ಬದಲಾದ ನೀತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸವಾಲು

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಉನ್ನತ ಶಿಕ್ಷಣದಲ್ಲಿ ಬದಲಾದ ಕೆಲವೊಂದು ನಿಯಮಗಳು ಮತ್ತು ಪೋಷಕರ ಮನೋಭಾವದಿಂದಾಗಿ ಸೇವಾ ಮನೋಭಾವದ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟದೊಂದಿಗೆ ಸವಾಲನ್ನು ಕೂಡ ಎದುರಿಸುವಂತಾಗಿದೆ ಎಂದು ತೀರ್ಥಹಳ್ಳಿ ತುಂಗಾ ವಿದ್ಯಾವರ್ಧಕ ಸಂಘ ಅಧ್ಯಕ್ಷ ಪಿ.ವಿ.ಮಹಾಬಲೇಶ್ ಸರ್ವ ಸದಸ್ಯರ ಸಭೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಉನ್ನತ ಶಿಕ್ಷಣದಲ್ಲಿ ಬದಲಾದ ಕೆಲವೊಂದು ನಿಯಮಗಳು ಮತ್ತು ಪೋಷಕರ ಮನೋಭಾವದಿಂದಾಗಿ ಸೇವಾ ಮನೋಭಾವದ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟದೊಂದಿಗೆ ಸವಾಲನ್ನು ಕೂಡ ಎದುರಿಸುವಂತಾಗಿದೆ ಎಂದು ತುಂಗಾ ವಿದ್ಯಾವರ್ಧಕ ಸಂಘ ಅಧ್ಯಕ್ಷ ಪಿ.ವಿ.ಮಹಾಬಲೇಶ್ ಹೇಳಿದರು.

ಪಟ್ಟಣದ ತುಂಗಾ ಮಹಾವಿದ್ಯಾಲಯದಲ್ಲಿ ಮಂಗಳವಾರ ತುಂಗಾ ವಿದ್ಯಾವರ್ಧಕ ಸಂಘದ 57ನೇ ವರ್ಷದ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ, ಕಳೆದ 5 ದಶಕಗಳಿಂದ ಈ ಭಾಗದ ಸಹಸ್ರಾರು ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಇಲ್ಲದೇ, ಗುಣಮಟ್ಟದ ಶಿಕ್ಷಣವನ್ನು ನೀಡಿದ ಹೆಗ್ಗಳಿಕೆ ಈ ಸಂಸ್ಥೆಗಿದೆ. ಆದರೆ ಈಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾದ ಕೆಲವೊಂದು ನಿಯಮಗಳಿಂದ ಕಠಿಣ ಸವಾಲು ಎದುರಾಗಿದೆ ಎಂದರು.

ಸುವರ್ಣ ಮಹೋತ್ಸವವನ್ನು ಆಚರಿಸಿ ಮುನ್ನಡೆಯುತ್ತಿರುವ ತುಂಗಾ ಮಹಾವಿದ್ಯಾಲಯದಲ್ಲಿ ಕಾಲೇಜಿನಲ್ಲಿ ವಿದ್ಯಾಥಿಗಳ ಸಂಖ್ಯೆಯಲ್ಲಿ ಸ್ವಲ್ಪಮಟ್ಟಿನ ಕೊರತೆ ಇದೆ. ಆದರೆ, ಈ ಭಾಗದ ಶಿಕ್ಷಣಾರ್ಥಿಗಳಿಗೆ ಅಗತ್ಯವಿರುವ ಕೋರ್ಸ್‍ಗಳನ್ನು ಪ್ರಾರಂಭಿಸಲು ದಾನಿಗಳ ಮತ್ತು ಹಿರಿಯ ವಿದ್ಯಾರ್ಥಿಗಳ ನೆರವಿನೊಂದಿಗೆ ಸರಿದೂಗಿಸಿಕೊಂಡು ಹೋಗಲು ಆಡಳಿತ ಮಂಡಳಿ ಆಗತ್ಯ ಕ್ರಮ ಕೈಗೊಂಡಿದೆ ಎಂದರು.

ಸಂಘದ ಪದನಿಮಿತ್ತ ನಿರ್ದೆಶಕರಾದ ಪ.ಪಂ. ಅಧ್ಯಕ್ಷೆ ಗೀತಾ ರಮೇಶ್ ಕಾಲೇಜಿನ ಗೌರವ ಸ್ವೀಕರಿಸಿ ಮಾತನಾಡಿ, ಶಿಕ್ಷಣದ ಬಗ್ಗೆ ಪೋಷಕರಲ್ಲಿ ಬದಲಾದ ಮನಃಸ್ಥಿತಿಯಿಂದಾಗಿ ಪದವಿ ಶಿಕ್ಷಣದಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಯುವಜನತೆಯ ಉದ್ಯೋಗಕ್ಕೆ ಪೂರಕವಾದ ಕೋರ್ಸ್‍ಗಳನ್ನು ಆರಂಭಿಸುವುದು ಸೂಕ್ತ ಎಂದರು.

ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಡಾನ್ ರಾಮಣ್ಣ ಮಾತನಾಡಿ, ಸಂಘದ ವಾರ್ಷಿಕ ವರದಿ ಮಂಡಿಸಿದರು. ಸಹ ಕಾರ್ಯದರ್ಶಿ ಸೊಪ್ಪುಗುಡ್ಡೆ ರಾಘವೇಂದ್ರ ಹಿಂದಿನ ಸಾಲಿನ ಸರ್ವ ಸದಸ್ಯರ ಸಭೆ ನಿರ್ಣಯ ವಾಚಿಸಿದರು. ಖಜಾಂಚಿ ಜೆ.ಟಿ.ಸುಂದರೇಶ್ ಸಂಘದ ಆಡಿಟ್ ವರದಿಯನ್ನು ಮಂಡಿಸಿದರು.

ಸಂಘದ ಉಪಾಧ್ಯಕ್ಷ ಎಂ.ಎನ್. ರಮೇಶ್ ಈಚೆಗೆ ದಿವಂಗತರಾದ ಸಂಘದ ಹಿತೈಷಿಗಳು ಹಾಗೂ ನಿರ್ದೆಶಕರಿಗೆ ನುಡಿನಮನ ಸಲ್ಲಿಸಿದರು. ಪಾಂಶುಪಾಲ ಡಾ. ಕೆ.ಅಂಜನಪ್ಪ ಮತ್ತು ಪ್ರೊ.ಪ್ರಸನ್ನ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವರದಿ ನೀಡಿದರು.

ಸಂಘದ ಉಪಾಧ್ಯಕ್ಷ ಕೆ.ಎಸ್.ಶೇಷಾದ್ರಿ, ನಿಕಟಪೂರ್ವ ಅದ್ಯಕ್ಷ ಕೌಲಾನಿ ಧರ್ಮಯ್ಯ ಮುಂತಾದವರು ಇದ್ದರು.

- - -

-19ಟಿಟಿಎಚ್01:

ಸಂಘದ ಪದನಿಮಿತ್ತ ನಿರ್ದೆಶಕರಾದ ಪಪಂ ನೂತನ ಅಧ್ಯಕ್ಷೆ ಗೀತಾ ರಮೇಶ್‍ ಅವರನ್ನು ಗೌರವಿಸಲಾಯಿತು.

Share this article