ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ: ಜಿಲ್ಲಾಧಿಕಾರಿ

KannadaprabhaNewsNetwork |  
Published : Apr 15, 2024, 01:22 AM IST
ಫೋಟೋ- 14ಜಿಬಿ2 | Kannada Prabha

ಸಾರಾಂಶ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಗಳು ಕೊಡುಗೆಗಳು ಅವರ ವಿಚಾರಗಳು ನಮಗೆ ದಾರಿ ದೀಪವಾಗಿದ್ದು ಅವರ ತತ್ವಗಳು, ಸಿದ್ಧಾಂತಗಳನ್ನು ನಾವು ಯಾವಾಗಲು ಮೈಗೊಡಿಸಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು 133ನೇ ಜಯಂತಿ ಅಂಗವಾಗಿ ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಪ್ರತಿಮೆಗೆ ಭಾನುವಾರ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಮತ್ತು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸೇರಿದಂತೆ ಹಿರಿಯ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿ ಗೌರವ ನವನ ಸಲ್ಲಿಸಿದರು.

ಬಳಿಕ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಗಳು ಕೊಡುಗೆಗಳು ಅವರ ವಿಚಾರಗಳು ನಮಗೆ ದಾರಿ ದೀಪವಾಗಿದ್ದು ಅವರ ತತ್ವಗಳು, ಸಿದ್ಧಾಂತಗಳನ್ನು ನಾವು ಯಾವಾಗಲು ಮೈಗೊಡಿಸಕೊಳ್ಳಬೇಕು ಎಂದರು.ಬಾಬಾ ಸಾಹೇಬರು ಶೋಷಿತ ಸಮುದಾಯಕ್ಕೆ ಮಹಿಳೆಯರಿಗೆ ವಿಶೇಷ ಸಮಾನತೆ ನೀಡಿದ ಅವರು ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು. ಸಾದ್ಯವೆಂದು ಹೇಳಿದರು. ಅವರ ಆದರ್ಶ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಲ್ಲರಿಗೂ ಶುಭಾಶಯಗಳು ಹೇಳಿದರು.

ನಗರ ಪೊಲಿಸ್ ಆಯುಕ್ತರಾದ ಚೇತನ ಅವರು ಮಾತನಾಡಿ, ಶಿಕ್ಷಣ ಸಮಾನತೆ ಅಳವಡಿಸಿಕೊಂಡು ನಾವೆಲ್ಲರೂ ನಡೆಯಬೇಕೆಂದರು. ಡಾ. ಬಾಬ ಸಾಹೇಬರು ಸಮಾನತೆ ಹೋರಾಡಿದರು. ಅನೇಕ ಸಿದ್ಧಾಂತಗಳನ್ನು ಮತ್ತು ಕೂಡುಗೆಗಳನ್ನು ದೇಶಕ್ಕಾಗಿ ನೀಡಿದ್ದಾರೆ ಎಂದರು.

ಇದಕ್ಕೂ ಮುನ್ನ ಬುದ್ಧ ವಿಹಾರದ ಸಂಗಾನಂದ ಭಂತೇಜಿ ಅವರ ನೇತೃತ್ವದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಬುದ್ಧವಂದನೆ ಸಲ್ಲಿಸಲಾಯಿತು.

ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತರಾದ ಭುವನೇಶ್ ದೇವಿದಾಸ ಪಾಟೀಲ, ಉಪ ಆಯುಕ್ತರಾದ ಮಾಧವ ಗಿತ್ತೆ, ಪ್ರೊಬೇಷನರಿ ಐ.ಎ.ಎಸ್. ಗಜಾನನ ಬಾಳೆ, ಅಪರ ಜಿಲ್ಲಾದಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ಸಹಾಯಕ ಆಯುಕ್ತೆ ರೂಪಿಂದ್ರ ಸಿಂಗ್ ಕೌರ್, ಸಮಾಜ ಕಲ್ಯಾಣ ಇಲಾಖೆ (ಪ್ರಭಾರಿ) ಅಧಿಕಾರಿ ಜಾವಿದ್ ಕರಂಗಿ, ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ರಾಜು ಸಂಕಾ ಎಸ್ಸಿ/ಎಸ್ಟಿ ಸರಕಾರಿ ಅರೆ ಸರಕಾರಿ ನೌಕರರ ಸಂಘದ ಅಧ್ಯಕ್ಷರ ಸೋಮಶೇಖರ ಎಸ್ ಮದನಕರ್, ವಿಠ್ಠಲ ಗೋಳಾ, ಸಮಾಜದ ಮುಖಂಡರಾದ ಡಿ.ಜಿ. ಸಾಗರ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಪಂಚಶೀಲ ಧ್ವಜಾರೋಹಣ ನೇರವೇರಿಸಿದರು. ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ನೀಲ ಧ್ವಜಾರೋಹಣ ನೇರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ 25 ವರ್ಷ 543 ಸ್ಥಾನ ಮಿತಿ ಕಾಯ್ದುಕೊಳ್ಳಿ: ಡಿಕೆ
ಉಭಯ ಸದನಗಳಲ್ಲಿ 4ನೇ ದಿನವೂ ನಾಗೇಂದ್ರ ಗದ್ದಲ