ಕನ್ನಡಪ್ರಭ ವಾರ್ತೆ ಕೊರಟಗೆರೆ
ತುಮಕೂರು ನಗರದಲ್ಲಿ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದಿ ಕಾಮಗಾರಿಗಳಿಗೆ ಡಾ.ಜಿ.ಪರಮೇಶ್ವರವರ ಸೂಚನೆಯಂತೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ೧೦ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವಥ ನಾರಾಯಣ ತಿಳಿಸಿದರು. ಪಟ್ಟಣದ ರಾಜೀವ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಡಿಸೆಂಬರ್ ೨ ರ ಸೋಮವಾರ ಬೆಳ್ಳಿಗೆ ೧೦.೩೦ ಗಂಟೆಗೆ ತುಮಕೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ೧೨೫೯.೨೧ ಕೋಟಿ ರೂಗಳ ತುಮಕೂರು ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖಾ ಯೋಜನೆಗಳ ಫಲಾನುಭವಿಗಳ ಸವಲತ್ತು ವಿತರಣಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಸರ್ಕಾರದ ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಮತ್ತು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ನವರ ಮುಂಚಿಣಿಯಲ್ಲಿ ಈ ಬೃಹತ್ ಸಮಾರಂಭ ನಡೆಯಲ್ಲಿದ್ದು ಈ ಕಾರ್ಯಕ್ರಮಕ್ಕೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಿಂದ ೧೦ ಹೆಚ್ಚು ಫಲಾನುಭವಿಗಳು, ಜನರು, ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದು ಬರುವವರಿಗೆ ಪಂಚಾಯಿತಿವಾರು ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸರ್ಕಾರ ಕೊಡುತ್ತಿರುವ ಗ್ಯಾರೆಂಟಿಗಳ ಯೋಜನೆಗಳ ೬೦,೦೦೦ ಕೋಟಿ ಗಳ ಹಣ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದವರ ಕುಟುಂಬಕ್ಕೂ ಹೋಗುತ್ತಿದೆ ಸಾಮಾನ್ಯ ಜನರಿಗೂ ಹೋಗುತ್ತಿದೆ ವಿರೋಧ ಪಕ್ಷದವರು ಇದನ್ನ ಅರ್ಥ ಮಾಡಿಕೊಳ್ಳಬೇಕು, ಈ ಗ್ಯಾರೆಂಟಿ ಹಣವೇ ನಿಜವಾಗಿ ಬಡವರ ಕೈಗೆ ನೇರವಾಗಿ ಸೇರುತ್ತಿರುವುದು, ಈ ಯೋಜನೆಗಳನ್ನು ಈಗ ಬಿಜೆಪಿ ಪಕ್ಷ ಸಹಿತ ರಾಜ್ಯದಲ್ಲಿ ಎಲ್ಲಾ ಪಕ್ಷಗಳ ಸರ್ಕಾರಗಳು ಅನುಸರಿಸುತ್ತಿವೆ ಎಂದು ತಿಳಿಸಿದರು.ಸರ್ಕಾರವು ಅಭಿವೃದ್ಧಿಯಲ್ಲಿ ಕಾಮಗಾರಿಗಳಿಗೂ ಹಣ ನೀಡಿದೆ ಎನ್ನುವುದಕ್ಕೆ ಸೋಮವಾರ ೧೨೫೯ ಕೋಟಿ ರುಗಳ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡುತ್ತಿರುವುದೇ ಸಾಕ್ಷಿಯಾಗಿದೆ. ಇದನ್ನು ಅಚ್ಚುಕಟ್ಟಾಗಿ ನಮ್ಮ ಗೃಹ ಸಚಿವರು ಆಯೋಜಿಸಿದ್ದಾರೆ. ಈ ಕಾಮಗಾರಿಗಳಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಸುಮಾರು ೧೩೦ ಕೋಟಿ ಅಭವೃದಿ ಕಾಮಗಾರಿಗಳು ಸೇರಿವೆ ಕ್ಷೇತ್ರದ ಜನತೆ ಈ ಕಾರ್ಯಕ್ರಮಕ್ಕೆ ಹಚ್ಚಿನ ಜನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು. ಇದೆ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ಕೆ.ಪಿ.ಸಿ.ಸಿ ಸದಸ್ಯ ಎ.ಡಿ.ಬಲರಾಮಯ್ಯ, ಪ.ಪಂ ಸದಸ್ಯ ಕೆ.ಆರ್.ಓಬಳರಾಜು, ಮುಖಂಡರುಗಳಾದ ಮೈಲಾರಪ್ಪ, ಈಶ್ವರಯ್ಯ, ರಂಗರಾಜು, ಕವಿತಾ ವಿದ್ಯಾ, ಜಯರಾಮ್, ಗಣೇಶ್, ಟಿ.ಸಿ.ರಾಮಯ್ಯ ಹನುಮಾನ್, ಕುಮಾರ್, ವೆಂಕಟಪ್ಪ, ಉಮಾಶಂಕರ್, ಆನಂದ್, ಹನುಮಂತ್, ಮುನ್ನಾಭಾಯ್, ಮಹೇಶ್, ದೊಡ್ಡಯ್ಯ, ಮೂರ್ತಿ, ಗೋಪಿ, ಬೈರೇಸ್, ದೀಪಕ್, ಭರತ್, ಚೌದರಿ, ರಿಯಾಜ್ ಸೇರಿದಂತೆ ಇತರರು ಹಾಜರಿದ್ದರು.