ರೋಗ ತಡೆಗೆ ಆಹಾರ, ಜೀವನಶೈಲಿ ಬದಲಾಗಲಿ: ಡಾ. ಸಿ. ತ್ಯಾಗರಾಜ

KannadaprabhaNewsNetwork | Published : Dec 19, 2024 12:32 AM

ಸಾರಾಂಶ

ಶಿಗ್ಗಾಂವಿ ಪಟ್ಟಣದ ಪಾಂಡುರಂಗ ದೇವಸ್ಥಾನದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಮೂಲವ್ಯಾಧಿ, ಕೂದಲು ಸಮಸ್ಯೆ, ಹಿಮ್ಮಡಿ ನೋವು ಹಾಗೂ ಇತರ ರೋಗಗಳಿಗೆ ಸಂಬಂಧಿಸಿದಂತೆ ಸುಮಾರು ೩೦೦ ರೋಗಿಗಳಿಗೆ ಉಚಿತ ತಪಾಸಣೆ ಮಾಡಿ, ಉಚಿತ ಔಷಧ ನೀಡಲಾಯಿತು.

ಶಿಗ್ಗಾಂವಿ: ಆಯಾ ಪ್ರಕೃತಿ ಅನುಸಾರ ಆಹಾರ-ವಿಹಾರ, ದೈನಂದಿನ ಜೀವನಶೈಲಿಯಲ್ಲಿ ಮಾರ್ಪಾಡು ಹೊಂದಿದರೆ ರೋಗ ಬಾರದ ಹಾಗೆ ತಡೆಯಬಹುದು ಎಂದು ಆಯುರ್ವೇದ ಮಹಾವಿದ್ಯಾಲಯ ಶಲ್ಯ ತಂತ್ರ ವಿಭಾಗದ ಮುಖ್ಯಸ್ಥ ಡಾ. ಸಿ. ತ್ಯಾಗರಾಜ ಹೇಳಿದರು.

ಪಟ್ಟಣದ ಪಾಂಡುರಂಗ ದೇವಸ್ಥಾನದಲ್ಲಿ ನಾಮದೇವ ಸಿಂಪಿ ಸಮಾಜ ಹಾಗೂ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಶಲ್ಯ ತಂತ್ರ ವಿಭಾಗದ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆಯುರ್ವೇದದ ಪದ್ಧತಿ ಮೂಲ ಉದ್ದೇಶ ರೋಗ ಬಾರದ ಹಾಗೆ ತಡೆಯುವುದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಆಯುಷ್‌ ಮಂತ್ರಾಲಯ ''''ದೇಶ ಕಾ ಪ್ರಕೃತಿ ಪರೀಕ್ಷಾ ಅಭಿಯಾನ'''' ಆರಂಭಿಸಲಾಯಿತು ಎಂದರು.

ರಾಜ್ಯ ಸಿಂಪಿ ಸಮಾಜದ ಕಾರ್ಯಾಧ್ಯಕ್ಷ ಕೆದರಪ್ಪ ಬಗಡೆ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ಮೇಲೆ ಶೇ. ೨೦ರಷ್ಟಾದರೂ ಜನರಿಗೆ ಸೇವೆ ಸಲ್ಲಿಸಿದಾಗ ನಮ್ಮ ಜೀವನ ಸಾರ್ಥಕ ಎಂದು ಹೇಳಿದರು.

ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಸುರೇಶ್ ಮುಳೆ, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಬಗಡೆ, ಪ್ರಾಧ್ಯಾಪಕ ಡಾ. ಪ್ರಭಾಕರ್ ತಾಸಿನ್, ಡಾ. ರಂಜಿತ್ ಕುಮಾರ್ ಇದ್ದರು.ಮೂಲವ್ಯಾಧಿ, ಕೂದಲು ಸಮಸ್ಯೆ, ಹಿಮ್ಮಡಿ ನೋವು ಹಾಗೂ ಇತರ ರೋಗಗಳಿಗೆ ಸಂಬಂಧಿಸಿದಂತೆ ಸುಮಾರು ೩೦೦ ರೋಗಿಗಳಿಗೆ ಉಚಿತ ತಪಾಸಣೆ ಮಾಡಿ, ಉಚಿತ ಔಷಧ ನೀಡಲಾಯಿತು.

ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಐಶ್ವರ್ಯಾ ಬಗಾಡೆ, ಡಾ. ಗಣೇಶ ಬಿ., ಡಾ. ಋಷಿಕೇಶ್, ಡಾ. ಗೀತಾ ಹಿರೇಮಠ, ಡಾ. ಶೈಲೇಶ, ಕಿರಿಯ ವೈದ್ಯರಾದ ಅನುಷಾ, ಅಂಬಲಾಲ್, ಶಿವಯೋಗಿ, ಸಂಗೀತಾ, ಅರ್ಪಿತಾ ಶಿಬಿರದಲ್ಲಿ ರೋಗಿಗಳ ತಪಾಸಣೆ ಮಾಡಿ ಔಷಧ ನೀಡಿದರು.

ಶಿಗ್ಗಾಂವಿ ತಾಪಂ ಮಾಜಿ ಅಧ್ಯಕ್ಷೆ ಮೇಘಾ ಬಗಾಡೆ, ವಿರೂಪಾಕ್ಷ ಬಗಾಡೆ, ಡಾ. ಗೈಬು ನಾಯ್ಕರ್, ಡಾ. ಸುರೇಶ್ ಪೂಜಾರ್ ಮುಂತಾದವರು ಉಪಸ್ಥಿತರಿದ್ದರು.

Share this article