ಮೂಲಭೂತ ಹಕ್ಕುಗಳ ಹೊಂದಲು ಸಂವಿಧಾನ ಸಹಾಯಕ: ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ

KannadaprabhaNewsNetwork |  
Published : Jan 27, 2024, 01:15 AM IST
ಪಟ್ಟಣದಲ್ಲಿ ಗಣರಾಜ್ಯೋತ್ಸವ ಆಚರಣೆ -1 | Kannada Prabha

ಸಾರಾಂಶ

ಭಾರತ ಸಂವಿಧಾನವು ರಷ್ಯಾ, ಬ್ರಿಟನ್ ಹಾಗೂ ಅಮೆರಿಕ ದೇಶಗಳ ಸಂವಿಧಾನಗಳ ಅಂಶಗಳನ್ನು ಒಳಗೊಂಡಿದೆ. ಡಾ.ಅಂಬೇಡ್ಕರ್‌ ದೇಶಕೆ ಸುಭದ್ರವಾದ ಸಂವಿಧಾನ ನೀಡಿದ್ದು, ಇದು ಪ್ರಪಂಚದಲ್ಲೇ ಬೃಹತ್‌ ಸಂವಿಧಾನ ಎನಿಸಿದೆ. ಸ್ವಾತಂತ್ರ್ಯ ನಂತರ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಪ್ರತಿಯೊಬ್ಬ ಪ್ರಜೆಗಳು ತಮ್ಮ ಮೂಲಭೂತ ಹಕ್ಕುಗಳನ್ನು ಹೊಂದಲು ಸಂವಿಧಾನ ಸಹಾಯಕವಾಗಿದೆ. ನಮ್ಮ ಸಂವಿಧಾನವನ್ನು ರಚಿಸಿ, ಜಾರಿಗೆ ತಂದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಹೇಳಿದ್ದಾರೆ.

ಶಿರಾಳಕೊಪ್ಪ: ಸ್ವಾತಂತ್ರ್ಯ ನಂತರ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಪ್ರತಿಯೊಬ್ಬ ಪ್ರಜೆಗಳು ತಮ್ಮ ಮೂಲಭೂತ ಹಕ್ಕುಗಳನ್ನು ಹೊಂದಲು ಸಂವಿಧಾನ ಸಹಾಯಕವಾಗಿದೆ. ನಮ್ಮ ಸಂವಿಧಾನವನ್ನು ರಚಿಸಿ, ಜಾರಿಗೆ ತಂದ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಹೇಳಿದರು.

ಪಟ್ಟಣದ ಸೊರಬ ರಸ್ತೆಯ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಧ್ಬಜಾರೋಹಣ ನೆರವೇರಿಸಿ, ಶಾಲಾ ಮಕ್ಕಳಿಂದ ಧ್ಬಜವಂದನೆ ಸ್ವೀಕರಿಸಿ ಮಾತನಾಡಿದ ಅವರು, ರಷ್ಯ, ಬ್ರಿಟನ್ ಹಾಗೂ ಅಮೆರಿಕ ದೇಶಗಳ ಸಂವಿಧಾನಗಳ ಅಂಶಗಳನ್ನು ಒಳಗೊಂಡಿದೆ. ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್‌ ದೇಶಕೆ ಸುಭದ್ರವಾದ ಸಂವಿಧಾನ ನೀಡಿದ್ದು, ಇದು ಪ್ರಪಂಚದಲ್ಲೇ ಬೃಹತ್‌ ಸಂವಿಧಾನ ಎನಿಸಿದೆ ಎಂದರು.

ಸಂವಿಧಾನದಲ್ಲಿರುವ 5 ಅಂಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸ್ವತಂತ್ರ ಭಾರತಕ್ಕೆ ಹೆಮ್ಮೆ ತರುವಂತಹ ಕಾರ್ಯ ಮಾಡಬೇಕಿದೆ. ಮುಂಬರುವ ದಿನಗಳಲ್ಲಿ ಪುರಸಭೆ ಸದಸ್ಯರು, ನಮ್ಮ ನೆಚ್ಚಿನ ಶಾಸಕರು, ರಾಜ್ಯ ಸಚಿವರ ಸಹಕಾರ ಪಡೆದು ಒಳಾಂಗಣ ಕ್ರೀಡಾಂಗಣ ನಿರ್ಮಿಸಿ, ಉತ್ತಮ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಹಕಾರಿ ಆಗುವಂತಹ ಕ್ರೀಡಾಂಗಣವಾಗಿ ರೂಪಿಸಲಾಗುವುದು ಎಂದರು.

ಪ್ರಾರಂಭದಲ್ಲಿ ಪಟ್ಟಣದ ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿಗಳು ಪ್ರಭಾತ್ ಪೇರಿಯಲ್ಲಿ ಭಾಗವಹಿಸಿದ್ದರು. ಪ್ರಾಥಮಿಕ ಶಾಲೆ ಮಕ್ಕಳು ದೇಶದ ಮಹಾನ್ ನಾಯಕರ ವೇಷಭೂಷಣ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿ ವಿಶೇಷ ಮೆರಗನ್ನು ತಂದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು, ಸಿಬ್ಬಂದಿ, ಎಲ್ಲಾ ಶಾಲೆಗಳ ಶಿಕ್ಷಕರು ಹಾಗೂ ಜನತೆ ಭಾಗವಹಿಸಿದ್ದರು. ಪುರಸಭೆ ಸಿಬ್ಬಂದಿ ಗಜೇಂದ್ರ ವಂದಿಸಿದರು.

- - - -26ಕೆ.ಎಸ್ ಹೆಚ್ ಆರ್2:

ಶಿರಾಳಕೊಪ್ಪ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮುಖ್ಯಾಧಿಕಾರಿ ಹೇಮಂತ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು