ಕಾರು ವ್ಯಾಪಾರಿ ಅಪಹರಣ: ದುಷ್ಟರ ಕೂಟ ಅಂದರ್‌

KannadaprabhaNewsNetwork |  
Published : May 13, 2024, 12:02 AM IST
ಫೋಟೋ- ಕಾರ್‌ ಗ್ಯಾಂಗ್‌ ಅರೆಸ್ಟ್‌ | Kannada Prabha

ಸಾರಾಂಶ

ದೇವನೂರ ಗ್ರಾಮದ ಕಾರು ವ್ಯಾಪಾರಿ ಅರ್ಜುನ್ ಮಡಿವಾಳ ಮತ್ತು ಆತನ ಜೊತೆಗೆ ಬಂದಿದ್ದ ರಹೇಮಾನ್ ಹಾಗೂ ಸಮೀರುದ್ದಿನ್ ಎಂಬವರನ್ನು ಕೂಡಿ ಹಾಕಿ, ವಿವಸ್ತ್ರಗೊಳಿಸಿ ಮರ್ಮಾಂಗಕ್ಕೆ ಕರೆಂಟ್ ಶಾಕ್‌ ಕೊಟ್ಟು ಚಿತ್ರಹಿಂಸೆ. 10-12 ಮಂದಿಯ ಗ್ಯಾಂಗ್‌ನಿಂದ ದುಷ್ಕೃತ್ಯ. ಕಲಬುರಗಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯಲ್ಲಿ ಹಣಕ್ಕಾಗಿ ಬೇಡಿಕೆಯಿಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿ ಮತ್ತು ಇತರ ಇಬ್ಬರನ್ನು ವಿವಸ್ತ್ರಗೊಳಿಸಿ ಚಿತ್ರಹಿಂಸೆ ನೀಡಿದ ಗ್ಯಾಂಗ್‌ನ ಆರೋಪಿಗಳನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ನಡೆದಂತಹ ಈ ಅಮಾನವೀಯ ಕೃತ್ಯದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ವ್ಯಾಪಾರಿ ಮತ್ತು ಆತನ ಜೊತೆಗಿದ್ದ ಇಬ್ಬರನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಲಾಗಿತ್ತು. ಇದೀಗ ಕಲಬುರಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಖದೀಮರನ್ನೆಲ್ಲ ಬಂಧಿಸಿದ್ದಾರೆ.

ಕಲಬುರಗಿ ನಗರದ ಹಾಗರಗಾ ಕ್ರಾಸ್ ಸಮೀಪದ ಇನಾಮದಾರ್ ಕಾಲೇಜು ಸಮೀಪದ ಮನೆಯೊಂದರಲ್ಲಿ ಸೇಡಂ ತಾಲೂಕಿನ ದೇವನೂರ ಗ್ರಾಮದ ಕಾರು ವ್ಯಾಪಾರಿ ಅರ್ಜುನ್ ಮಡಿವಾಳ ಮತ್ತು ಆತನ ಜೊತೆಗೆ ಬಂದಿದ್ದ ರಹೇಮಾನ್ ಹಾಗೂ ಸಮೀರುದ್ದಿನ್ ಎಂಬವರನ್ನು ಕೂಡಿ ಹಾಕಿ, ವಿವಸ್ತ್ರಗೊಳಿಸಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಡಲಾಗಿದೆ. ಇಮ್ರಾನ್, ಮತೀನ್ ಪಟೇಲ್, ಜೀಯಾವುಲ್ಲಾ ಹುಸೇನಿ, ಮಹ್ಮದ್ ಅಫ್ಜಲ್, ರಮೇಶ್ ಸೇರಿದಂತೆ 10-12 ಜನರ ಗ್ಯಾಂಗ್ ಈ ದುಷ್ಕೃತ್ಯ ಎಸಗಿದೆ.50 ಸಾವಿರ ರು. ಹಣಕ್ಕೆ ಬೇಡಿಕೆ ಇಟ್ಟಿತ್ತು ಗ್ಯಾಂಗ್‌: ಇದೇ ತಿಂಗಳು 4ರಂದು ಕಾರು ಮಾರುವುದಿದೆ, ನೋಡಲು ಬನ್ನಿ ಎಂದು ಗ್ಯಾಂಗ್​​ನ ರಮೇಶ್ ಎಂಬಾತ ಅರ್ಜುನ್​​ನನ್ನು ಕರೆಸಿಕೊಂಡು ರೂಂನಲ್ಲಿ ಲಾಕ್ ಮಾಡಿ ದುಡ್ಡಿಗೆ ಬೇಡಿಕೆಯಿಟ್ಟು ನಿರಂತರವಾಗಿ ಮಾರನೇ ದಿನದವರೆಗೂ ಕರೆಂಟ್ ಶಾಕ್ ಕೊಟ್ಟಿದ್ದರು. ಅರ್ಜುನ್ ಮಡಿವಾಳ್​​ಗೆ ಕರೆಂಟ್ ಟಾರ್ಚರ್ ಕೊಟ್ಟು 50 ಸಾವಿರ ಹಣ ಆನ್‌ಲೈನ್ ಮೂಲಕ ಪಡೆದಿದ್ದಾರಂತೆ. ಅಲ್ಲದೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ವ್ಯಾಪಾರಿಯ ರಕ್ಷಣೆ: ವ್ಯಾಪಾರಿಗೆ ಚಿತ್ರಹಿಂಸೆ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಅಲರ್ಟ್ ಆದ ಗುಲ್ಬರ್ಗಾ ವಿವಿ ಠಾಣೆ ಪೊಲೀಸರು, ಮನೆ ಮೇಲೆ ದಾಳಿ ನಡೆಸಿ, ಕಾರು ವ್ಯಾಪಾರಿ ಅರ್ಜುನ್ ಮಡಿವಾಳ ಸೇರಿ ಮೂವರನ್ನು ರಕ್ಷಿಸಿದ್ದಾರೆ.

ಆರೋಪಿಗಳಾದ ಇಮ್ರಾನ್, ಮತೀನ್ ಪಟೇಲ್, ಜೀಯಾವುಲ್ಲಾ ಹುಸ್ಸೇನಿ, ಮಹ್ಮದ್ ಅಫ್ಹಲ್, ರಮೇಶ್ ಸೇರಿ 7 ಜನರನ್ನು ಬಂಧಿಸಲಾಗಿದೆ. ಪೊಲೀಸ್ ದಾಳಿ ವೇಳೆ ಉಳಿದ ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಖಾಕಿ ಬಲೆ ಬೀಸಿದೆ. ಗುಲ್ಬರ್ಗ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆರೋಪಿಗಳು ಕಾರುಗಳನ್ನು ಕಳ್ಳತನ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡೊ ಕಾಯಕವಾಗಿಸಿಕೊಂಡವರು. ಬಳಿಕ ಕಾರನ್ನು ಖರೀದಿ ಮಾಡಿದ ವ್ಯಕ್ತಿಯನ್ನು ಕಳ್ಳತನ ಕಾರು ಖರೀದಿ ಮಾಡಿದ್ದೀಯಾ ಅಂತಾ ಹೆದರಿಸಿ ಬ್ಲಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಬೆದರಿಸುತ್ತಾರೆ. ದುಡ್ಡು ಕೊಡದಿದ್ದಾಗ ಕ್ರೂರವಾಗಿ ಟಾರ್ಚರ್ ಕೊಟ್ಟು ಹಣ ವಸೂಲಿ ಮಾಡುವುದು ಈ ಗ್ಯಾಂಗ್​ನ ದಂಧೆ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೂ ಈ ರೀತಿ ಕಿರುಕುಳ ನೀಡಿ ಹಣ ವಸೂಲಿ ಮಾಡಿದ್ದರಂತೆ. ಆರೋಪಿ ಇಮ್ರಾನ್ ಪಟೇಲ್, ಮತೀನ್ ಪಟೇಲ್ ಮೇಲೆ ಹಲವು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ