ಕಾಟನ್ ಮಾರ್ಕೆಟ್ ಲೀಜ್‌ ವಿಷಯದಲ್ಲಿ ಪರಸ್ಪರ ವಾಗ್ವಾದ

KannadaprabhaNewsNetwork |  
Published : Sep 27, 2025, 02:00 AM IST
ನಗರದ ಕಾಟನ್ ಮಾರ್ಕೇಟ್ ಲೀಜ ಮುಂದುವರೆಸುವ ಕುರಿತು ಮತ್ತೆ ಪ್ರತಿಧ್ವನಿ - ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ, ವಿರೋಧ ಪಕ್ಷದ ನಡುವೇ ವಾಕ್ಸಮರ | Kannada Prabha

ಸಾರಾಂಶ

ನಗರದ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಹಳೇ ಬಾಗಲಕೋಟೆ ನಗರದ ಕಾಟನ್ ಮಾರ್ಕೆಟ್ ನ ಲೀಜ್‌ ಮುಂದುವರಿಸುವ ವಿವಾರ ಮತ್ತೆ ಪ್ರತಿಧ್ವನಿಸಿ, ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ, ವಿರೋಧ ಪಕ್ಷದ ನಡುವೇ ವಾಕ್ಸಮರಕ್ಕೆ ಕಾರಣವಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಹಳೇ ಬಾಗಲಕೋಟೆ ನಗರದ ಕಾಟನ್ ಮಾರ್ಕೆಟ್ ನ ಲೀಜ್‌ ಮುಂದುವರಿಸುವ ವಿವಾರ ಮತ್ತೆ ಪ್ರತಿಧ್ವನಿಸಿ, ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ, ವಿರೋಧ ಪಕ್ಷದ ನಡುವೇ ವಾಕ್ಸಮರಕ್ಕೆ ಕಾರಣವಾಯಿತು.

ನಗರಸಭೆ ಸಭಾಭವನದಲ್ಲಿ ಅಧ್ಯಕ್ಷೆ ಸವಿತಾ ಲೆಂಕೆನ್ನವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಾಟನ್ ಮಾರ್ಕೆಟ್ ವಿಷಯ ಪ್ರಸ್ತಾಪವಾಗುತ್ತಿದ್ದಂತೇ ಲೀಜ್ ಮುಂದುವರಿಸಲು ಬಿಜೆಪಿ ಸದಸ್ಯರು ಒಕ್ಕೂರಲಿನ ಧ್ವನಿಮೊಳಗಿಸಿದರು. ಆದರೆ, ಕಾಂಗ್ರೆಸ್ ಸದಸ್ಯರು ತೀವ್ರ ಆಕೇಪ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಲೀಜ್ ಮುಂದುವರಿಸಬಾರದು. ಕಾನೂನು ಪ್ರಕಾರ ನಗರಸಭೆಗೆ ಮಾರ್ಕೆಟ್ ಪಡೆದುಕೊಳ್ಳಬೇಕು. ರೋಸ್ಟರ್ ಅನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಎಲ್ಲ ಜಾತಿ ಜನರಿಗೆ ಲೀಜ್‌ ನೀಡಬೇಕು. ಕೇವಲ ಶ್ರೀಮಂತರಿಗೆ ಮಾತ್ರ ಅದು ದೊರೆಯುವಂತಾಗಬಾರದು ಎಂದು ಆಗ್ರಹಿಸಿದರು.ಇದರಿಂದ ಕೆಲಕಾಲ ಸಭೆಯಲ್ಲಿ ಗೊಂದಲ ಏರ್ಪತ್ತು, ಬಿಜೆಪಿ, ಕಾಂಗ್ರೆಸ್ ಸದಸ್ಯರು ಪರಸ್ಪರ ವಾಗ್ದಾಳಿ ನಡೆಸಿದರು. ಶಾಸಕ ಎಚ್.ವೈ. ಮೇಟಿ ಅವರು ಮಧ್ಯೆ ಪ್ರವೇಶಿಸಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ವಿ.ಪ. ಸದಸ್ಯ ಪಿ.ಎಚ್.ಪೂಜಾರ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ನಿರ್ಧಾರ ಮಾಡೋಣ ಎಂದು ಹೇಳಿ ತೆರೆ ಎಳೆಯಲು ಯತ್ನಿಸಿದರು. ಆದರೆ, ಬಿಜೆಪಿ ಸದಸ್ಯರು ಆಡಳಿತದಲ್ಲಿರುವ ನಮ್ಮ ಅಭಿಪ್ರಾಯದಂತೆ ನಿರ್ಧಾರ ಮಾಡಬೇಕು. ಲೀಜ್ ಮುಂದುವರಿಸಬೇಕು. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.ನಂತರ ಶಾಸಕ ಎಚ್.ವೈ. ಮೇಟಿ ಮಾತನಾಡಿ, ಶಾಸಕರ ವಿಶೇಷ ಅನುದಾನದಲ್ಲಿ ಪ್ರತಿ ವಾರ್ಡ ಗೆ ₹8 ಲಕ್ಷ ಅನುದಾನ ನೀಡಲಾಗುವುದು. ನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮುಳುಗಡೆ ನಗರಿ ಬಾಗಲಕೋಟೆ ಸಮಗ್ರ ಅಭಿವೃದ್ಧಿಗೆ ಈ ಅನುದಾನ ಸದ್ಬಳಕೆ ಮಾಡಬೇಕು ಎಂದು ತಿಳಿಸಿದರು.ನಗರಸಭೆ ಉಪಾಧ್ಯಕ್ಷೆ ಶೋಭಾರಾವ, ಸಭಾಪತಿ ಯಲ್ಲಪ್ಪ ನಾರಾಯಣಿ, ಸದಸ್ಯರಾದ ಶ್ರೀನಾಥ ಸಜ್ಜನ, ಶಶಿಕಲಾ ಮಜ್ಜಗಿ, ಬಸವರಾಜ ಅವರಾದಿ, ಸ್ಮೀತಾ ಪವಾರ, ರತ್ನಾ ಕೆರೂರ, ಹಾಜಿಸಾಬ ದಂಡಿನ, ತಿಪ್ಪಣ್ಣ ನೀಲನಾಯಕ, ಚನ್ನವೀರ ಅಂಗಡಿ, ಶಂಕರ ತಪಶೆಟ್ಟಿ, ಚನ್ನಯ್ಯ ಹಿರೇಮಠ, ನಗರಸಭೆ ಆಯುಕ್ತ ಆರ್.ವಾಸಣ್ಣ ಇದ್ದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ