ಚಿಕ್ಕಲ್ಲೂರು ಜಾತ್ರೆ ಪ್ರಾರಂಭ ಉತ್ತರಕ್ಕೆ ವಾಲಿದ ಚಂದ್ರಮಂಡಲ

KannadaprabhaNewsNetwork |  
Published : Jan 27, 2024, 01:18 AM ISTUpdated : Jan 27, 2024, 01:19 AM IST
26ಸಿಎಚ್‌ಎನ್‌51ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಲೂರು ಘನನೀಲಿ ಸಿದ್ದಪ್ಪಾಜಿಯ ಗದ್ದುಗೆ.  | Kannada Prabha

ಸಾರಾಂಶ

ಸೌಹಾರ್ದತೆಗೆ ಪ್ರತಿಕವಾಗಿರುವ ತಾಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರಿನಲ್ಲಿ ಚಂದ್ರಮಂಡಲೋತ್ಸವ ಸಂಭ್ರಮ ಸಡಗರದಿಂದ ನೆರವೇರಿತು. ಐದು ದಿನಗಳ ಕಾಲ ನಡೆಯುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಾಂಪ್ರದಾಯಿಕವಾಗಿ ಮೊದಲ ದಿನ ಚಂದ್ರಮಂಡಲೋತ್ಸವ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಮೂಲಕ ಬೋಪ್ಪೆಗೌಡನಪುರದ ಬಿ ಪಿ ಚೆನ್ನರಾಜ್ ಅರಸು ಅವರು ಅಗ್ನಿ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು. ಲಕ್ಷಾಂತರ ಭಕ್ತರು ಕೊರೆಯುವ ಮೈಚಳಿಯನ್ನು ಲೆಕ್ಕಿಸದೆ ಜಾತ್ರೆಯನ್ನು ಕಣ್ತುಂಬಿಕೊಂಡರು.

ಕಣ್ತುಂಬಿಕೊಂಡ ಸಿದ್ದಪ್ಪಾಜಿ ಭಕ್ತರು । ಬಿ ಪಿ ಚೆನ್ನರಾಜ್ ಅರಸರಿಂದ ಅಗ್ನಿ ಸ್ಪರ್ಶ ಮಾಡುವ ಮೂಲಕ ಚಾಲನೆ

ಕನ್ನಡಪ್ರಭ ವಾರ್ತೆ ಹನೂರುಸೌಹಾರ್ದತೆಗೆ ಪ್ರತಿಕವಾಗಿರುವ ತಾಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರಿನಲ್ಲಿ ಚಂದ್ರಮಂಡಲೋತ್ಸವ ಸಂಭ್ರಮ ಸಡಗರದಿಂದ ನೆರವೇರಿತು. ಐದು ದಿನಗಳ ಕಾಲ ನಡೆಯುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಾಂಪ್ರದಾಯಿಕವಾಗಿ ಮೊದಲ ದಿನ ಚಂದ್ರಮಂಡಲೋತ್ಸವ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಮೂಲಕ ಬೋಪ್ಪೆಗೌಡನಪುರದ ಬಿ ಪಿ ಚೆನ್ನರಾಜ್ ಅರಸು ಅವರು ಅಗ್ನಿ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು. ಲಕ್ಷಾಂತರ ಭಕ್ತರು ಕೊರೆಯುವ ಮೈಚಳಿಯನ್ನು ಲೆಕ್ಕಿಸದೆ ಜಾತ್ರೆಯನ್ನು ಕಣ್ತುಂಬಿಕೊಂಡರು.ಚಿಕ್ಕಲ್ಲೂರಿನಲ್ಲಿರುವ ಹಳೆ ಮಠದಿಂದ ಬೋಪ್ಪೆಗೌಡನಪುರದ ಧರೆಗೆ ದೊಡ್ಡವರ ಸಂಸ್ಥಾನದ ಮಠದ ಪರಂಪರೆಯಂತೆ ಮಠದ ಬಸವಬಾರಿ ಕಂಡಾಯ ಸೇರಿದಂತೆ ನೀಲಗಾರರು ಕಂಡಾಯಗಳನ್ನು ಹೊತ್ತು ಕಾಟಿ, ಕೊಂಬು, ದಾಳ, ಸತ್ತಿಗೆ, ಸುರಪಾನಿ, ವಾದ್ಯಮೇಳ ಸದ್ದಿನೊಂದಿಗೆ ಬರುವ ನೀಲಗಾರರು ಬಿಳಿ ವಸ್ತ್ರವನ್ನು ಧರಿಸಿ, ಹಣೆಗೆ ಮೂರು ಕಟ್ಟು ವಿಭೂತಿ ಬಳಿದು ಬೆತ್ತ ಜೋಳಿಗೆ ಹಿಡಿದು ಜಾಗಟೆ ಬಡಿದುಕೊಂಡು ಹೊತ್ತು ತಂದರು. ಸಿದ್ದಪ್ಪಾಜಿ ಗದ್ದುಗೆಗೆ ಆಗಮಿಸಿದ ಮಠಾಧಿಪತಿಗಳು ವಿಶೇಷ ಪೂಜೆ ಸಲ್ಲಿಸಿದರು. ನಂತರ ಶಾಗ್ಯ ಗ್ರಾಮಸ್ಥರು ಸುತ್ತೇಳು ಗ್ರಾಮಸ್ಥರು ಬಿದಿರು ಹಚ್ಚೆ, ಮಡಿ ಬಟ್ಟೆ, ತುಪ್ಪ ಎಣ್ಣೆಯನ್ನು ಹಚ್ಚಿ ಗದ್ದುಗೆಯ ಮುಂಭಾಗವಿರುವ ವೃತ್ತಾಕಾರದ ವೇದಿಕೆಯಲ್ಲಿ ಸಿದ್ಧಪಡಿಸಿದ್ದ ಚಂದ್ರ ಮಂಡಲಕ್ಕೆ ಧೂಪ ಸಾಂಬ್ರಾಣಿ ಕರ್ಪೂರದಾರತಿ ಬೆಳಗಿ ಪೂಜಾ ಕೈಂಕರ್ಯವನ್ನು ನೆರವೇರಿಸಿ ಕರ್ಪೂರದ ಜ್ಯೋತಿ ಸ್ಪರ್ಶಿಸಿದರು.ಪ್ರತಿ ವರ್ಷ ನಡೆಯುವ ಚಿಕ್ಕಲೂರು ಜಾತ್ರೆಯ ಮೊದಲ ದಿನದ ಚಂದ್ರಮಂಡಲೋತ್ಸವಕ್ಕೆ ಬೊಪ್ಪೇಗೌಡನಪುರದ ಬಿ.ಎಸ್ ಜ್ಞಾನಾನಂದ ಚನ್ನರಾಜ್ ಅರಸು ಸೇರಿದಂತೆ ಕುಟುಂಬದವರು ಆಗಮಿಸಿದ್ದರು. ಚಾಮರಾಜನಗರ ಜಿಲ್ಲೆ ಸೇರಿದಂತೆ ಮೈಸೂರು ಬೆಂಗಳೂರು ಮಂಡ್ಯ ರಾಮನಗರ ಕನಕಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿ ಧಗಧಗನೆ ಉರಿಯುವ ಜ್ಯೋತಿಯನ್ನು ನೋಡಿ ಕಣ್ತುಂಬಿಕೊಂಡರು. ಚಿಕ್ಕಲೂರು ಜಾತ್ರೆಯಲ್ಲಿ ನೆರೆದಿದ್ದ ಭಕ್ತ ಸಮೂಹ ಹಾಗೂ ಹರಕೆ ಹೊತ್ತ ಭಕ್ತರು ಸೇರಿದಂತೆ ಸುತ್ತಮುತ್ತಲಿನ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ದವಸಧಾನ್ಯ ಹಾಗೂ ನಾಣ್ಯಗಳು ಸೇರಿದಂತೆ ಹಣ್ಣು ಜವನ ಹೂವು ಚಂದ್ರಮಂಡಲಕ್ಕೆ ಎಸೆದು ಸಿದ್ದಪ್ಪಾಜಿಗೆ ಉಘೇ ಉಘೇ ಧರೆಗೆ ದೊಡ್ಡವರು. ಸಿದ್ದಪ್ಪಾಜಿ ಪಾದಕ್ಕೆ ಉಘೇ ಉಘೇ ಎಂದು ಘೋಷಣೆ ಕೂಗಿದರು.

ಹುಣ್ಣಿಮೆಯ ರಾತ್ರಿ 11:20 ರಲ್ಲಿ ಜ್ಯೋತಿ ಬೆಳಗಿಸಿದ ನಂತರ ಚಂದ್ರಮಂಡಲ ಧಗಧಗನೆ ಉರಿಯುವಾಗ ಯಾವ ದಿಕ್ಕಿಗೆ ಹೆಚ್ಚು ವಾಲುತ್ತದೆಯೋ ಆ ಭಾಗಕ್ಕೆ ಈ ವರ್ಷಹೆಚ್ಚು ಮಳೆ ಬೀಳುತ್ತದೆ ಆ ಪ್ರದೇಶ ಸಮೃದ್ಧಿಯಿಂದ ಇರುತ್ತದೆ ಎಂಬ ಸಿದ್ದಪ್ಪಾಜಿ ಭಕ್ತರ ಸಾಂಪ್ರದಾಯಿಕ ನಂಬಿಕೆಯಾಗಿದ್ದು, ಈ ಬಾರಿ ಚಂದ್ರಮಂಡಲ ಉತ್ತರಕ್ಕೆ ವಾಲಲಾಯಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌