ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸುಮತಿ ಭಾರ್ಗವ ರಚಿಸಿದ ಮನುಸ್ಮೃತಿಯಿಂದ ಮಹಿಳೆಯರು ಮಗುವಾಗಿದ್ದಾಗ ತಂದೆ ಕೈಕೆಳಗೆ, ಮದುವೆಯಾದ ಮೇಲೆ ಗಂಡನ ಕೈ ಕೆಳಗೆ ವಯಸ್ಸಾದ ಮೇಲೆ ಮಕ್ಕಳ ಕೈ ಕೆಳಗೆ ಬಾಳಬೆಕೆಂದು ಹೇಳಿದ್ದರು. ಆದರೆ ಡಾ.ಬಿ.ಆರ್. ಅಂಬೇಡ್ಕರ್ ರಚಿಸದ ಭಾರತದ ಸಂವಿಧಾನ ಮಾತ್ರ ಗಂಡು, ಹೆಣ್ಣು ಸಮಾನರು ಎಂಬ ಸಂದೇಶವನ್ನ ಸಾರಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಎ. ಅರುಣಕುಮಾರಿ ಅಭಿಪ್ರಾಯಪಟ್ಟರು. ನಗರ ಹೊರವಲಯ ಜಿಲ್ಲಾದಿಕಾರಿಗಳ ಕಚೇರಿ ಹಿಂಬಾಗದ ರಾಯಲ್ ಸಿಟಿಯಲ್ಲಿರುವ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 75 ನೇ ಗಣರಾಜ್ಯೋತ್ಸವ ಅಂಗವಾಗಿ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಸಂವಿಧಾನ ಓದು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಡ್ಡಾಯವಾಗಿ ಮತದಾನ ಮಾಡಿ
ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರು ಬರುವ ಎಪ್ರಿಲ್ ತಿಂಗಳ ಚನಾವಣೆಯಲ್ಲಿ ನಿಮ್ಮನ್ನಾಳುವ ಉತ್ತಮ ವ್ಯಕ್ತಿಗಳ ಆಯ್ಕೆ ಗೆ ಮತದಾನ ಮಾಡಿ, ಯಾವುದೆ ಕಾರಣಕ್ಕೂ ಮತಹಾಕದೆ ಇರಬೇಡಿ. ಪ್ರಜಾಪ್ರಭುತ್ವದ ಮುಖ್ಯ ಆಧಾರವೇ ಚುನಾವಣಾ ಪ್ರಕ್ರಿಯೆಯ ಮತ ಚಲಾವಣೆ ಆಗಿದೆ. ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುವಂತಹ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಮ್ಮ ಅಭಿಪ್ರಾಯವನ್ನು ಮತದಾನದ ಮೂಲಕ ತಿಳಿಸಬಹುದು ಅಂತಹ ಅಭಿಪ್ರಾಯವನ್ನೇ ನಾವು ನೀಡದಿದ್ದರೆ ಜನಪ್ರತಿನಿಧಿಗಳಿಂದ ಉತ್ತಮ ಅಭಿವೃದ್ಧಿ ಮತ್ತು ಸೇವೆಯನ್ನು ನಿರೀಕ್ಷೆ ಮಾಡಲಿಕ್ಕೆ ಆಗಲ್ಲ ಎಂದರು.ಸಂಸ್ಕೃತಿ, ಭಾಷೆ,ಧರ್ಮ, ಜಾತಿ, ವೇಷ, ಭೂಷಣ ಹೀಗೆ ಎಲ್ಲವೂ ವಿಭಿನ್ನ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ನಮ್ಮದು. ಹೀಗೆ ವಿಭಿನ್ನತೆ ಇದ್ದರೂ ಕೂಡ ದೇಶದ ಅಭಿವೃದ್ಧಿ, ಸುಸ್ಥಿರ ಸಮಾಜ ನಿರ್ಮಾಣಗಳ ವಿಚಾರ ಬಂದಾಗ ಸರ್ವರೂ ಒಂದೇ ಆಲೋಚನೆ ಮಾಡಬೇಕು ಎಂದರು.
ಸುಸ್ಥಿರ ಅಭಿವೃದ್ಧಿ ದೇಶನಾನು ಮತ ಚಲಾಯಿಸುವ ಜನಪ್ರತಿನಿಧಿ ದೇಶಕ್ಕೆ ಯಾವ ರೀತಿ ಉತ್ತಮ ಸೇವೆ ಮಾಡಿ ಕೊಡುಗೆ ನೀಡಬಲ್ಲ ಎಂಬ ಏಕೈಕ ಮಾನದಂಡವನ್ನು ನಿರ್ಣಯಿಸಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿದರೆ ಮುಂದಿನ 5 ವರ್ಷದಲ್ಲಿ ಭಾರತದ ಸುಸ್ಥಿರ ಅಭಿವೃದ್ಧಿಯ ಪಥದ ಪಕ್ಕಕ್ಕೂ ಇನ್ನೊಂದು ದೇಶ ಬರಲಾರದು, ಜೊತೆಗೆ ಯಾವುದೇ ಕ್ಷೇತ್ರದಲ್ಲಿ ನಮಗೆ ಸರಿಸಾಟಿ ಇಲ್ಲದ ದೇಶ ಮತ್ತೊಂದು ಇರಲಾರದು ಎಂಬುದು ನನ್ನ ಅಭಿಪ್ರಾಯ ಎಂದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಬರೆದಿರುವ ಸಂವಿಧಾನ ಓದು ಪುಸ್ತಕ ವಿತರಣೆ ಮಾಡಲಾಯಿತು ಈ ವೇಳೆ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಸದಸ್ಯರಾದ ವಕೀಲ ಆರ್. ಮಟಮಪ್ಪ, ಹೋಟೆಲ್ ರಾಮಣ್ಣ, ಪರಿಸರ ಪ್ರೇಮಿ ಗುಂಪುಮರದ ಆನಂದ್,ಹೆನ್ರಿ ಪ್ರಸನ್ನ,ಕಾರ್ಮಿಕ ಸಂಘ ಅಧ್ಯಕ್ಷ ಪ್ರಕಾಶ್,ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಭಿಲಾಷ್.ಕೆ.ಎಸ್.ನಾರಾಯಣಸ್ವಾಮಿ, ಬುದ್ದ ಪೌಂಡೇಶನ್ ಅಧ್ಯಕ್ಷ ಗಂಗರಾಜ್, ವಕೀಲ ಮಂಜುನಾಥರೆಡ್ಡಿ, ಖಲೀಲ್ ಹಾಸ್ಟಲ್ ವಾರ್ಡನ್ ರಾಜಲಕ್ಷ್ಮಿ,ಕಲಾವಿದ ಗಂಗಪ್ಪ, ವಿಧ್ಯಾರ್ಥಿನಿಯರು, ಮತ್ತಿತರರು ಇದ್ದರು.