ವಾತಾವರಣದ ಏರುಪೇರು, ಬಿರು ಬೇಸಿಗೆ: ಹವಾಮಾವ ವೈಪರೀತ್ಯ

KannadaprabhaNewsNetwork | Published : Apr 18, 2024 2:15 AM

ಸಾರಾಂಶ

ಮಲೆನಾಡು-ಬಯಲು ಸೀಮೆಯ ಮಿಶ್ರ ಭೂಭಾಗವನ್ನು ಹೊಂದಿರುವ ತರೀಕೆರೆ ಮತ್ತು ಅಜ್ಜಂಪುರ ತಾಲೂಕು ಬಹಳ ಹಿಂದಿನಿಂದಲೂ ವಿವಿಧ ಬಗೆಯ ಮಾವು ಬೆಳೆಗಳಿಗೆ ಖ್ಯಾತಿ ಪದೆದಿದೆ. ರಾಜ್ಯ ಮತ್ತು ಹೊರ ರಾಜ್ಯಗಳ ಮಾವಿನ ಮಾರುಕಟ್ಟೆಯಲ್ಲಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಬೆಳೆಯುವ ರುಚಿಕಟ್ಟಾದ , ಅಷ್ಟೇ ಗುಣಮಟ್ಟದ ಹಾಗೂ ಆರೋಗ್ಯಕರ ಮಾವಿಗೆ ಬಹಳ ಬೇಡಿಕೆ ಇದೆ ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಇಳುವರಿ ತೀವ್ರವಾಗಿ ಕುಸಿದಿದೆ.

ತರೀಕೆರೆ ತಾಲೂಕಿನಲ್ಲಿ ಕುಸಿದ ಮಾವಿನ ಬೆಳೆ

ಅನಂತ ನಾಡಿಗ್ಕನ್ನಡಪ್ರಭ ವಾರ್ತೆ, ತರೀಕೆರೆ

ಮಲೆನಾಡು-ಬಯಲು ಸೀಮೆಯ ಮಿಶ್ರ ಭೂಭಾಗವನ್ನು ಹೊಂದಿರುವ ತರೀಕೆರೆ ಮತ್ತು ಅಜ್ಜಂಪುರ ತಾಲೂಕು ಬಹಳ ಹಿಂದಿನಿಂದಲೂ ವಿವಿಧ ಬಗೆಯ ಮಾವು ಬೆಳೆಗಳಿಗೆ ಖ್ಯಾತಿ ಪದೆದಿದೆ. ರಾಜ್ಯ ಮತ್ತು ಹೊರ ರಾಜ್ಯಗಳ ಮಾವಿನ ಮಾರುಕಟ್ಟೆಯಲ್ಲಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಬೆಳೆಯುವ ರುಚಿಕಟ್ಟಾದ , ಅಷ್ಟೇ ಗುಣಮಟ್ಟದ ಹಾಗೂ ಆರೋಗ್ಯಕರ ಮಾವಿಗೆ ಬಹಳ ಬೇಡಿಕೆ ಇದೆ ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಇಳುವರಿ ತೀವ್ರವಾಗಿ ಕುಸಿದಿದೆ.ಬೆಂಗಳೂರು-ಮುಂಬೈ, ಪೂನಾ, ಸಾಂಗ್ಲಿಯಾನ ಇತ್ಯಾದಿ ಮಾವಿನ ಮಾರುಕಟ್ಟೆಗಳಲ್ಲಿ ನಾ ಮುಂದು ತಾ ಮುಂದು ಎಂದು ಪೈಪೋಟಿಯಲ್ಲಿ ತರೀಕೆರೆ ಮಾವಿಗೆ ಸೀಸನ್ ಗೆ ಕಾದಿದ್ದು ಸಗಟಾಗಿ ಮತ್ತು ಚಿಲ್ಲರೆಯಾಗಿ ಗ್ರಾಹಕರು ಖರೀದಿ ಸುತ್ತಾರೆ. ತೆಳುವಾದ ಸಿಪ್ಪೆ-ಅಷ್ಟೇ ಚಿಕ್ಕದಾದ ಓಟೆ, ರುಚಿಯಾದ ತರೀಕೆರೆ ಮಾವಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ತರೀಕೆರೆ ಗದ್ದೆ ಮಾವು ಮತ್ತು ಚಿಕ್ಕ ಗಾತ್ರದ ಮಾವಿಗೆ ವಿದೇಶದಲ್ಲೂ ಅಪಾರ ಬೇಡಿಕೆ ಇದೆ.ತರೀಕೆರೆ ಮಾವಿನಲ್ಲಿ ಮಾವು ಜ್ಯೂಸ್ ತಯಾರಿಸಲು ಮಹಾರಾಷ್ಟ್ರ-ತಮಿಳುನಾಡುಗಳಲ್ಲಿ ಪಲ್ಪ್ ಫ್ಯಾಕ್ಟರಿಗಳು ಬಹು ದೊಡ್ಡ ಪ್ರಮಾಣದಲ್ಲಿದ್ದು, ತರೀಕೆರೆಯ ನಾಟಿ ಮಾವನ್ನು ಖರೀದಿಸುತ್ತಾರೆ.

ಬಾದಾಮಿ, ತೋತಾಪುರಿ, ರಸಪೂರಿ, ಸಿಂಧೂರ, ಮಲಗೋಬ, ಗದ್ದೆ ಮಾವು, ಅಡಪುಟ್ ಮಾವು ಹಾಗೂ ನಾಟಿ ಮಾವು ಈ ಭಾಗದ ಬಹು ಮುಖ್ಯ ಮಾವು ಬೆಳೆಯಾಗಿದ್ದು, ತರೀಕೆರೆ ತಾಲೂಕಿನ ಕಸಬಾ ಪ್ರದೇಶದಲ್ಲಿ, ಬೆಟ್ಟದಹಳ್ಳಿ, ಲಿಂಗದ ಹಳ್ಳಿ, ಮುಂಡ್ರೆ, ದೋರನಾಳು, ನಂದಿ ಹೊಸೂರು, ಅಮೃತಾಪುರ ಹೋಬಳಿ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಅಜ್ಜಂಪುರ ತಾಲೂಕಿನ ಸೊಕ್ಕೆ, ಮಾಕನಹಳ್ಳಿ ಮತ್ತಿತರ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಬಗೆ ಉತ್ತಮ ಗುಣಮಟ್ಟದ ಮಾವು ಬೆಳೆಯನ್ನು ರೈತರು ಬೆಳೆಯುತ್ತಾರೆ.ಕ್ಷೀಣಿಸಿದ ಮಾವು ಬೆಳೆಃ ಮರದಲ್ಲಿ ಎಲೆ ಟೊಂಗೆಗಳೇ ಕಾಣದಂತೆ ಮಾವಿನ ತೋಪಿನ ಮರಗಳ ತುಂಬಾ ಚಿಕ್ಕದರಿಂದ ಹಿಡಿದು ಭಾರೀ ಗಾತ್ರದ ಮಾವಿನ ಕಾಯಿಗಳು ತುಂಬಿ ಮರದ ಟೊಂಗೆಗಳು ನೆಲದ ತನಕ ಕಾಯಿಗಳ ಭಾರದಿಂದ ಜಗ್ಗಬೇಕಾಗಿದ್ದ ಈ ಭೂಭಾಗದ ಮಾವಿನ ತೋಪಿನಲ್ಲಿ, ಕಳೆದ 2 ವರ್ಷಗಳಿಂದ ಮಾವಿನ ಮರಗಳು ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿದು ಹೋಗಿದೆ., ಉತ್ತಮ ಮಾವಿನ ಕಾಯಿ ಬೆಳೆಗೆ ಸೂಕ್ತವಾಗಿ ಆಯಾ ಕಾಲ ಕಾಲಕ್ಕೆ ಪ್ರ-ಪ್ರಕೃತಿದತ್ತವಾದ ನಿಗಧಿತ ವಾತಾವರಣವೇ ಬಹಳ ಮುಖ್ಯ, ಮಾವು ಬೆಳೆಗೆ ವಾತಾವರಣದಲ್ಲಿ ಸ್ವಲ್ಪ ಏರುಪೇರಾದರೂ ಮಾವಿನ ಮರ ಸಹಿಸುವುದಿಲ್ಲ, ಪರಿಣಾಮವಾಗಿ ಮಾವಿನ ಹೂವು ಮತ್ತು ಹೀಚು ಉದುರಿಹೋಗುತ್ತದೆ. ಮಾವು ಬಹಳ ಸೂಕ್ಷ್ಮವಾದ ಬೆಳೆ, ಮಾವಿನ ಮರಗಳು ವಾತಾವರಣವನ್ನು ಬಹಳ ಶೀಘ್ರವಾಗಿ ಅರ್ಥಮಾಡಿಕೊಳ್ಳುತ್ತದೆ. ಬಿರು ಬಿಸಲಿನ ತಾಪಮಾನದಿಂದ ಎಷ್ಟೋ ಪ್ಲಾಂಟೇಶನ್ ಗೂ ಕೂಡ ತೊಂದರೆಯಾಗುತ್ತದೆ.ಕಳೆದ 2 ವರ್ಷಗಳಿಂದ ವಾತಾವರಣದ ಏರುಪೇರಿನಿಂದ ತರೀಕೆರೆ ತಾಲೂಕಿನದಲ್ಲಿ ಮಾವು ಬೆಳೆ ಗಣನೀಯವಾಗಿ ಕುಸಿದಿದೆ. ಹೆಚ್ಚಿದ ಬೇಸಿಗೆಯಿಂದ ಮಾವಿನ ಹೀಚು ಉದುರಿ ಹೋಗುತ್ತದೆ. ಸಾಮಾನ್ಯವಾಗಿ ನವೆಂಬರ್ ಡಿಸೆಂಬರ್‌ ನ ಲ್ಲಿ ಮಾವಿನ ಮರದಲ್ಲಿ ಹೂ ಕಟ್ಟುತ್ತದೆ, ಜನವರಿ ಫೆಬ್ರವರಿ ಮಾಹೆಯಲ್ಲಿ ಹೂ ಹೀಚಾಗಿ ಬಲಿಯುತ್ತ ಹೋಗುತ್ತದೆ. ಇಂತಹ ಸಮಯದಲ್ಲಿ ಈ ಭಾಗದಲ್ಲಿ ಬಿರು ಬೇಸಿಗೆ ಮಾವಿಗೆ ಅನುಕೂಲಕರವಲ್ಲದ ವಾತಾವರಣ, ಹವಾಮಾನ ವೈಪರೀತ್ಯದಿಂದ ಹೆಚ್ಚು ತಾಪಮಾನದಿಂದ ಎಳೆ ಸಣ್ಣ ಕಾಯಿಗಳು ಉದುರುವ ಸಂದರ್ಭವೇ ಹೆಚ್ಚು ಕಾಣಿಸಿಕೊಂಡಿತು. ಮರದಲ್ಲಿ ಕಟ್ಟಿರುವ ಕಾಯಿಗಳು ಬಿರು ಬೇಸಿಗೆಯಿಂದಾಗಿ ಉದುರಿಹೋಗುತ್ತದೆ ಮತ್ತು ಹವಾಮಾನ ವೈಪರೀತ್ಯದಿಂದ ಈ ವರ್ಷದ ಮಾವು ಬೆಳೆ ಕುಸಿದಿದೆ. ರೈತರಿಗೆ ನಷ್ಯವಾಗಿದೆ. ಕೋಟ್ಃ

ಹವಾಮಾನದ ವೈಪರೀತ್ಯದಿಂದ ತರೀಕೆರೆ ತಾಲೂಕಿನಲ್ಲಿ ಕಳೆದ 2 ವರ್ಷಗಳಿಂದಲೂ ಮಾವಿನ ಬೆಳೆ ಗಣನೀಯವಾಗಿ ಕುಸಿದಿದೆ. ಏಪ್ರಿಲ್-ಮೇ ಬಂತೆಂದರೆ ತೋಪಿನ ಮಾವಿನ ಮರಗಳಲ್ಲಿ ಎಲೆ ಟೊಂಗೆಗಳೇ ಕಾಣಿಸದಷ್ಟು ರೀತಿಯಲ್ಲಿ ಮರ ಮಾವಿನ ಕಾಯಿಯಿಂದ ತುಂಬಿರ ಬೇಕಾಗಿತ್ತು,

ಆದರೆ ಆ ವಾತಾವರಣ ಇಂದು ಇಲ್ಲ, ಇದರಿಂದ ರೈತರಿಗೆ ನಷ್ಟವಾಗಿದೆ ಎಂದು ಪ್ಪಮುಖ ಮಾವು ಬೆಳೆಗಾರರಾದ ದೋರನಾಳು ಅಸ್ಲಾಂಖಾನ್ ಅವರು ತಿಳಿಸಿದ್ದಾರೆ.ಕೋಟ್ಃ

ಮಾವು ಬೆಳೆಯಲ್ಲಿ 1 ವರ್ಷ ಉತ್ತಮ ಇಳುವರಿ ಇದ್ದರೆ, ಮುಂದಿನ ವರ್ಷದಲ್ಲಿ ಇಳುವರಿ ಕಡಿಮೆ ಯಾಗುತ್ತದೆ, ಇದು ಮಾವಿನ ಸಹಜಗುಣ. ಈ ವರ್ಷ ಮಾವು ಬೆಳೆ ಇಳುವರಿ ಕಡಿಮೆಯಾಗಿರುತ್ತದೆ. ಈ ಬಾರಿ ಮಾವು ಬೆಳೆಗೆ ಪೂರಕ ವಾತಾವರಣ ಇಲ್ಲದ್ದರಿಂದ ಮಾವು ಇಳುವರಿ ಕಡಿಮೆಯಾಗಿದೆ ಎಂದು ತರೀಕೆರೆ ತಾಲೂಕು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಕೆ. ಯತಿರಾಜ್ ತಿಳಿಸಿದ್ದಾರೆ.-

17ಕೆಟಿಆರ್.ಕೆ.1ಃ ಮಾವಿನ ಕಾಯಿ ಇಲ್ಲದೆ ಬರೀ ಮಾವಿನ ಮರ 17ಕೆಟಿಆರ್.ಕೆ.2ಃ ಪ್ರಮುಖ ಮಾವು ಬೆಳೆಗಾರರು, ದೋರನಾಳು ಅಸ್ಲಾಂಖಾನ್ 17ಕೆಟಿಆರ್.ಕೆ.3ಃ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಕೆ.ಯತಿರಾಜ್

Share this article