ಮನೆ ಇಲ್ಲದವರಿಗೆ ಸೂರು ಕಲ್ಪಿಸುವುದೇ ಕಾಂಗ್ರೆಸ್ ಗುರಿ: ಶಾಸಕ ವಿಜಯಾನಂದ ಕಾಶಪ್ಪನವರ

KannadaprabhaNewsNetwork |  
Published : Mar 06, 2024, 02:18 AM IST
ಇಳಕಲ್ಲ ಲಿಂ.ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ಹಿಂದಿರುವ ಗುಡಿಸಲು ವಾಸಿಗಳಿಗೆ ಮನೆ ನಿರ್ಮಾಣಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಇಳಕಲ್ಲ ನಗರದ ಲಿಂ.ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ಹಿಂದಿರುವ ಗುಡಿಸಲು ವಾಸಿಗಳಿಗೆ ೩೩೪ ಮನೆ ನಿರ್ಮಾಣಕ್ಕೆ ಶಾಸಕ, ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಭೂಮಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ಮನೆ ಇಲ್ಲದವರಿಗೆ ಸೂರು ಒದಗಿಸುವುದೇ ಕಾಂಗ್ರೆಸ್ ಸರ್ಕಾರದ ಆದ್ಯತೆ ಎಂದು ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಮಂಗಳವಾರ ಇಳಕಲ್ಲ ನಗರದ ಲಿಂ.ವಿಜಯ ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆ ಹಿಂದಿರುವ ಗುಡಿಸಲು ವಾಸಿಗಳಿಗೆ ೩೩೪ ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಐದು ವರ್ಷಗಳ ಹಿಂದೆ ನಾನು ಶಾಸಕನಾಗಿದ್ದಾಗ ೧೧ ಎಕರೆ ಭೂಮಿ ಖರೀದಿಸಿ ಎಸ್.ಆರ್.ಕೆ ಕಾಲೋನಿ ಎಂದು ನಾಮಕರಣ ಮಾಡಿ ಮನೆ ನಿರ್ಮಾಣ ಯೋಜನೆ ರೂಪಿಸಿದ್ದೆ. ಮುಂದೆ ಬಂದ ಶಾಸಕರು ಈ ಯೋಜನೆಗೆ ಅನೇಕ ರೀತಿಯ ತೊಡರು ತಂದು ಮನೆ ನಿರ್ಮಿಸಿ ಕೊಡಲಿಲ್ಲ. ಹಿಂದಿನ ನಗರಸಭೆ ಅಧ್ಯಕ್ಷೆಯೊಬ್ಬರು ನಿಮಗೆ ಅನೇಕ ಭರವಸೆ ಕೊಟ್ಟು ಹೋದರೂ ಯಾವುದೂ ನಿಮಗೆ ಸಿಗಲೇ ಇಲ್ಲ. ಅದಕ್ಕೆ ಕಾರಣ ನಿಮಗೆ ಮಹಾಂತಪ್ಪಜ್ಜ ಹಾಗೂ ಮುರ್ತುಜಾ ಖಾದ್ರಿ ಅಜ್ಜನ ಹಾಗೂ ನಿಮ್ಮ ಆಶೀರ್ವಾದಿಂದ ಮತ್ತೆ ಶಾಸಕನಾಗಿ ನಿಮ್ಮ ಮುಂದೆ ಬಂದಿದ್ದೇನೆ. ಒಂದು ವರ್ಷದಲ್ಲಿ ನಿಮಗೆ ಮನೆ ನಿರ್ಮಿಸಿ ಕೊಡಲಾಗುವುದು. ಗುತ್ತಿಗೆದಾರ ಎಸ್.ವಿ. ಪಾಟೀಲ ಗುಣಮಟ್ಟದ ಮನೆ ನಿರ್ಮಿಸಿ ಕೊಡಲಿದ್ದಾರೆ. ಹಿಂದಿನ ಶಾಸಕರು ನನ್ನ ಬಗ್ಗೆ ಅನೇಕ ರೀತಿಯ ಮಾತನಾಡಿದ್ದಾರೆ. ಅವರೊಬ್ಬ ದಡ್ಡ. ಇಳಕಲ್ಲ ನಗರದಲ್ಲಿ ಒಟ್ಟು ಮನೆ ಇಲ್ಲದ ಬಡಜನರಿಗಾಗಿ ನಮ್ಮ ಅವಧಿಯಲ್ಲಿ ಒಂದು ಸಾವಿರ ಮನೆ ನಿರ್ಮಿಸಿ ಕೊಡಲಾಗುವುದು ಇಲ್ಲಿ ಅಕ್ರಮವಾಗಿ ತಗಡಿನ ಶೆಡ್‌ ಹಾಕಿಕೊಂಡವರು ಮನೆ ಖಾಲಿ ಮಾಡಿ ನಿಮಗೂ ಮುಂದೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ತಿಳಿಸಿದರು.

ಸಮಾರಂಭದಲ್ಲಿ ಹಿರಿಯರಾದ ಶರಣಪ್ಪ ಆಮದಿಹಾ. ಅಬ್ದುಲ್‌ರಜಾಕ್‌ ತಟಗಾರ. ಮಹಾಂತೇಶ ಹನುಮನಾಳ, ರಶ್ಮಾ ಮಾರನಬಸರಿ, ಮಹಾಂತೇಶ ಗದ್ದನಕೇರಿ, ಮಹಾಂತೇಶ ಪಾಟೀಲ, ಮಾಜಿ ಅಧ್ಯಕ್ಷ ರಾಘವೇಂದ್ರ ಚಿಂಚಮಿ. ಪೌರಾಯುಕ್ತ ಶ್ರೀನಿವಾಸ ಜಾಧವ, ಸುರೇಶ ಜಂಗ್ಲಿ, ಮಹಬೂಬ್‌ ಗದ್ವಾಲ್, ಮೌನೇಶ ಬಂಡಿವಡ್ಡ ಇತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ