ಪ್ರಗತಿಪಥದತ್ತ ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆ: ಮಲ್ಲಿಕಾರ್ಜುನ ಕೋರೆ

KannadaprabhaNewsNetwork | Updated : Oct 13 2024, 01:02 AM IST

ಸಾರಾಂಶ

ಚಿಕ್ಕೋಡಿ: ಕಾರ್ಖಾನೆಯ ಮಾರ್ಗದರ್ಶಕರು, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ನೇತೃತ್ವ ,ಅಮಿತ ಕೋರೆಯವರ ಮುಂದಾಳತ್ವ ಹಾಗೂ ಆಡಳಿತ ಮಂಡಳಿಯ ಸೂಕ್ತ ನಿರ್ಣಯದಿಂದ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಗತಿಪಥದಲ್ಲಿ ಮುನ್ನಡೆದಿದೆ ಕಾರ್ಖಾನೆಯ ಚೇರಮನ್ ಮಲ್ಲಿಕಾರ್ಜುನ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕಾರ್ಖಾನೆಯ ಮಾರ್ಗದರ್ಶಕರು, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ನೇತೃತ್ವ ,ಅಮಿತ ಕೋರೆಯವರ ಮುಂದಾಳತ್ವ ಹಾಗೂ ಆಡಳಿತ ಮಂಡಳಿಯ ಸೂಕ್ತ ನಿರ್ಣಯದಿಂದ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಗತಿಪಥದಲ್ಲಿ ಮುನ್ನಡೆದಿದೆ ಕಾರ್ಖಾನೆಯ ಚೇರಮನ್ ಮಲ್ಲಿಕಾರ್ಜುನ ಕೋರೆ ಹೇಳಿದರು.ಶುಕ್ರವಾರ ಸ್ಥಳೀಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಿಡಸೋಸಿ ಸಿದ್ದಸಂಸ್ಥಾನ ಮಠದ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಹಾಗೂ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರು ಸೇರಿ ಬಾಯ್ಲರ್‌ ಪ್ರದೀಪನ ಹಾಗೂ ಕೇನ್‌ ಕ್ಯಾರಿಯರ್‌ ಗೆ ಪೂಜೆ ಸಲ್ಲಿಸಿ 2024-25ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದರು.

ಕಾರ್ಖಾನೆಯು ಪ್ರಸಕ್ತ ಸಾಲಿನಲ್ಲಿ 12 ಲಕ್ಷ ಮೆ.ಟನ್‌ ಕಬ್ಬು ನುರಿಸುವ ಮತ್ತು 12 ಕೋಟಿ ಯುನಿಟ್‌ ವಿದ್ಯುತ್ ಉತ್ಪಾದಿಸುವ ಹಾಗೂ 2.5 ಕೋಟಿ ಲೀಟರ್‌ ಇಥೆನಾಲ್‌ ಉತ್ಪಾದಿಸುವ ಗುರಿ ಹೊಂದಿದೆ ಎಂದ ಅವರು, ಕಾರ್ಮಿಕರು, ರೈತ ಸದಸ್ಯರು ತಮ್ಮ ಕಬ್ಬನ್ನು ಕಾರ್ಖಾನೆಗೆ ಕಳುಹಿಸಿ ಆಡಳಿತ ಮಂಡಳಿಯವರು ಗುರಿ ಮುಟ್ಟಲು ಸಹಕರಿಸಲು ವಿನಂತಿಸಿದರು.

ಮಲ್ಲಪ್ಪಾ ಮೈಶಾಳೆ ದಂಪತಿ ಬಾಯ್ಲರ್‌ ಪೂಜೆ ನೆರವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ ಹಾಗೂ ಕಾರ್ಖಾನೆ ನಿರ್ದೇಶಕ ಅಮೀತ ಕೋರೆ, ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಸಂಚಾಲಕರಾದ ಅಜೀತ ದೇಸಾಯಿ, ಭರತೇಶ ಬನವಣೆ, ಪರಸಗೌಡ ಪಾಟೀಲ, ಸಂದೀಪ ಪಾಟೀಲ, ಮಹಾವೀರ ಮಿರ್ಜಿ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ, ಭೀಮಗೌಡ ಪಾಟೀಲ, ಮಹಾವೀರ ಕಾತ್ರಾಳೆ, ಅಣ್ಣಾಸಾಬ ಇಂಗಳೆ, ನಂದಕುಮಾರ ನಾಶಿಪುಡಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಐ.ಎನ್. ಗೊಲಭಾವಿ ಹಾಗೂ ಕಾರ್ಖಾನೆ ರೈತ ಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಮಿಕರು ಇದ್ದರು.

ಪೋಟೋ : 12ಸಿಕೆಡಿ1

Share this article