ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ಕೊತ್ತತ್ತಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ೩ ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.ಚೀರನಹಳ್ಳಿ ಗ್ರಾಮದಲ್ಲಿ ಮಂಡ್ಯ-ಕಿರಗಾವಲು ರಸ್ತೆಯಿಂದ ಮಂಡ್ಯ-ಕೆ.ಎಂ.ದೊಡ್ಡಿ ಸೇರುವ ರಸ್ತೆ ಮಾರ್ಗ, ಹಾಲಹಳ್ಳಿಯ ಶ್ರೀಮಹದೇಶ್ವರರ ದೇವಸ್ಥಾನ, ಚೀರನಹಳ್ಳಿ ಶ್ರೀಬಸವೇಶ್ವರ ದೇವಸ್ಥಾನದಿಂದ ಕಮ್ಮನಾಯಕನಹಳ್ಳಿವರೆಗೆ ಲೋಕೋಪಯೋಗಿ ಇಲಾಖೆಯಿಂದ ೨ ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ತಗ್ಗಹಳ್ಳಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನರೇಗಾ ಯೋಜನೆ ಅಡಿ ೨೦ ಲಕ್ಷ ರು. ವೆಚ್ಚದಲ್ಲಿ ೩ನೇ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ, ಲಾಳನಕೆರೆ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ೫೦ ಲಕ್ಷ ರು. ವೆಚ್ಚದಲ್ಲಿ ಲಾಳನಕೆರೆ ಕೋಡಿಯ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.
ಬಳಿಕ ಮಾತನಾಡಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಕಾಂಗ್ರೆಸ್ ಸರ್ಕಾರ ಜನಪರ ಕಾಳಜಿಯಿಂದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡುತ್ತಿದೆ. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಲಾಳನಕೆರೆ ಹಾಗೂ ಕೊತ್ತತ್ತಿ ಭಾಗದ ಜನರು ಓಡಾಡಲು ಅನುಕೂಲವಾಗುವಂತೆ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಬೆನ್ನೆಲುಬಾಗಿ ಯಾವಾಗಲೂ ಇರಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮಾಜಿ ಸದಸ್ಯ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮಿತ್ರ, ಗ್ರಾಪಂ ಅಧ್ಯಕ್ಷ ಕಿಟ್ಟಿ, ಮುಖಂಡರಾದ ಕೆ.ಎಚ್.ನಾಗರಾಜು, ತಗ್ಗಹಳ್ಳಿ ಕೃಷ್ಣ, ರವಿಕುಮಾರ್, ಟಿ.ಡಿ.ಬಸವರಾಜ್, ಹಳುವಾಡಿ ಕೃಷ್ಣ, ಪಲ್ಲವಿ, ಮಂಜುನಾಥ್, ನಾಗರಾಜು, ಮಹೇಂದ್ರ, ಕೊತ್ತತ್ತಿ ಗವಿಗೌಡ, ಸಣ್ಣಯ್ಯ, ಮಹಾದೇವಪ್ಪ, ಮಧು, ಪುಟ್ಟಣ್ಣ, ಮಂಜುನಾಥ್, ನಂಜುಂಡಸ್ವಾಮಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸತೀಶ್, ಸಹಾಯಕ ಎಂಜಿನಿಯರ್ ಜಗದೀಶ್, ಸಣ್ಣ ನೀರಾವರಿ ಇಲಾಖೆ ಇಇ ಸಿ.ಶಂಕರ್, ಎಇಇ ಈಶ್ವರ್, ಪ್ರಥಮ ದರ್ಜೆ ಗುತ್ತಿಗೆದಾರ ಪಿ.ಬಿ.ಕರೀಗೌಡ, ಗುತ್ತಿಗೆದಾರ ಎಲ್.ಎನ್. ನಂಜುಂಡಪ್ಪ, ಇತರರಿದ್ದರು.