ಬೇರೆ ಧರ್ಮದವರ ಭಾವನೆಗೆ ದಕ್ಕೆ ಬಾರದಂತೆ ಹಬ್ಬ ಆಚರಿಸಿ

KannadaprabhaNewsNetwork |  
Published : May 25, 2026, 02:30 AM IST
ಸ | Kannada Prabha

ಸಾರಾಂಶ

ಹಬ್ಬಗಳನ್ನು ಹಬ್ಬದ ರೀತಿ ಸಂತೋಷದಿಂದ, ಶಾಂತಿಯುತವಾಗಿ ಆಚರಿಸಬೇಕು.

ಹರಪನಹಳ್ಳಿ: ಬೇರೆ ಧರ್ಮದವರ ಭಾವನೆಗಳಿಗೆ ದಕ್ಕೆ ಬಾರದಂತೆ ಹಬ್ಬ ಆಚರಿಸಬೇಕು ಎಂದು ಇಲ್ಲಿಯ ಡಿವೈಎಸ್ಪಿ ಡಾ.ಸಂತೋಷ ಚಹ್ವಾಣ ತಿಳಿಸಿದ್ದಾರೆ.

ಅವರು ನಗರದ ಪೋಲೀಸ್‌ ಠಾಣೆಯಲ್ಲಿ ಬಕ್ರಿದ್ ಅಂಗವಾಗಿ ಆಯೋಜಿಸಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು. ಹಬ್ಬಗಳನ್ನು ಹಬ್ಬದ ರೀತಿ ಸಂತೋಷದಿಂದ, ಶಾಂತಿಯುತವಾಗಿ ಆಚರಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳಿಗೆಅವಕಾಶ ನೀಡಬಾರದು. ಅಂತವುಗಳನ್ನು ವೈರಲ್ ಮಾಡಬಾರದು ಎಂದು ಹೇಳಿದರು. ಸುಳ್ಳು ಮಾಹಿತಿ ಹಬ್ಬಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ನೀವು ನೀವೇ ಕಚ್ಚಾಡಬಾರದು, ಹಬ್ಬಗಳ ಆಚರಣೆಗೆ ನಿಮ್ಮ ಸಹಕಾರ ನಮಗೆ ಬಹಳ ಮುಖ್ಯ ಎಂದು ಹೇಳಿದರು.

ವೃತ್ತ ನಿರೀಕ್ಷಕ ಮಹಾಂತೇಶ ಸಜ್ಜನ್‌ ಮಾತನಾಡಿ, ಏನೇ ಸಮಸ್ಯೆಗಳಿದ್ದರೂ ನಮ್ಮ ಗಮನಕ್ಕೆ ತನ್ನಿ. ಸಾಕಷ್ಟು ಸಿಬ್ಬಂದಿ ನೇಮಕ ಮಾಡುತ್ತೇವೆ. ಪರಸ್ಪರ ಶಾಂತಿ, ಸೌಹಾರ್ದದಿಂದ ಬಕ್ರಿದ್‌ ಆಚರಿಸಬೇಕು ಎಂದು ತಿಳಿಸಿದರು.

ನಗರಸಭಾ ಮಾಜಿ ಸದಸ್ಯ ಡಿ.ಅಬ್ದುಲ್‌ ರಹಿಮಾನ್‌ ಸಾಹೇಬ್ ಮಾತನಾಡಿ, ಇನ್ನೊಬ್ಬ ಸಮುದಾಯದವರಿಗೆ ತೊಂದರೆಯಾಗದಂತೆ ಬಕ್ರಿದ್ ಆಚರಿಸಲಾಗುವುದು. ನಾವು ಸಹ ಅಲ್ಲಲ್ಲಿ ವಾಲಂಟರಿಯರ್ಸ್ ನೇಮಕ ಮಾಡುತ್ತೇವೆ. ಗಲಾಟೆ ಗದ್ದಲಕ್ಕೆ ಅವಕಾಶ ನೀಡಲ್ಲ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಓಂಕಾರಗೌಡ ಮಾತನಾಡಿ, ಹರಪನಹಳ್ಳಿ ಶಾಂತಿಗೆ ಹೆಸರಾದ ತಾಲೂಕಾಗಿದೆ. ಶಾಂತಿಯುತವಾಗಿ ಹಬ್ಬ ಆಚರಿಸೋಣ ಎಂದು ಹೇಳಿದರು. ಖಾಜಿ ಮುಸ್ತಾಫ ಮಾತನಾಡಿದರು. ಪಿಎಸ್‌ ಐ ಶಂಭುಲಿಂಗ ಹಿರೇಮಠ ಸ್ವಾಗತಿಸಿದರು. ಹಲುವಾಗಲು ಪಿಎಸ್‌ ಐ ಕಿರಣಕುಮಾರ, ಅರಸೀಕೆರೆ ಪಿಎಸ್‌ ಐ ವಿಜಯಕೃಷ್ಣ, ಚಿಗಟೇರಿ ಪಿಎಸ್ ಐ ನಾಗರತ್ನ, ಹರಪನಹಳ್ಳಿ ಪಿಎಸ್‌ ಐ ಶಂಭುಲಿಂಗ ಸಿ.ಹಿರೇಮಠ, ನಗರಸಭೆ ಆರೋಗ್ಯ ನಿರೀಕ್ಷಕಿ ಮುಸ್ಲಿಂ ಸಮಾಜದ ಮುಖಂಡರು ಹಾಜರಿದ್ದರು.

24ಎಚ್‌ ಆರ್‌ ಪಿ 1

ಹರಪನಹಳ್ಳಿಯ ಪೋಲೀಸ್‌ ಠಾಣೆಯಲ್ಲಿ ಬಕ್ರಿದ್‌ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಡಾ.ಸಂತೋಷ ಚವ್ಹಾಣ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಣಮಟ್ಟದ ಶಿಕ್ಷಣವೇ ಸರ್ಕಾರಿ ಶಾಲೆಗಳ ಮೂಲ ಆಶಯ: ನಾಗೇಂದ್ರಪ್ಪ
ಆರೋಗ್ಯಪೂರ್ಣ ಜೀವನಕ್ಕೆ ಬ್ಲಡ್ಡು, ದುಡ್ಡು ಬೇಕು-ಶಿವಬಸವ ಶ್ರೀ