ಕನ್ನಡಪ್ರಭ ವಾರ್ತೆ ಇಂಡಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆಸಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಬಳಿಸಿದೆ ಎಂದು ಆರೋಪಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇಂಡಿ ಅಸೆಂಬ್ಲಿ ಹಾಗೂ ಯುಥ್ ಬ್ಲಾಕ್ ಕಾಂಗ್ರೆಸ್, ಬಳ್ಳೊಳ್ಳಿ, ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಹಾಗೂ ಎನ್ಎಸ್ ಯು ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಜಾವೀದ ಮೋಮಿನ, ಅವಿನಾಶ ಬಗಲಿ, ಪ್ರಶಾಂತ ಕಾಳೆ, ಬಿಜೆಪಿ ದೇಶದಲ್ಲಿನ ಪವಿತ್ರ ಮತದಾನ ವ್ಯವಸ್ಥೆಯನ್ನು ಹಾಳು ಮಾಡಿ ಅಧಿಕಾರಕ್ಕೆ ಬಂದಿದೆ. ಬೇರೆ ಬೇರೆ ಕಳ್ಳತನ ಮಾಡುವುದನ್ನು ಕಂಡಿದ್ದೇವು. ಆದರೆ, ಮತಗಳನ್ನೂ ಕಳವು ಮಾಡಿ ಅದರ ಶ್ರೇಷ್ಠತೆಗೆ ಕಳಂಕ ತಂದ ಘೋರ ಅಪರಾಧವನ್ನು ದೇಶ ಎಂದೂ ಕಂಡಿಲ್ಲ. ಬೇರೆ ಕಳ್ಳರನ್ನು ಜೈಲಿಗೆ ಅಟ್ಟಲಾಗುತ್ತದೆ. ಆದರೆ ಪ್ರಜಾಪ್ರಭುತ್ವ ವಿರೋಧಿಯಾಗಿರುವ ಮತಗಳ್ಳರು ರಾಜಾರೋಷವಾಗಿ ಅಧಿಕಾರ ನಡೆಸಿದ್ದು, ತಕ್ಷಣ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಕ್ಷಿ ಸಮೇತ ತೋರಿಸಿಕೊಟ್ಟಿದ್ದಾರೆ. ಮಹಾರಾಷ್ಟ್ರ, ಇತರೆ ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆಯೂ ಮತಗಳ್ಳತನ ಆಗಿರುವುದನ್ನು ಬಹಿರಂಗಗೊಳಿಸಿದ್ದಾರೆ ಎಂದು ಹೇಳಿದರು.ಮತ ಕಳವು ಮಾಡಿರುವ ಬಿಜೆಪಿ ಹಾಗೂ ಸಹಕರಿಸಿರುವ ಚುನಾವಣಾ ಆಯೋಗದ ವಿರುದ್ಧ ಇಂಡಿ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಸ್ಟಾಪ್ ಮತಗಳ್ಳತನ ಎಂಬ ಸ್ಟಿಕ್ಕರ್‌ಗಳನ್ನು ಬಸ್‌ಗಳಿಗೆ ಅಂಟಿಸಿ ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಲಿಂಬಾಜಿ ರಾಥೋಡ , ಭೀಮಾ ಶಂಕರ್ ಮೂರಮನ, ಅಯೂಬ್ ಬಾಗವಾನ, ಸತೀಶ ಕುಂಬಾರ, ಸುಧೀರ್ ಕರಕಟ್ಟಿ, ಶಹಿನಶಾಹ ಜಾಗೀರದಾರ, ಸತೀಶ ಹತ್ತಿ, ಸುನಿಲ್ ಅತನೂರ, ರಯಿಸ ಅಸ್ಟೆಕರ, ಮಹೆಬೂಬ ಜಾಗೀರದಾರ, ಸುಭಾಶ್ ಬಾಬರ, ಸಂಜೀವ ರಾಠೋಡ, ಸಂತೂಷ ಪರಶೇನವರ, ಶಿವು ಬಡಿಗೇರ, ನಾಗೇಶ್ ತಳಕೆರಿ, ಇಮ್ರಾನ್ ಮಕಾಂದರ, ಜೀಯಾವುಲ್ಲ ಬೆನೂರ, ಇಮ್ರಾನ್ ಮುಜಾವರ, ಬಾಬು ಗುಡಮಿ, ಶಾಹ ಜಿ ಶಿಂಧೆ, ಫೈಜಾನ ಹವಾಲ್ದಾರ, ರಾಹುಲ ಮಡ್ಡಿಮನಿ, ಅಭಿಷೇಕ್ ಎಳಗಿ, ಈಶ್ವರ ಸಜ್ಜನ್, ರಮೇಶ ಹೊಸಮನಿ, ಪೀರದೂಷ ಸುನ್ನೆವಾಲೆ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಮಹಿಳಾ ವಿವಿಧ ಅಂಗ ಘಟಕಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.