

KannadaprabhaNewsNetwork | Published : Aug 17, 2024 12:48 AM

ಸಾರಾಂಶ

ಕೊಪ್ಪಳ ನಿವಾಸಿ ವೈದ್ಯರ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘವು ಇತ್ತೀಚಿಗೆ ಕೊಪ್ಪಳದಲ್ಲಿ ಶಾಂತಿಯುತ ಕ್ಯಾಂಡಲ್ ಮಾರ್ಚ್ ನಡೆಸಿ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದೆ.

ಕೋಲ್ಕತ್ತಾ ಆಸ್ಪತ್ರೆಯಲ್ಲಿ ವೈದ್ಯೆ ಕೊಲೆ ಪ್ರಕರಣ: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಕೊಪ್ಪಳ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಖಂಡನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೋಲ್ಕತ್ತಾದ ಆರ್‌ಜಿಆರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಜರುಗಿದ ಹಿನ್ನೆಲೆಯಲ್ಲಿ ಕೊಪ್ಪಳ ನಿವಾಸಿ ವೈದ್ಯರ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘವು ಇತ್ತೀಚಿಗೆ ಕೊಪ್ಪಳದಲ್ಲಿ ಶಾಂತಿಯುತ ಕ್ಯಾಂಡಲ್ ಮಾರ್ಚ್ ನಡೆಸಿ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದೆ.

ಕೋಲ್ಕತ್ತಾದ ಆರ್‌ಜಿಆರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಘೋರ ಅಪರಾಧವನ್ನು ಕೊಪ್ಪಳ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ. ಈ ಪ್ರಕರಣವು ಎಲ್ಲರನ್ನೂ ಅಘಾತವನ್ನುಂಟು ಮಾಡಿದ್ದು, ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ವಿಳಂಬ ಮಾಡದೆ ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿದೆ. ಎಲ್ಲ ವೈದ್ಯಕೀಯ ಸಂಸ್ಥೆಗಳಲ್ಲಿ ಸುರಕ್ಷತಾ ಸುಧಾರಣೆಗಳ ಅನುಷ್ಠಾನಕ್ಕೆ ಒತ್ತಾಯಿಸಿದೆ. ಭಾರತೀಯ ವೈದ್ಯಕೀಯ ಸಂಘದೊಂದಿಗೆ ಕೊಪ್ಪಳ ನಗರದ ಗಂಜ್ ವೃತ್ತದಿಂದ ಜಿಲ್ಲಾ ಆಸ್ಪತ್ರೆ ವರೆಗೆ ಶಾಂತಿಯುತ ಮೊಂಬತ್ತಿ ಮೆರವಣಿಗೆ ನಡೆಸಿದೆ.

ಮೆರವಣಿಗೆಯಲ್ಲಿ ಐಎಂಎ ಕೊಪ್ಪಳ ಶಾಖೆಯ ಅಧ್ಯಕ್ಷ ಡಾ. ಮಹೇಶ್, ಕಾರ್ಯದರ್ಶಿ ಡಾ. ಗೋಪಾಲ್, ಕಿಮ್ಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ವೇಣುಗೋಪಾಲ್ ಕೆ., ಎಲ್ಲ ಎಚ್‌ಒಡಿ, ಸಿಬ್ಬಂದಿ, ಕೊಪ್ಪಳ ನಿವಾಸಿ ವೈದ್ಯರ ಸಂಘದ ಪ್ರತಿನಿಧಿಗಳು, ಡಾ. ನವೀದ್ ಖಾನ್, ಡಾ. ಪ್ರಿಯಾಂಕಾ ಗೌಡ, ಡಾ. ಶರ್ಣಪ್ಪ, ಡಾ. ಸಾಯಿ ಕಿರಣ್, ಡಾ. ಗಣೇಶ್, ಡಾ. ಪ್ರಭಾಕರ್, ಡಾ. ಐಶ್ವರ್ಯ, ಹೌಸ್ ಸರ್ಜನ್‌ಗಳಾದ ಪ್ರಜ್ವಲ್, ಸಿಂಧುರಾಣಿ, ದರ್ಶನ್ ಹಾಗೂ ಮತ್ತಿತರರಿದ್ದರು.

Share this article