ಶಿರಾಳಕೊಪ್ಪ: ಕಾಂಗ್ರೆಸ್ ಪಕ್ಷಕ್ಕೆ ಬಡತನದ ಮೇಲೆ ಪ್ರೀತಿಯೇ ಹೊರತು, ಬಡವರ ಮೇಲೆ ಅಲ್ಲ. ಕೊವಿಡ್ ಸಂದರ್ಭದಲ್ಲಿ ಕೇಂದ್ರದಿಂದ 10 ಕೆ.ಜಿ. ಅಕ್ಕಿ ನೀಡಲಾಗಿದೆ. ಈಗ ನೀಡುತ್ತಿರುವ 5 ಕೆಜಿ ಅಕ್ಕಿನೂ ಕೇಂದ್ರದ್ದೇ ಎಂದ ಅವರು 10 ಅಕ್ಕಿ ನೀಡುತ್ತೇನೆ ಎಂದು ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರಿಹಾಯ್ದರು.ಗುರುವಾರ ಆನವಟ್ಟಿಯ ವೀರಶೈವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಕೀಲಿ ಕೈ ನನ್ನ ಕೈಯಲ್ಲೇ ಇದೆ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಜಿಲ್ಲೆಯ ಅಭಿವೃದ್ಧಿಗೆ ಅವರದು ಶೂನ್ಯ ಕೂಡುಗೆ ಎಂದರು.
ಸೊರಬ ಮತ್ತು ಶಿಕಾರಿಪುರ ನನ್ನ ಎರಡು ಕಣ್ಣುಗಳು ಎಂದಿರುವ ಯಡಿಯೂರಪ್ಪ ಅವರು ಅಡಳಿತಕ್ಕೆ ಬಂದ ಮೇಲೆ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಭರಪೂರ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ನೀರಾವರಿಗೆ 2500 ಕೋಟಿ ರು. ಅನುದಾನ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸೈಕಲ್. ಭಾಗ್ಯಲಕ್ಷ್ಮೀ ಬಾಂಡ್, ಹಲವು ವರ್ಷ ದಿಂದ ಆಗದ ರಸ್ತೆ, ನೀರಾವರಿ, ವಿಮಾನ ನಿಲ್ದಾಣಗಳನ್ನು ಸ್ಥಾಪಿಸಿ, ಹೆಚ್ಚು ಉದ್ಯಮಿಗಳ ಆಗಮನಕ್ಕೆ ದಾರಿ ಮಾಡಿದ ಅವರು ಯುವಕರಿಗೆ ಉದ್ಯೋಗ ಸೃಷ್ಠಿಸಿ ದ್ದಾರೆ. ಇಂಥವರ ಬಗ್ಗೆ ಮಧು ಬಂಗಾರಪ್ಪ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು. ನಾನು ಸಂಸದನಾಗಿ ಜಿಲ್ಲೆಯ 100 ಸಮುದಾಯ ಭವನಗಳಿಗೆ ಅನುದಾನ, ರೈಲ್ವೆ ಗೇಜ್ ಪರಿವರ್ತನೆ, ಹೆದ್ದಾರಿಗಳ ನಿರ್ಮಾಣ, ಪ್ರವಾಸಿ ತಾಣಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ್ದೇನೆ. ರೈತರಿಗೆ ಕೆಂದ್ರದಿಂದ ವರ್ಷಕ್ಕೆ ಆರು ಸಾವಿರದಂತೆ 18 ಸಾವಿರ ಜಮಾ ಆಗಿದೆ. ರಾಜ್ಯದಿಂದ ಕೊಡು ತ್ತಿದ್ದ ನಾಲ್ಕು ಸಾವಿರ ಹಣ ಸಿದ್ದರಾಮಯ್ಯ ಸರ್ಕಾರ ನಿಲ್ಲಿಸಿದೆ. ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, 15 ವರ್ಷದ ಹಿಂದೆ ಆನವಟ್ಟಿಯ ಪದವಿ ಕಾಲೇಜಿನಲ್ಲಿ 127 ವಿದ್ಯಾರ್ಥಿಗಳು ಇದ್ದರು. ಬಿಜೆಪಿ ಸರ್ಕಾರದಲ್ಲಿ ನಾನು ಮಂತ್ರಿ ಆದ ನಂತರ ಹೊಸ ಕಟ್ಟಡ ನಿರ್ಮಾಣ ಮಾಡಿ, ಸೌಲಭ್ಯ ಕಲ್ಪಿಸಿದ್ದರಿಂದ ಈಗ 1500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಂಗ್ರೆಸೇ ತರ ಸರ್ಕಾರಗಳು ದೇಶದ ಅಭಿವೃದ್ಧಿ ಮಾಡಿವೆ. ಹಾಗಾಗಿ ದೇಶದ ಭದ್ರತೆ, ಅಭಿವೃಧಿಗಾಗಿ ಮೋದಿ ಬೇಕು. ಅದಕ್ಕೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಮತ ನೀಡಿ ಎಂದರು.ಸಮಾವೇಶದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷೆ ಹೊಳೆಯಮ್ಮ ಈಶ್ವರ ಚನ್ನಪಟ್ಟಣ, ಉಪಾಧ್ಯಕ್ಷೆಯರಾದ ಪ್ರಭಾವತಿ ಸಮನವಳ್ಳಿ, ಸುಧಾ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಗೌರಮ್ಮ ಭಂಡಾರಿ, ಸಾಮಾಜಿಕ ಜಾಲತಾಣ ಮನಸ್ವಿನಿ ಸುರೇಶ್, ಸೊರಬ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಜಿಲ್ಲಾ ಅಧ್ಯಕ್ಷ ಟಿ.ಡಿ ಮೇಘರಾಜ್, ಜಿಲ್ಲಾ ಅಧ್ಯಕ್ಷೆ ಗಾಯತ್ರಿದೇವಿ, ಉಪಾಧ್ಯಕ್ಷೆಯರಾದ ಗೀತಾ ಮಲ್ಲಿಕಾರ್ಜುನ್, ಸುಧಾ ಶಿವಪ್ರಸಾದ್, ಮುಖಂಡರಾದ ಕಸ್ತೂರಿ ಪುಂಜಾ, ಕುಸುಮಾ ಪಾಟೀಲ್, ಕೋಟ್ರಯ್ಯ ಸ್ವಾಮಿ ನೇರಲಗಿ, ಪ್ರಕಾಶ್ ಅಗಸನಹಳ್ಳಿ, ಶಿವನಗೌಡ ದ್ವಾರಳ್ಳಿ, ವಿನಯ್ ಗುತ್ತೇರ್, ವಿನಯ್ ಶೆರ್ವಿ, ಮಂಜಣ್ಣ ಲಕ್ಕವಳ್ಳಿ, ರಾಜು ಬಡಿಗೇರ್, ಕೆರಿಯಪ್ಪ, ವಿಶ್ವ ಇದ್ದರು.
ರಾಘವೇಂದ್ರ ಗೆಲುವಿಗಾಗಿ ವಿಶೇಷ ಪೂಜೆ, ಪ್ರಾರ್ಥನೆ
ಶಿರಾಳಕೊಪ್ಪ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿ ಹಾಗೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಬಿ.ವೈ.ರಾಘವೇಂದ್ರ ಅತಿ ಹೆಚ್ಚು ಮತಗಳಿಂದ ಗೆದ್ದು ಬರಲಿ ಎಂದು ಬಿಜೆಪಿ ರೈತ ಮೋರ್ಚಾ ಹಾಗೂ ಬಿಜೆಪಿ ಪದಾಧಿಕಾರಿಗಳು ಉಡಗಣಿ ರಾಘವೇಂದ್ರಸ್ವಾಮಿ ಮಠದಲ್ಲಿ ಪ್ರಾರ್ಥನೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯೋಗಿಶ್ ಹುಲಿಗಿನಕೊಪ್ಪ, ನಂದಿನಿ ಮಿಲ್ಕ್ ನಿರ್ದೇಶಕ ಸಿದ್ದಲಿಂಗೇಶ್, ಗಿರೀಶ್, ಈಸೂರ ಜಗದೀಶ್, ಅಶೋಕ ಮಾರವಳ್ಳಿ, ಚಂದ್ರಶೇಖರ್ ಹೆಚ್.ಎಂ, ಇಂದುಧರ್, ಶಿವಕುಮಾರ್,ತಾಪಂ ಮಾಜಿ ಅಧ್ಯಕ್ಷ ಪ್ರಕಾಶ್, ರಾಮಚಂದ್ರ ನಾಯಕ್ ಸೇರಿದಂತೆ ಪ್ರಮುಖರು ಹಾಜರಿದ್ದರು