ಕನ್ನಡಪ್ರಭ ವಾರ್ತೆ ಯಾದಗಿರಿ
ಮಕ್ಕಳಿಗೆ ಬಣ್ಣಗಳು, ಆಕೃತಿಗಳು, ಮರ ಗಿಡಗಳು ಪರಿಚಯ ಆಟ, ಹಾಡು, ನೃತ್ಯ ಭರತನ್ಯಾಟ ನೃತ್ಯ ನಾಟಕ ಕಥೆಗಳ ಮೂಲಕ ಮಕ್ಕಳಿಗೆ ಹಬ್ಬದ ವಾತವರಣ ಸ್ಫೂರ್ತಿಯಾಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್ ಹೇಳಿದರು.ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ ಹಾಗೂ ಜಿಲ್ಲಾಡಳಿತ ಜಿಪಂ, ಶಾಲಾ ಶಿಕ್ಷಣಾ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಜಿಲ್ಲಾ ಬಾಲ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಬ್ಬ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯಾದ್ಯಂತ ತಾಲೂಕುಗಳಿಂದ ಬಂದು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮತ್ತು ಈ ಒಂದು ಕಾರ್ಯಕ್ರಮ ಮಕ್ಕಳಿಗೆ ಬಣ್ಣಗಳು, ಆಕೃತಿಗಳು, ಮರ ಗಿಡಗಳು ಪರಿಚಯ ಆಟ, ಹಾಡು, ನೃತ್ಯ ಭರತನ್ಯಾಟ ನೃತ್ಯ ನಾಟಕ ಕಥೆಗಳ ಮೂಲಕ ಮಕ್ಕಳಿಗೆ ಹಬ್ಬದ ವಾತವರಣ ಮಕ್ಕಳಲ್ಲಿ ಕಾಣುತ್ತಿದೆ, ಮಕ್ಕಳ ಹಬ್ಬ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರ ಹೊನೋಲೆ ಮಾತನಾಡಿ, ಮಕ್ಕಳಲ್ಲಿ ಪ್ರತಿಯೊಂದು ಮಗುವಿನಲ್ಲಿ ಒಂದು ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಇದರಲ್ಲಿ ಪೋಷಕರ ಶಿಕ್ಷಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿದ್ದು, ನೋಡಿದಾಗ ನನಗೆ ತುಂಬಾ ಸಂತೋಷವಾಯಿತು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ ಮಾತನಾಡಿ, ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಚಿತ್ರಕಲೆ, ಕಥೆ, ಕವನ, ಪ್ರಬಂಧ, ಸಂಗೀತ ವಾಧ್ಯಗಳೊಂದಿಗೆ, ಜಾನಪದ ನೃತ್ಯ, ನಾಟಕ ಪ್ರದರ್ಶನದಲ್ಲಿ (ಪ್ರಥಮ, ದ್ವೀತಿಯ, ತೃತೀಯ) ಸ್ಥಾನಗಳಲ್ಲಿ ಆಯ್ಕೆಯಾದ ಮಕ್ಕಳಿಗೆ ನಗದು ಬಹುಮಾನ ನೀಡಲಾಗುತ್ತದೆ. ವಿವಿಧ ತಾಲೂಕುಗಳಿಂದ ಶಾಲೆ ಮಕ್ಕಳ ಜಾನಪದ ನೃತ್ಯ ಹಾಗೂ ಡೊಳ್ಳು ಕುಣಿತದೊಂದಿಗೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶ್ವಸಿಗೊಳಿಸಿದೆ ಎಂದು ಹೇಳಿದರು.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಹಣಮಂತ್ರಾಯ ಕರಡ್ಡಿ, ಜಿಲ್ಲಾ ಕ್ರೀಡೆ ಇಲಾಖೆ ಸಹಾಯಕ ನಿರ್ದೇಶಕ ರಾಜು ಭಾವಿಹಳ್ಳಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕರಾದ ಉತ್ತರಾದೇವಿ, ಪ್ರೇಮಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲಸಾಬ್, ಶಿಕ್ಷಣ ಇಲಾಖೆ ಸಿಆರ್‌ಪಿ ರವಿ ಯಾದಗಿರಿ ಸೇರಿದಂತೆ ಇತರರಿದ್ದರು.