ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ತಾಲೂಕ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಅನೇಕ ವರ್ಷಗಳಿಂದ ಯಾವುದೇ ವ್ಯಾಪಾರ ವಹಿವಾಟು ಚಟುವಟಿಕೆಗಳು ಇಲ್ಲದೇ ನಿರ್ಲಕ್ಷತನಕ್ಕೆ ಒಳಗಾಗಿದೆ ಎಂದು ಎಪಿಎಂಸಿ ನಿರ್ದೇಶಕ ಮಲ್ಲಿಕಾರ್ಜುನ ಕೊಡದೂರ ದೂರಿದ್ದಾರೆ.ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ರೈತರು ಬೆಳೆದ ಆಹಾರ ಧಾನ್ಯಗಳನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗದೇ ಇಲ್ಲಿಯೇ ವ್ಯಾಪಾರ ವಹಿವಾಟು ಮಾಡುವುದಕ್ಕಾಗಿ ೧೯೯೭-೯೮ರಲ್ಲಿ ಆಗಿನ ಶಾಸಕರು ದಿ. ವೈಜನಾಥ ಪಾಟೀಲ ರಾಜ್ಯದ ಕೃಷಿಉತ್ಪನ್ನ ಮಾರುಕಟ್ಟೆ ಆಗಿನ ಸಚಿವ ಎಚ್.ನಾಗಪ್ಪ ಅವರಿಂದ ಉದ್ಘಾಟಿಸಿದ್ದರು. ರೈತರು ಬೆಳೆದ ಹೆಸರು, ಉದ್ದು, ತೊಗರಿ, ಅರಶಿಣ ವ್ಯಾಪಾರ ವಹಿವಾಟು ನಡೆಸುವ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ರೈತರಿಗೆ ಅನುಕೂಲವಾಗಿತ್ತು. ಬೇರೆ ಕಡೆಗಳಿಂದ ವ್ಯಾಪಾರಕ್ಕಾಗಿ ಬರುವ ರೈತರಿಗೋಸ್ಕರ ಪ್ರಾಂಗಣದಲ್ಲಿ ಸಿಮೆಂಟ್ ರಸ್ತೆ,ಗೋದಾಮು, ದನಕರುಗಳಿಗೆ ಕುಡಿಯಲು ನೀರಿನ ತೊಟ್ಟಿ, ಶೌಚಾಲಯಗಳು ನಿರ್ಮಿಸಲಾಗಿತ್ತು. ಅವುಗಳೆಲ್ಲವೂ ಹಾಳಾಗಿ ಒಡೆದು ಹೋಗಿವೆ.ಚಿಂಚೋಳಿ ಮತಕ್ಷೇತ್ರದಿಂದ ಆಯ್ಕೆಯಾದ ಶಾಸಕ ಸುನೀಲ್ ವಲ್ಯಾಪೂರೆ, ಡಾ. ಉಮೇಶ ಜಾಧವ್, ಡಾ. ಅವಿನಾಶ ಜಾಧವ್ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ದಿಗೆ ಹೆಚ್ಚಿನ ಆಸಕ್ತಿ ವಹಿಸಿಲ್ಲ. ರೈತರ ಬಗ್ಗೆ ಕಾಳಜಿ ಕುರಿತು ಗಮನಹರಿಸಲಿಲ್ಲವೆಂಬುದು ರೈತರ ದೂರುತ್ತಿದ್ದಾರೆ ಎಂದು ಹೇಳಿದರು.ಚಿಂಚೋಳಿ-ತಾಂಡೂರ ರಾಜ್ಯಹೆದ್ದಾರಿಯ ಪಕ್ಕದಲ್ಲಿ ೮ ಎಕರೆ ಜಮೀನುದಲ್ಲಿ ಪ್ರಾರಂಭಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಸರ್ಕಾದ ನಿರ್ಲಕ್ಷತನಕ್ಕೆ ಒಳಗಾಗಿದೆ. ಜಾನುವಾರುಗಳ ಸಂತೆ ಕಳೆದ ವರ್ಷ ಪ್ರಾರಂಭಿಸಲಾಯಿತು ಆದರೆ ಇಲ್ಲಿಯವರೆಗೆ ಒಂದು ಜಾನುವಾರುಗಳ ಮಾರಾಟ ನಡೆದಿಲ್ಲ.
ರಾಜ್ಯ ಸರ್ಕಾರ ಜಿಲ್ಲೆಯಲ್ಲಿಯೇ ಚಿಂಚೋಳಿ ಎಪಿಎಂಸಿ ಪ್ರಾರಂಗಣದಲ್ಲಿ ಅರಿಶಿಣ ಬೆಂಬಲ ಬೆಲೆಯಲ್ಲಿ ಖರೀದಿಸಲು ಅವಕಾಶವನ್ನು ನೀಡಲಾಗಿತ್ತು. ಇದರಿಂದಾಗಿ ಆಳಂದ, ಚಿತ್ತಾಪೂರ, ಅಫಜಲಪೂರ, ಜೇವರ್ಗಿ, ಕಮಲಾಪೂರ, ಸೇಡಂ ತಾಲೂಕಿನ ರೈತರು ಅರಶಿಣವನ್ನು ಮಾರಾಟ ಮಾಡಿಕೊಂಡಿದ್ದರು. ಚಿಂಚೋಳಿ ಎಪಿಎಂಸಿಯಲ್ಲಿ ಸರ್ಕಾರದಿಂದ ಹೆಸರು, ಉದ್ದು, ತೊಗರಿ ಬೆಂಬಲ ಬೆಲೆಯಲ್ಲಿ ಖರೀದಿಸಲು ಖರೀದಿ ಕೇಂದ್ರ ಸಹಾ ಮಂಜೂರಿಗೊಳಿಸಿಲ್ಲ. ಹೀಗಾಗಿ ಚಿಂಚೋಳಿ ತಾಲೂಕ ಕೃಷಿ ಉತ್ಪನ್ನ ಮಾರುಕಟ್ಟಿ ಪ್ರಾಂಗಣ ವ್ಯಾಪಾರ ವಹಿವಾಟು ಇಲ್ಲದೇ ಬಿಕೋ ಎನ್ನುವ ಮೂಲಕ ಸರ್ಕಾರದ ನಿರ್ಲಕ್ಷತನಕ್ಕೆ ಒಳಗಾಗಿದೆ. ಕಳೆದ ಏಳು ವರ್ಷಗಳಿಂದ ಯಾವುದೇ ವ್ಯಾಪಾರ ವಹಿವಾಟು ಏನು ಇಲ್ಲ ರೈತರು ಬೆಳೆದ ದವಸ ಧಾನ್ಯಗಳು ಖರೀದಿ ಏನು ಇಲ್ಲದ ಎಂದು ಎಪಿಎಂಸಿ ನಿರ್ದೇಶಕ ಮಲ್ಲಿಕಾರ್ಜುನ ಕೊಡದೂರ ದೂರಿದ್ದಾರೆ. ಚಿಂಚೋಳಿ ಪಟ್ಟಣದ ಎಪಿಎಂಸಿ ಪ್ರಾಂಗಣದ ಅಭಿವೃದ್ದಿ ರೈತರಿಗೆ ಅನುಕೂಲಕ್ಕಾಗಿ ವ್ಯಾಪಾರ ವಹಿವಾಟು ಇಲ್ಲ ಮತಕ್ಷೇತ್ರದ ಜನಪ್ರತಿನಿಧಿಗಳು ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ.ಜಗದೀಶಸಿಂಗ ಠಾಕೂರ