-ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲಿ ಒತ್ತಡದಿಂದ ಮುಕ್ತಿ
-----ಕನ್ನಡಪ್ರಭ ವಾರ್ತೆ ರಾಯಚೂರು:
ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಕೆಲಸದ ಒತ್ತಡದಿಂದ ಮುಕ್ತಿ ದೊರೆಯಲಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಾರುತಿ ಬಗಾಡೆ ಮೆಚ್ಚುಗೆ ವ್ಯಕ್ತಪಡಿಸಿದರು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ರಾಯಚೂರು ಜಿಲ್ಲಾ ವಕೀಲರ ಸಂಘದಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಕೀಲರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಪ್ರತಿದಿನವೂ ಒತ್ತಡದ ಕೆಲಸದಲ್ಲಿ ನಿರತರಾಗಿರುವ ವಕೀಲರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ, ವಕೀಲರು ತಮ್ಮ ಕೆಲಸದ ಒತ್ತಡದ ನಡುವೆ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಹಾಗೂ ಜಿಲ್ಲೆಯ ಎಲ್ಲ ತಾಲೂಕು ಮಟ್ಟದ ಸಂಘದ ವಕೀಲರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವುದು ಸಂತೋಷದ ವಿಷಯವಾಗಿದೆ ಎಂದರು.
ಎರಡನೆಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಹತ್ತಿಕಾಳು ಪ್ರಭು ಸಿದ್ದಪ್ಪ ಮಾತನಾಡಿ, ಕ್ರೀಡಾಕೂಟವನ್ನು ಆಯೋಜನೆ ಮಾಡುವ ಮೂಲಕ ವಕೀಲರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸುವಂಥ ಉತ್ತಮ ಕೆಲಸವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ರಾಯಚೂರು ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ವಕೀಲ ಎನ್.ಶಿವಶಂಕರ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಜೀರ ಅಹ್ಮದ್, ಜಂಟಿ ಕಾರ್ಯದರ್ಶಿ ಹನುಮಂತಪ್ಪ ಮೇಟಿ, ಖಂಚಾಚಿ ಸೈಯ್ಯದ್ ನವಾಜ್, ವಕೀಲರಾದ ಶ್ರೀಧರಎಲಿ,ರಾಮು, ಲೋಕಶ್, ಮಲ್ಲಿಕಾರ್ಜುನಗೋನಳ, ಮಾನ್ವಿ ಅಧ್ಯಕ್ಷ ರವಿ ಪಾಟೀಲ್ ಮಸ್ಕಿ ಅಧ್ಯಕ್ಷ ಈರಪ್ಪ ದೇಸಾಯಿ, ಲಿಂಗಸುಗೂರ ಕಾರ್ಯದರ್ಶಿ ಆನಂದ ರಾಥೋಡ ಸಿಂಧನೂರ ವಕೀಲರಾದ ವೀರೇಶ ಚಿಂಚರಿಕಿ ಉಪಸಿತದ್ದರು. ಲಕ್ಮಪ್ಪ ಭಂಡಾರಿ ಸ್ವಾಗತಿಸಿದರು. ಚನ್ನಪ್ಪಮಲ್ಲಪ್ಪ ನಿರೂಪಿಸಿದರು.--------------------
ಫೋಟೋ: 10ಕೆಪಿಆರ್‌ಸಿಆರ್01: ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಕೀಲರ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರಧಾನ ಜಿಲ್ಲಾ ಸತ್ರ ನ್ಯಾ. ಮಾರುತಿ ಬಗಾಡೆ ಉದ್ಘಾಟಿಸಿ ಮಾತನಾಡಿದರು.