ಕನ್ನಡಪ್ರಭ ವಾರ್ತೆ, ಕಡೂರು
ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಕಡೂರು ವಿಧಾನಸಭಾ ಕ್ಷೇತ್ರದ ಅಣ್ಣೀಗೆರೆ ಗ್ರಾಮದಲ್ಲಿ ರಾಜೀವ್ ಗಾಂಧಿ ನೂತನ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಅಧಿಕಾರ ವಿಕೇಂದ್ರೀಕರಣ ಚಿಂತನೆಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಕನಸು ಕಂಡವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ. ಅದನ್ನು ಸಮರ್ಥವಾಗಿ ಕರ್ನಾಟಕದಲ್ಲಿ ಅನುಷ್ಠಾನಗೊಳಿಸಿದವರು ರಾಮಕೃಷ್ಣ ಹೆಗಡೆ. ಸ್ಥಳೀಯ ಗ್ರಾಪಂ ನರೇಗಾ ಯೋಜನೆ ಮೂಲಕ ಯಾವುದೇ ಕಾಮಗಾರಿಗಳನ್ನು ಮಾಡಬಹುದು. ಕೆಪಿಎಸ್ ಶಾಲೆಯನ್ನು ಸಮೀಪದ ಯಗಟಿ ಗ್ರಾಮಕ್ಕೆ ನೀಡಲಾಗಿದೆ. ಗ್ರಾಪಂ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ಮಾತನಾಡಿ, ಗ್ರಾಮಾಡಳಿತಕ್ಕೆ ಬೇಕಾದ ಸುಸಜ್ಜಿತ ಕಟ್ಟಡದ ಕನಸು ನನಸಾಗಿದೆ. ನರೇಗಾ ಯೋಜನೆಯ 35ಲಕ್ಷ ರು. ಅನುದಾನದಲ್ಲಿ ಕಟ್ಟಡ ನಿರ್ಮಾಣವಾಯಿತು. ಕಾಂಪೌಂಡ್ ಮತ್ತು ಪೀಠೋಪಕರಣಗಳಿಗೆ ಶಾಸಕರು 7.5 ಲಕ್ಷ ರು. ಅನುದಾನ ನೀಡಿದರು. ಎಲ್ಲರ ಸಹಕಾರ ಮತ್ತು ಪ್ರಯತ್ನ ಇದ್ದರೆ ಗ್ರಾಮಾಭಿವೃದ್ಧಿ ಸಾಧ್ಯ ಎಂಬುದಕ್ಕೆ ಇದೇ ಸಾಕ್ಷಿ. ಈ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ, ಕೆಪಿಎಸ್ ಶಾಲೆ ಅಗತ್ಯವಿದ್ದು ಶಾಸಕರು ಗಮನ ಹರಿಸಬೇಕು ಎಂದು ಕೋರಿದರು.ತಾಪಂ ಇಓ ಸಿ.ಆರ್.ಪ್ರವೀಣ್,ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀದೇವಿ ಓಂಕಾರಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರು, ಗುಜ್ಜೇನಹಳ್ಳಿ ಶಂಕರಪ್ಪ, ಪಿಡಿಓ ನವೀನ್ ಇದ್ದರು. ಯಶಸ್ವಿನಿ ಯೋಗ ಸಂಸ್ಥೆ ವಿದ್ಯಾರ್ಥಿನಿಯರಿಂದ ಯೋಗ ಪ್ರದರ್ಶನ ನಡೆಯಿತು.
-- ಬಾಕ್ಸ್ ---9 ನೇ ಮೈಲಿಕಲ್ಲಿನಲ್ಲಿನ ಸರಕಾರಿ ಪ್ರೌಢಶಾಲೆ ಖಾಸಗಿ ಶಾಲೆಗಿಂತ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿಗೆ ಬೇಕಾದ ಸವಲತ್ತುಗಳನ್ನೂ ಒದಗಿಸುವ ಕಾರ್ಯಕ್ಕೆ ಮುಂದಾಗುತ್ತೇನೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿಗೆ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ. ಪಶು ಆಸ್ಪತ್ರೆ ಅಗತ್ಯವಿದ್ದು ಅದಕ್ಕಾಗಿ ಪ್ರಯತ್ನಿಸುತ್ತೇನೆ. ಭಧ್ರಾ ಯೋಜನೆಯ ಭೂ ಸ್ವಾಧೀನ ಪರಿಹಾರದ ವಿಚಾರದಲ್ಲಿ ರೈತರಿಗೆ ಪರಿಹಾರ ನೀಡಿಕೆಯಲ್ಲಿ ಸಮಸ್ಯೆಯಿದ್ದು, ಶೀಘ್ರದಲ್ಲೆ ಬಗೆಹರಿಸುವತ್ತ ಗಮನ ಹರಿಸಿದ್ದೇನೆ
- ಶಾಸಕ ಕೆ.ಎಸ್.ಆನಂದ್14ಕೆಕೆಡಿಯು2..ಶಾಸಕ ಕೆ.ಎಸ್.ಆನಂದ್ ರವರು ಕಡೂರು ವಿಧಾನಸಭಾ ಕ್ಷೇತ್ರದ ಅಣ್ಣೀಗೆರೆ ಗ್ರಾಮದಲ್ಲಿ ನೂತನ ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿದರು.