ಚಿತ್ತಾಪುರ ಪುರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟ

KannadaprabhaNewsNetwork |  
Published : Aug 19, 2024, 12:55 AM IST
ಚಿತ್ತಾಪುರ ಪುರಸಭೆ ಕಾರ್ಯಲಯದ ಚಿತ್ರ: | Kannada Prabha

ಸಾರಾಂಶ

ಚಿತ್ತಾಪುರ ಪುರಸಭೆಗೆ ಎರಡು ವರ್ಷಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಮೀಸಲಾತಿ ಪಟ್ಟಿ ಹೊರ ಬೀಳುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಕನ್ನಡ ಪ್ರಭ ವಾರ್ತೆ ಚಿತ್ತಾಪುರ

ಚಿತ್ತಾಪುರ ಪುರಸಭೆಗೆ ಎರಡು ವರ್ಷಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಮೀಸಲಾತಿ ಪಟ್ಟಿ ಹೊರ ಬೀಳುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಅಧ್ಯಕ್ಷ ಸ್ಥಾನ ಪ.ಜಾ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಯರಿಗೆ ಮೀಸಲಾಗಿದ್ದು ಯಾವುದೇ ಪಕ್ಷ ಅಧಿಕಾರ ಹಿಡಿದರೂ ಸ್ಥಳೀಯ ಆಡಳಿತ ಮಹಿಳೆಯರ ಕೈ ಸೇರುವುದು ನಿಶ್ಚಿತವಾಗಿದೆ.

ಪುರಸಭೆಯ ಒಟ್ಟು ೨೩ ಸ್ಥಾನಗಳಲ್ಲಿ ಕಾಂಗ್ರೆಸ್ ೧೮ ಸ್ಥಾನಗಳನ್ನು ಪಡೆಯುವದರ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದು ಬಿಜೆಪಿ ೫ ಸ್ಥಾನಗಳನ್ನು ಪಡೆದುಕೊಂಡಿದೆ.

ವಾರ್ಡ್‌.೫ರ ಸದಸ್ಯೆ ಕಾಶೀಬಾಯಿ ಮರೆಪ್ಪ ಬೆಣ್ಣೂರಕರ್, ವಾರ್ಡ್‌.೬ರ ಸದಸ್ಯೆ ಬೇಬಿಬಾಯಿ ಸುಬಾಶ ಜಾಧವ, ವಾರ್ಡ್‌.೨೩ರ ಸದಸ್ಯೆ ಅನ್ನಪೂರ್ಣ ನಾಗಪ್ಪ ಕಲ್ಲಕ್ಕ್ ಪರಿಶಿಷ್ಟ ಜಾತಿ ಕ್ಷೇತ್ರಗಳಿಂದ ಚುನಾಯಿತರಾಗಿದ್ದು ಮೂವರು ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಮುಖಂಡರ ಮೇಲೆ ಒತ್ತಡ ತಂದು ಪೈಪೋಟಿ ನಡೆಸಿದ್ದಾರೆ.

ಉಪಾಧ್ಯಕ್ಷ ಸ್ಥಾನವು ಬಿಸಿಎ ಮಹಿಳೆಯರಿಗೆ ಮೀಸಲಾಗಿದ್ದು ಈ ಮೀಸಲಾತಿಯಡಿ ಒಟ್ಟು ೬ ಸದಸ್ಯರು ಚುನಾಯಿತರಾಗಿದ್ದಾರೆ. ವಾರ್ಡ್‌.೧ ಸದಸ್ಯೆ ಸುಮಂಗಲಾ ಸಣ್ಣೂರಕರ್, ವಾರ್ಡ್‌.೩ ರ ಶೀಲಾ ಕಾಶಿ, ವಾರ್ಡ್‌.೧೦ ಅತೀಯಾಬೇಗಂ ಅಹ್ಮದ ಶೇಠ, ವಾರ್ಡ್‌.೧೬ ರ ಸಹನಾಜ್ ಬೇಗಂ, ವಾರ್ಡ್‌.೧೭ರ ಖಾಜಾಬೀ ಆಡಕಿ ಆಕ್ಷಾಂಕ್ಷಿಗಳಿದ್ದು ಎಲ್ಲರೂ ಉಪಾಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟು ತಮ್ಮ ತಮ್ಮ ಮುಖಂಡರ ಮೂಲಕ ಹುದ್ದೆಗೇರಲು ಲಾಭಿ ನಡೆಸುತ್ತಿದ್ದಾರೆ.

ಚಿತ್ತಾಪುರ ಪುರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿರುವರಿಂದ ಇಲ್ಲಿ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಪ್ರಭಾವಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆರವರು ಸೂಚಿಸಿದವರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುವರು. ಆದರೂ ಆಕಾಂಕ್ಷಿಗಳು ತಮ್ಮ ಸಮಾಜದ ಮುಖಂಡರ ಮೂಲಕ ಒತ್ತಡ ತರುತ್ತಿದ್ದು, ಸಚಿವರ ಕೃಪೆ ಯಾರಿಗೆ ಒಲಿಯಲಿದೆಯೊ ಚುನಾವಣೆ ನಂತರ ಮಾತ್ರವೇ ಗೊತ್ತಾಗುತ್ತದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ