ನಾಳೆ ಅರ್ಚಕ ರಾಮಚಾರಗೆ ಶ್ರೀ ವಿಜಯಶ್ರೀ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ ಗಂಗಾವತಿಇಲ್ಲಿಯ ವಿಜಯದಾಸ ಭಕ್ತಮಂಡಳಿಯ 22ನೇ ವರ್ಷದ ವಿಜಯ ಕವಚ ಸಮರ್ಪಣಾ ಹಾಗೂ 269ನೇ ವಿಜಯದಾಸರ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ನ.9 ರಿಂದ 11 ರವರೆಗೆ ಕಾರ್ಯಕ್ರಮಗಳು ಜರುಗಲಿದ್ದು, ಶನಿವಾರ ಬೆಳಗ್ಗೆ ಶ್ರೀಪಾದ ಯರಡೋಣಿ ಇವರ ನಿವಾಸದಲ್ಲಿ ಶ್ರೀ ವಿಜಯ ಕವಚ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಸಂಜೆ ಸುಂಕದ ಕಟ್ಟೆ ಪ್ರಾಣದೇವರ ದೇವಸ್ಥಾನದಿಂದ ಶ್ರೀರಾಘವೇಂದ್ರಸ್ವಾಮಿಗಳ ಮಠದವರೆಗೂ ಶ್ರೀಮನ್ಮದ್ವಾಚಾರ್ಯರ ಸರ್ವಮೂಲ ಗ್ರಂಥಗಳೊಂದಿಗೆ ಶೋಭಾಯಾತ್ರೆ ಜರುಗಿತು. ವಿವಿಧ ಭಜನಾ ಮಂಡಳಿಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ರಾಮಕೃಷ್ಣ ಜಾಹಗಿರದಾರ, ಭೀಮಾಚಾರ ನವಲಿ, ಗುರುರಾಜ್ ರಾವ್, ಸಾಮಾವೇಧ ಗುರುರಾಜಾಚಾರ, ಸುಶಿಲೇಂದ್ರಚಾರ, ಹನುಮೇಶಚಾರ ದಿಗ್ಗಾವಿ, ಲಕ್ಷ್ಮೀಕಾಂತ ಹೇರೂರು, ಸ್ವಾಮೀರಾವ ಹೇರೂರು, ಎನ್. ಪ್ರಹ್ಲಾದ ರಾವ್, ಹನುಮಂತರಾವ ಅಯೋಧ್ಯ, ರಾಮು ಯರಡೋಣಿ, ವಾಸುದೇವ ನವಲಿ, ಸುಧೀರ್ ನವಲಿ, ಯೋಗೇಂದ್ರ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.10ರಂದು ಪೂರ್ವರಾಧನೆ:ವಿಜಯದಾಸರ ಪೂರ್ವರಾಧನೆ ನಿಮಿತ್ತ ನ. 10ರಂದು ಬೆಳಗ್ಗೆ ವಿಜಯ ಕವಚ ಪಾರಾಯಣ, ನಂತರ ಬೆಳಗ್ಗೆ 11 ಗಂಟೆಗೆ ಭಾಗವತದಲ್ಲಿ ಶ್ರೀ ವಿಜಯದಾಸರು ಕುರಿತು ವಿಜಯಧ್ವಜ ವಿದ್ಯಾಪೀಠದ ಅಧ್ಯಾಪಕರಾದ ವಿದ್ವಾನ್ ವಾಗೀಶಚಾರ ಗೋರೆಬಾಳ್ ಇವರಿಂದ ವಿಶೇಷ ಉಪನ್ಯಾಸ ಜರುಗಲಿದೆ. ಸಾಯಾಂಕಾಲ 5 ಗಂಟೆಗೆ ವಿಜಯ ವಿಠಲ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ನಂತರ ದಾಸ ಪರಂಪರೆ ಕುರಿತು ಹುಬ್ಬಳ್ಳಿಯ ವಿದ್ವಾನ್ ಡಾ. ಸತ್ಯಮೂರ್ತಿಚಾರ ಅವರಿಂದ ಉಪನ್ಯಾಸ ನಡೆಯಲಿದೆ.
ನ.11ಕ್ಕೆ ಮಧ್ಯಾರಾಧನೆ:ವಿಜಯದಾಸರ ಮಧ್ಯಾರಾಧನೆ ನಿಮಿತ್ತ ವಿಜಯ ಕವಚ ಪಾರಾಯಣ, ಸಮರ್ಪಣೆ ನ.11ರ ಬೆಳಗ್ಗೆ 1 ಗಂಟೆಗೆ ಜರುಗಲಿದೆ. ನಂತರ ಶ್ರೀ ವಿಜಯ ವೈಭವ ಕುರಿತು ಸುಸ್ವರಂ ನಾಗೇಂದ್ರ ಕುಮಾರ ಆಧೋನಿ ಅವರಿಂದ ಉಪನ್ಯಾಸ ಜರುಗಲಿದೆ.
ಸಾಯಂಕಾಲ 6 ಗಂಟೆಗೆ ಮಾನ್ವಿಯ ವಿಜಯದಾಸರ ಕಟ್ಟೆಯ ಚೀಕಲಪರ್ವಿಯ ಅರ್ಚಕ ರಾಮಚಾರ ಅವರಿಗೆ ಶ್ರೀ ವಿಜಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿಜಯದಾಸ ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.