ಮಗುವಿನ ಪಾಲನೆಯಲ್ಲಿ ಆರೈಕೆದಾರರ ಪಾತ್ರ ದೊಡ್ಡದು: ಎಂ.ನಾಗಮಣಿ

KannadaprabhaNewsNetwork |  
Published : Dec 26, 2024, 01:00 AM IST
ಸಿಕೆಬಿ-6 ಗುಡಿಬಂಡೆ ತಾಲ್ಲೂಕು ಪಂಚಾಯಿತಿ  ಸಾಮರ್ಥ್ಯ ಸೌಧದಲ್ಲಿ “ಕೂಸಿನ ಮನೆ’ಕೇರ್‌ ಟೇಕರ್ಸ್‌ ಎರಡನೇ ಹಂತದ  ತರಬೇತಿ ಶಿಬಿರದಲ್ಲಿ ತಾ.ಪಂ.ಇಓ ಎಂ.ನಾಗಮಣಿ ಮಾತನಾಡಿದರು | Kannada Prabha

ಸಾರಾಂಶ

ತಾವು ಲಾಲನೆ- ಪಾಲನೆ ಮಾಡುವ ಜೊತೆಗೆ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಕೊಟ್ಟು ಅವರನ್ನು ಆರೈಕೆ ಮಾಡಬೇಕು, ಇದರಿಂದಾಗಿ ಮಕ್ಕಳ ಪೌಷ್ಟಿಕಾಂಶದ ಕೊರತೆಯೂ ನೀಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳ ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಕಾರ್ಯಕ್ರಮವನ್ನು ಜಾರಿಗೊಳಿಸಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತರಬೇತಿ ಪಡೆದ ತಾವೆಲ್ಲರೂ ಇಲಾಖೆ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು. ಶಿಶುಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕು. ಮಕ್ಕಳ ಆಹಾರ, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಗುಡಿಬಂಡೆ ತಾಲೂಕು ಪಂಚಾಯತಿ ಇಒ ಎಂ.ನಾಗಮಣಿಯವರು ತಿಳಿಸಿದರು.

ಜಿಲ್ಲೆಯ ಗುಡಿಬಂಡೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ‘ಕೂಸಿನ ಮನೆ’ಯ ಎರಡನೇ ಹಂತದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಈ ತರಬೇತಿಯು ಏಳು ದಿನಗಳು ನಡೆಯುತ್ತದೆ. ಇಲ್ಲಿ ಕಲಿಸುವ ಪ್ರತಿಯೊಂದು ವಿಷಯಗಳು ಮಹತ್ವದಾಗಿದೆ. ಆದ್ದರಿಂದ ತರಬೇತಿ ಪಡೆದುಕೊಳ್ಳುತ್ತಿರುವ ಶಿಬಿರಾರ್ಥಿಗಳು ಪ್ರತಿಯೊಂದನ್ನು ಅರ್ಥಮಾಡಿಕೊಳ್ಳಬೇಕು. ಅಂದಾಗ ಮಾತ್ರ ನೀವು ಕೂಸಿನ ಮನೆ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನರೇಗಾ ಕೂಲಿಕಾರ್ಮಿಕರು ಕೆಲಸದ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಬರುವುದು ಮತ್ತು ಬಡ ಕಾರ್ಮಿಕರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗುವುದರಿಂದ ಮಕ್ಕಳ ಪಾಲನೆ, ಪೋಷಣೆ ಕಷ್ಟಕರವಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ಒಂದು‘ಕೂಸಿನ ಮನೆ’ಪ್ರಾರಂಭಿಸಲಾಗಿದೆ. ಹೀಗಾಗಿ 3 ವರ್ಷದೊಳಗಿನ ಮಕ್ಕಳನ್ನು ಈ ಕೂಸಿನ ಮನೆಯಲ್ಲಿ ಆರೈಕೆ ಮಾಡಲಾಗುತ್ತದೆ ಎಂದರು.

ತಾವು ಲಾಲನೆ- ಪಾಲನೆ ಮಾಡುವ ಜೊತೆಗೆ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಕೊಟ್ಟು ಅವರನ್ನು ಆರೈಕೆ ಮಾಡಬೇಕು, ಇದರಿಂದಾಗಿ ಮಕ್ಕಳ ಪೌಷ್ಟಿಕಾಂಶದ ಕೊರತೆಯೂ ನೀಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳ ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರ ಕೂಸಿನ ಮನೆ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

ಮೇಲ್ವಿಚಾರಕಿ ಸರೋಜಮ್ಮ ಮಾತನಾಡಿ, ಪೋಷಕರು ಕೂಸಿನ ಮನೆಯಲ್ಲಿ ಮಗುವನ್ನು ಬಿಟ್ಟು ಹೋದಾಗ ಯಾವ ರೀತಿ ಪಾಲನೆ, ಪೋಷಣೆ ಮಾಡಬೇಕು ಎಂಬುವುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ಆದ್ದರಿಂದ ಶಿಬಿರಾರ್ಥಿಗಳ ಪ್ರತಿಯೊಂದು ವಿಷಯವನ್ನೂ ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಷಯ ನಿರ್ವಾಹಕ ಸುಬ್ರಮಣ್ಯ, ಐಇಸಿ ಸಂಯೋಜಕರಾದ ರಾಮಾಂಜಿ, ಮೇಲ್ವಿಚಾರಕಿ ಗಾಯತ್ರಿ, ಡಿಟಿಸಿ ಶ್ರೀನಿವಾಸ್ , ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ