ಸಂವಿಧಾನ ಜಾಗೃತಿ ಜಾಥಾ ಚುನಾವಣೆ ಗಿಮಿಕ್‌

KannadaprabhaNewsNetwork |  
Published : Feb 20, 2024, 01:48 AM IST
19ಸಿಎಚ್‌ಎನ್‌53 ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಎಂ.ಎನ್. ರಾಜು ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಸಂವಿಧಾನ ಜಾಥಾವನ್ನು ಈ ವರ್ಷಕ್ಕೆ ಸೀಮಿತಗೊಳಿಸದೆ ಪ್ರತಿವರ್ಷ ಆಚರಿಸುವಂತಾಗಬೇಕು. ಈ ವರ್ಷಕ್ಕೆ ಸೀಮಿತಗೊಳಿಸಿದರೆ ಅದು ಚುನಾವಣೆ ಗಿಮಿಕ್ ಆಗುತ್ತದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಎಂ ಎನ್ ರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯ ಸರ್ಕಾರ ಸಂವಿಧಾನ ಜಾಥಾವನ್ನು ಈ ವರ್ಷಕ್ಕೆ ಸೀಮಿತಗೊಳಿಸದೆ ಪ್ರತಿವರ್ಷ ಆಚರಿಸುವಂತಾಗಬೇಕು. ಈ ವರ್ಷಕ್ಕೆ ಸೀಮಿತಗೊಳಿಸಿದರೆ ಅದು ಚುನಾವಣೆ ಗಿಮಿಕ್ ಆಗುತ್ತದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಎಂ ಎನ್ ರಾಜು ಹೇಳಿದರು.ನವೆರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲಿತ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಸಂವಿಧಾನ ಜಾಗೃತಿ ಜಾಥಾವನ್ನು ಪ್ರತಿವರ್ಷವೂ ಆಚರಿಸುವಂತೆ ಶಾಸನ ಹೊರಡಿಸಬೇಕು ಎಂದು ಒತ್ತಾಯಿಸಿದರು.ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಗಣರಾಜ್ಯೋತ್ಸವ ದಿನವನ್ನು ಸಂವಿಧಾನ ದಿನವನ್ನಾಗಿ ಹಾಗೂ ಸಾವಿತ್ರಿಬಾಫುಲೆ ದಿನಾಚರಣೆಯನ್ನು ಜಾರಿ ಮಾಡಿದರು. ಎಸ್‌ಸಿ, ಎಸ್‌ಟಿಗಳ ಕಲ್ಯಾಣಕ್ಕಾಗಿ ಹೆಚ್ಚಿನ ಅನುದಾನ ನೀಡಿದರು ಎಂದರು.ಕಾಂಗ್ರೆಸ್ ಮೊದಲಿನಿಂದಲೂ ಅನ್ಯಾಯ ಮಾಡಿಕೊಂಡು ಬಂದಿದೆ. ಈ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಎಸ್‌ಸಿ, ಎಸ್‌ಟಿಗಳ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಎಸ್‌ಇಪಿ, ಟಿಎಸ್‌ಪಿ ಅನುದಾನದಲ್ಲಿ 11.500 ಕೋಟಿ ರು.ಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಈ ಬಜೆಟ್ ಗ್ಯಾರಂಟಿ ಯೋಜನೆಗಳ ಲೋಪ ಸರಿದೂಗಿಸುವುದಾಗಿ ಗ್ಯಾರಂಟಿ ಯೋಜನೆಗಳು ಜೀವನ ನಿರ್ವಹಣೆಯ ಭಾಗ ಹೊರತು ಅಭಿವೃದ್ಧಿಯಲ್ಲ ಎಂದು ದೂರಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಶ್ರೀವಾಲ್ಮೀಕಿ ಅಭಿವೃದ್ಧಿ ನಿಗಮ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಂದ ಹೆಚ್ಚಿನ ಸಾಲಸೌಲಭ್ಯ, ಸಲವತ್ತುಗಳನ್ನು ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ 7 ಮಂದಿ ಫಲಾನುಭವಿಗೆ ಮಾತ್ರ ನೇರ ಸಾಲ ನೀಡಲಾಗಿದೆ. ಇದರಿಂದ ಎಸ್‌ಸಿ, ಎಸ್‌ಟಿ ಅಭಿವೃದ್ಧಿ ಆಗುವುದಿಲ್ಲ ಆಗಾಗಿ ಕನಿಷ್ಠ ಒಂದು ಕ್ಷೇತ್ರಕ್ಕೆ 100 ಮಂದಿಗೆ ನೇರ ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ನೀಡಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು 15 ಲಕ್ಷದಿಂದ 20 ಲಕ್ಷ ರು. ನೀಡಬೇಕು ಎಂದು ಆಗ್ರಹಿಸಿದರು.ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಗುತ್ತಿಗೆ ಕಾಮಗಾರಿಗಳಲ್ಲಿ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಿಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ