ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಕಾಂಗ್ರೆಸ್‌ನ ಭದ್ರ ಕೋಟೆ

KannadaprabhaNewsNetwork | Published : Apr 6, 2024 12:46 AM

ಸಾರಾಂಶ

ಜಿಲ್ಲೆಗೆ ಪ್ರತ್ಯೇಕವಾದ ಲೋಕಸಭಾ ಕ್ಷೇತ್ರದ ಸ್ಥಾನ ಇಲ್ಲ. ಕ್ಷೇತ್ರಗಳ ಪುನರ್‌ ವಿಂಗಡಣೆಯ ನಂತರದಲ್ಲಿ ನಡೆದ ಚುನಾವಣೆಗಳು ಕಾಂಗ್ರೆಸ್‌ ಪಾಲಿಗೆ ಕೈ ತಪ್ಪಿವೆ.

12 ಚುನಾವಣೆಯಲ್ಲಿ 7 ಬಾರಿ ಕಾಂಗ್ರೆಸ್‌ ಜಯ ಭೇರಿ । ಬಿಜೆಪಿ 3, ಸಮಾಜವಾದಿ ಪಾರ್ಟಿ, ಜನತಾದಳಕ್ಕೆ ತಲಾ ಒಮ್ಮೊಮ್ಮೆ ಅವಕಾಶ

ಆರ್‌.ತಾರಾನಾಥ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಗೆ ಪ್ರತ್ಯೇಕವಾದ ಲೋಕಸಭಾ ಕ್ಷೇತ್ರದ ಸ್ಥಾನ ಇಲ್ಲ. ಕ್ಷೇತ್ರಗಳ ಪುನರ್‌ ವಿಂಗಡಣೆಯ ನಂತರದಲ್ಲಿ ನಡೆದ ಚುನಾವಣೆಗಳು ಕಾಂಗ್ರೆಸ್‌ ಪಾಲಿಗೆ ಕೈ ತಪ್ಪಿವೆ.

1967 ರಿಂದ 2004ರವರೆಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅಸ್ತಿತ್ವದಲ್ಲಿತ್ತು. ಈ ಅವಧಿಯಲ್ಲಿ ನಡೆದ 12 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದ್ದು 7 ಬಾರಿ, ಬಿಜೆಪಿ ಗೆಲುವು ಸಾಧಿಸಿದ್ದು 3 ಬಾರಿ, ಇನ್ನುಳಿದ ಎರಡು ಅವಧಿಯಲ್ಲಿ ಒಮ್ಮೆ ಸಮಾಜವಾದಿ ಪಾರ್ಟಿ ಜಯಗಳಿಸಿದ್ದರೆ, ಇನ್ನೊಮ್ಮೆ ಜನತಾದಳ ಗೆಲವು ಸಾಧಿಸಿದೆ. ಈ ಒಟ್ಟಾರೆ ಫಲಿತಾಂಶದಲ್ಲಿ ಕಾಂಗ್ರೆಸ್‌ ಪಕ್ಷದ್ದೆ ಗೆಲುವಿನ ಸಿಂಹಪಾಲು. ಹಾಗಾಗಿ ಚಿಕ್ಕಮಗಳೂರು ಕಾಂಗ್ರೆಸ್‌ ಪಕ್ಷದ ಭದ್ರ ಕೋಟೆ ಎನ್ನುತ್ತಿದ್ದರು.

1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಅವರು ಪರಾಭವಗೊಂಡಿದ್ದರು. ಆದ್ದರಿಂದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲವು ಸಾಧಿಸಿದ್ದ ಡಿ.ಬಿ. ಚಂದ್ರೇಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಂದಿರಾಗಾಂಧಿಯವರಿಗೆ ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟು ಕೊಟ್ಟರು. 1978ರಲ್ಲಿ ಇಂದಿರಾಗಾಂಧಿಯವರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜಯಗಳಿಸಿದರು. ಅವರ ಎದುರು ಸುಮಾರು 13 ಮಂದಿ ಸ್ಪರ್ಧೆ ಮಾಡಿದ್ದರು. ಅದರಿಂದ ರಾಷ್ಟ್ರಮಟ್ಟದಲ್ಲಿ ಚಿಕ್ಕಮಗಳೂರು ಜಿಲ್ಲೆ ಗುರುತಿಸಿಕೊಳ್ಳುವ ಜತೆಗೆ ಕೈನ ಭದ್ರ ಕೋಟೆ ಎಂಬುದನ್ನು ಇನ್ನಷ್ಟು ಖಾತ್ರಿ ಪಟ್ಟಿತು.ಕ್ಷೇತ್ರ ಪುನರ್ ವಿಂಗಡಣೆ:

ಚಿಕ್ಕಮಗಳೂರು ಜಿಲ್ಲೆ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ ಸಂದರ್ಭದಲ್ಲಿ ಎರಡು ಭಾರಿ ಭೂಪಟ ಅದಲು ಬದಲಾಗಿದೆ. 1966ರಲ್ಲಿ ಆದ ಕ್ಷೇತ್ರಗಳ ಪುನರ್‌ ವಿಂಗಡಣೆಯಲ್ಲಿ ಜಿಲ್ಲೆಗೆ ಪ್ರತ್ಯೇಕವಾದ ಕ್ಷೇತ್ರದ ಸ್ಥಾನ ಮಾನ ಸಿಕ್ಕಿತು. ಆದರೆ, 2008ರಲ್ಲಿ ಮತ್ತೊಮ್ಮೆ ಆದ ಕ್ಷೇತ್ರಗಳ ಪುನರ್‌ ವಿಂಗಡಣೆಯಲ್ಲಿ ಕ್ಷೇತ್ರ ತನ್ನ ಸ್ವಂತಿಕೆ ಕಳೆದುಕೊಂಡಿತು. ಅಂದರೆ, ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು.

ಕ್ಷೇತ್ರಗಳ ಪುನರ್‌ ವಿಂಗಡಣೆ ವರ್ಷದಲ್ಲಿ ನಡೆದ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. 1967ರಲ್ಲಿ ಸಮಾಜವಾದಿ ಪಾರ್ಟಿ ಜಯಗಳಿಸಿದ್ದರೆ, 2008ರಲ್ಲಿ ಬಿಜೆಪಿ ಗೆಲವು ಸಾದಿಸಿದೆ.

---- ಬಾಕ್ಸ್‌---

--------------------------------------------------ವರ್ಷ ಗೆದ್ದ ಅಭ್ಯರ್ಥಿಗಳುಪಕ್ಷ

------------------------------------------------------1967ಎಂ. ಹುಚ್ಚೇಗೌಡಸಮಾಜವಾದಿ ಪಕ್ಷ

-------------------------------------------------------

1971ಡಿ.ಬಿ. ಚಂದ್ರೇಗೌಡ ಕಾಂಗ್ರೆಸ್‌

------------------------------------------------------

1977ಡಿ.ಬಿ. ಚಂದ್ರೇಗೌಡ ಕಾಂಗ್ರೆಸ್‌

--------------------------------------------------------

1978 ಇಂದಿರಾಗಾಂಧಿಕಾಂಗ್ರೆಸ್‌

-----------------------------------------------------

1980 ಡಿ.ಎಂ.ಪುಟ್ಟೇಗೌಡಕಾಂಗ್ರೆಸ್‌

-------------------------------------------------------

1984ಡಿ.ಕೆ. ತಾರಾದೇವಿಕಾಂಗ್ರೆಸ್‌

-------------------------------------------------------

1989ಡಿ.ಎಂ. ಪುಟ್ಟೇಗೌಡ ಕಾಂಗ್ರೆಸ್‌

------------------------------------------------------

1991ಡಿ.ಕೆ. ತಾರಾದೇವಿಕಾಂಗ್ರೆಸ್‌

---------------------------------------------------------

1996ಬಿ.ಎಲ್‌. ಶಂಕರ್‌ಜನತಾದಳ

------------------------------------------------------

1998 ಡಿ.ಸಿ. ಶ್ರೀಕಂಠಪ್ಪ ಬಿಜೆಪಿ

---------------------------------------------------

1999ಡಿ.ಸಿ. ಶ್ರೀಕಂಠಪ್ಪಬಿಜೆಪಿ

----------------------------------------------------

2004 ಡಿ.ಸಿ. ಶ್ರೀಕಂಠಪ್ಪಬಿಜೆಪಿ

------------------------------------------------------

Share this article