ಪರಿಶೀಲಿಸಿ ಜೋಡೆತ್ತಿನ ಗಾಡಿ ಶರ್ಯತ್ತು

KannadaprabhaNewsNetwork | Published : Mar 7, 2024 1:45 AM

ಸಾರಾಂಶ

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಮಲಿಕವಾಡ ಶರ್ಯತ್ತು ಮೈದಾನದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ 77ನೇ ಜನ್ಮ ದಿನಾಚರಣೆ ನಿಮಿತ್ಯವಾಗಿ ಅವರ ಅಭಿಮಾನಿಗಳು ಅಂತಾರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಓಡಿಸುವ ಸ್ಪರ್ಧೆಯನ್ನು ಮಂಗಳವಾರ ಸಂಜೆ ಆಯೋಜನೆ ಮಾಡಿದ್ದರು. "ಅ " ವರ್ಗ, "ಬ " ವರ್ಗ ಹಾಗೂ "ಕ " ವರ್ಗ ಸೇರಿದಂತೆ ಮೂರು ವಿಭಾಗಗಳಲ್ಲಿ ನಡೆದ ಜೋಡೆತ್ತಿನ ಗಾಡಿ ಶರ್ಯತ್ತಿಗೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಚಿಕ್ಖೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಮಲಿಕವಾಡ ಶರ್ಯತ್ತು ಮೈದಾನದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ 77ನೇ ಜನ್ಮ ದಿನಾಚರಣೆ ನಿಮಿತ್ಯವಾಗಿ ಅವರ ಅಭಿಮಾನಿಗಳು ಅಂತಾರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಓಡಿಸುವ ಸ್ಪರ್ಧೆಯನ್ನು ಮಂಗಳವಾರ ಸಂಜೆ ಆಯೋಜನೆ ಮಾಡಿದ್ದರು. "ಅ " ವರ್ಗ, "ಬ " ವರ್ಗ ಹಾಗೂ "ಕ " ವರ್ಗ ಸೇರಿದಂತೆ ಮೂರು ವಿಭಾಗಗಳಲ್ಲಿ ನಡೆದ ಜೋಡೆತ್ತಿನ ಗಾಡಿ ಶರ್ಯತ್ತಿಗೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಚಿಕ್ಖೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು.

"ಅ " ವರ್ಗದಲ್ಲಿ ನಡೆದ ಜೋಡಿತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಒಂಬತ್ತೂವರೆ ಕಿ.ಮೀ ದೂರವನ್ನು 24 ನಿಮಿಷಗಳಲ್ಲಿ ಓಡುವ ಮೂಲಕ ಮಹಾರಾಷ್ಟ್ರದ ಕೊಲ್ಹಾಪುರದ ಸಂದೀಪ ಪಾಟೀಲ ಅವರ ಎತ್ತುಗಳು 17 ಲಕ್ಷ ರೂ. ಮೊತ್ತದ ಮೊದಲ ಬಹುಮಾನವನ್ನು ಬಾಚಿಕೊಂಡು ಬೀಗಿದವು. ನಿನ್ನೆಯವರೆಗೆ ಎರಡು ವಿಭಾಗಗಳಲ್ಲಿ 51 ಲಕ್ಷ ರೂ. ಮೊತ್ತದ ಬಹುಮಾನವನ್ನು ಘೋಷಿಸಲಾಗಿತ್ತು. ಶರ್ಯತ್ತು ಪ್ರಿಯರ ಮನವಿಯ ಮೇರೆಗೆ "ಕ " ವರ್ಗವೊಂದನ್ನು ಹೆಚ್ಚುವರಿಯಾಗಿ ಇದಕ್ಕೆ ಸೇರಿಸಿ ರೂ. 64 ಲಕ್ಷ ಹೆಚ್ಚಳ ಮಾಡಲಾಯಿತು. ಹೀಗಾಗಿ ಸಂಜೆ 4 ಗಂಟೆಗೆ ಆರಂಭವಾದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಯು ಇಳಿಹೊತ್ತಿನವರೆಗೂ ನಡೆದಿದ್ದು ವಿಶೇಷವಾಗಿತ್ತು.

"ಕ " ವರ್ಗದಲ್ಲಿ ಒಟ್ಟು 11 ಎತ್ತಿನ ಗಾಡಿಗಳು, "ಬ " ವರ್ಗದಲ್ಲಿ 10 ಎತ್ತಿನ ಗಾಡಿಗಳು ಹಾಗೂ "ಅ " ವರ್ಗದಲ್ಲಿ 13 ಎತ್ತಿನ ಗಾಡಿಗಳು ಸೇರಿದಂಥೆ 34 ಎತ್ತಿನ ಗಾಡಿಗಳು ಅಂತಾರಾಜ್ಯ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

"ಸಾಹುಕಾರ ಶರ್ಯತ್ತು " ಎಂದೇ ಪ್ರಸಿದ್ದಿಯಾಗಿದ್ದ ಅಂತಾರಾಜ್ಯ ಜೋಡೆತ್ತಿನ ಗಾಡಿ ಓಡಿಸುವ ಸ್ಪರ್ಧೆಯನ್ನು ವೀಕ್ಷಿಸಲು ಲಕ್ಷ ಲಕ್ಷ ವೀಕ್ಷಕರು ಆಗಮಿಸಿದ್ದು ಅಲ್ಲದೇ, ಕನ್ನಡದ ಪ್ರಖ್ಯಾತ ನಿರ್ದೇಶಕ ಯೋಗರಾಜ ಭಟ್, ಹಿರಿಯ ನಟ ದೊಡ್ಡಣ್ಣ, ನಟಿ ಮಿಶ್ವಿಕಾ ನಾಯ್ದು ಆಗಮಿಸಿ ಹಾಡಿ ಕುಣಿದು ಜನರನ್ನು ರಂಜಿಸಿದ್ದು ಶರ್ಯತ್ತಿನ ಮತ್ತೊಂದು ವಿಶೇಷವಾಗಿತ್ತು.

ನಂತರ ವಿಜೇತರಿಗೆ ಗಣ್ಯರು ಬಹುಮಾನ, ಶೀಲ್ಡ್, ನಿಶಾನೆ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ನೀಲಾಂಬಿಕಾ ಹುಕ್ಕೇರಿ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಸುಭಾಷ ಜೋಶಿ, ಯುವ ಮುಖಂಡ ಉತ್ತಮ ಪಾಟೀಲ, ಪಂಕಜ ಪಾಟೀಲ, ಬಾಳಾಸಾಹೇಬ ಪಾಟೀಲ, ಎ ಡಿ ಇಂಗಳೆ, ಸಂಭಾಜಿ ಪಾಟೀಲ, ಪುಂಡಲೀಕ ಖೋತ, ಪಿರಗೊಂಡ ಪಾಟೀಲ, ಸುನೀಲ ಸಪ್ತಸಾಗರ, ರವೀಂದ್ರ ಖೋತ, ರವೀಂದ್ರ ಮಾನೆ ಮುಂತಾದವರು ಉಪಸ್ಥಿತರಿದ್ದರು. ಬಾಕ್ಸ್ ನಲ್ಲಿ :

ವೇದಿಕೆಯತ್ತ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಆಗಮಿಸುತ್ತಲೇ 3 ಕ್ವಿಂಟಲ್ ಗೂ ಹೆಚ್ಚು ತೂಕದ ಶೇಬು ಹಣ್ಣಿನ ಬೃಹತ್ ಹಾರವನ್ನು ಹಾಕಲು ಅಭಿಮಾನಿ ಬಳಗ ಮುಂದಾದಾಗ ಹುಕ್ಕೇರಿ ಅವರು ಅದನ್ನು ತಿರಸ್ಕರಿಸಿದರು. ಇಂದು ನನ್ನ ಜನ್ಮ ದಿನ ಇರಬಹುದು. ಆದರೆ ಈ ಹಾರ ಜನರಿಗೆ ಸೇರಬೇಕು. ಹಾಗಾಗಿ ಶರ್ಯತ್ತಿನಲ್ಲಿ ಪ್ರಥಮ ಸ್ಥಾನ ಗಳಿಸುವ ಎತ್ತುಗಳಿಗೆ ಹಾರ ಹಾಕಬೇಕೆಂದು ಹೇಳಿ ಜನರ ಪ್ರೀತಿಗೆ ಮತ್ತಷ್ಟು ಹತ್ತಿರವಾದರು. ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಯ ಫಲಿತಾಂಶಗಳು : "ಅ "ವರ್ಗದ ಜೋಡೆತ್ತಿನ ಗಾಡಿ ಓಟದ ಫಲಿತಾಂಶ : ಪ್ರಥಮ ಸ್ಥಾನ- ಸಂದೀಪ ಪಾಟೀಲ, ಕೊಲ್ಹಾಪೂರ-17 ಲಕ್ಷ ರೂ, ದ್ವಿತೀಯ ಸ್ಥಾನ-ಬಂಡಾ ಸಿಂಧೆ, ದಾನೋಲಿ-9 ಲಕ್ಷ ರೂ. ತೃತೀಯ ಸ್ಥಾನ-ಬಾಳಾಸಾಹೇಬ ಹಜಾರೆ, 5 ಲಕ್ಷ ರೂ, ನಾಲ್ಕನೇ ಸ್ಥಾನ-ಸಾಗರ ಸೂರ್ಯವಂಶಿ- 2ಲಕ್ಷ ರೂ.

"ಬ "ವರ್ಗದ ಫಲಿತಾಂಶ : ಪ್ರಥಮ ಸ್ಥಾನ-ಬಂಡಾ ಖಿಲಾರೆ, ದಾನೋಲಿ, 9 ಲಕ್ಷ ರೂ, ದ್ವಿತೀಯ ಸ್ಥಾನ-ರಾಜೇಂದ್ರ ಪಾಟೀಲ, ತಾಸಗಾಂವ ಚಿಂಚಣಿ, 5 ಲಕ್ಷ ರೂ, ತೃತೀಯ ಸ್ಥಾನ : ಮಹಾದೇವ ಗಜಬರ, ಮಲಿಕವಾಡ, 3 ಲಕ್ಷ ರೂ, ನಾಲ್ಕನೇ ಸ್ಥಾನ- ಅಭಿಜೀತ ದೇಸಾಯಿ-ಯರಗಟ್ಟಿ, 1 ಲಕ್ಷ ರೂ, "ಕ " ವರ್ಗದ ಫಲಿತಾಂಶ : ಪ್ರಥಮ ಸ್ಥಾನ- ಶಿವಾನಂದ ಪೂಜಾರಿ, ಅಲಖನೂರ, 7 ಲಕ್ಷ ರೂ, ದ್ವಿತೀಯ ಬಹುಮಾನ- ಭೀಮರಾವ ಪಾಟೀಲ, ಕೊಲ್ಹಾಪೂರ, 3 ಲಕ್ಷ ರೂ, ತೃತೀಯ ಬಹುಮಾನ- ಆಸಿಫ್ ಮುಲ್ಲಾನಿ, ಶಿರಢಾಣ, 2 ಲಕ್ಷ ರೂ, ನಾಲ್ಕನೇ ಸ್ಥಾನ-ಶಿವಾನಂದ ಖಾರಿ, 1 ಲಕ್ಷ ರೂ.

Share this article