ಕನ್ನಡ ಭವನ ನಿರ್ಮಾಣ, ರಾಜ್ಯೋತ್ಸವ ಆಚರಣೆಗೆ ಮುಂದಾಗಿ

KannadaprabhaNewsNetwork |  
Published : Oct 19, 2025, 01:00 AM IST
18HRR 01 & 01Aಹರಿಹರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಗೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ನಗರಸಭೆ ಹಾಗೂ ಶಾಸಕ ಬಿ.ಪಿ.ಹರೀಶ್ ಅವರಿಗೆ ಮನವಿ ನೀಡಿದರು. | Kannada Prabha

ಸಾರಾಂಶ

ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಗೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಶಾಸಕ ಬಿ.ಪಿ. ಹರೀಶ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಪೌರಾಯುಕ್ತ ಎಂಪಿ.ನಾಗಣ್ಣ ಅವರಿಗೆ ಮನವಿ ನೀಡಿದ್ದಾರೆ.

ಶಾಸಕ, ನಗರಸಭೆ ಅಧ್ಯಕ್ಷೆ, ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಸಂಘಟನಗೆಳ ಆಗ್ರಹ

- - -

ಕನ್ನಡಪ್ರಭ ವಾರ್ತೆ ಹರಿಹರ

ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಗೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಶಾಸಕ ಬಿ.ಪಿ. ಹರೀಶ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಪೌರಾಯುಕ್ತ ಎಂಪಿ.ನಾಗಣ್ಣ ಅವರಿಗೆ ಮನವಿ ನೀಡಿದರು.

ಹರಿಹರ ಜಿಲ್ಲೆಯಲ್ಲಿ ೨ನೇ ದೊಡ್ಡ ನಗರ, ಭೌಗೋಳಿಕವಾಗಿ ರಾಜ್ಯದ ಕೇಂದ್ರ ಭಾಗದಲ್ಲಿರುವುದು ದಕ್ಷಿಣ, ಉತ್ತರ, ಕಲ್ಯಾಣ ಕರ್ನಾಟಕದ ಸಂಗಮ ಸ್ಥಳ, ಐತಿಹಾಸಿಕ ಹಿನ್ನೆಲೆಯ ಹರಿಹರದಲ್ಲಿ ರಾಜ್ಯೋತ್ಸವವನ್ನು ನಗರಸಭೆಯಿಂದ ಆಚರಿಸುವಂತಾಗಬೇಕೆಂದು ಆಗ್ರಹಿಸಿದರು.

ಸಾಕಷ್ಟು ಜನ ಸಾಹಿತ್ಯಾಸಕ್ತರು, ಹಲವು ಪದವಿ, ಪದವಿ ಪೂರ್ವ ಕಾಲೇಜುಗಳನ್ನು ಹೊಂದಿರುವ ಹರಿಹರದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಲು ಈವರೆಗೂ ಕನ್ನಡ ಭವನ ಇಲ್ಲದಿರುವುದು ಬೇಸರದ ವಿಷಯವಾಗಿದೆ. ನಗರಸಭೆಯಿಂದ ಸೂಕ್ತ ನಿವೇಶನ ಒದಗಿಸಿ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.

ಸಾಹಿತಿ ಪ್ರೊ.ಸಿ.ವಿ.ಪಾಟೀಲ್, ಪ್ರೊ. ಎಚ್.ಎ. ಭಿಕ್ಷಾವರ್ತಿಮಠ, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ನಗರಸಭೆ ಸದಸ್ಯ ಕೆ.ಬಿ. ರಾಜಶೇಖರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಚ್.ನಿಜಗುಣ, ಎಚ್.ಕೆ. ಕೊಟ್ರಪ್ಪ, ಶೇಖರ್ ಗೌಡ ಪಾಟೀಲ್, ಬಿ.ಬಿ.ರೇವಣ್ಣ ನಾಯ್ಕ್, ಎಂ.ಚಿದಾನಂದ ಕಂಚಿಕೇರಿ, ಎಸ್.ಎಚ್.ಹೂಗಾರ್, ಡಾ. ಡಿ.ಡಿ. ಸಿಂದಗಿ, ಮಾರುತಿ ಬೇಡರ್, ಎ.ರಿಯಾಜ್ ಅಹ್ಮದ್, ಪಿ.ಜೆ.ಮಹಾಂತೇಶ್, ರಮೇಶ್ ಮಾನೆ , ಪ್ರೀತಮ್ ಬಾಬು, ವೈ.ಕೃಷ್ಣಮೂರ್ತಿ, ಕೆ.ಟಿ.ಗೀತಾ ಕೊಂಡಜ್ಜಿ, ವಿ.ಬಿ.ಕೊಟ್ರೇಶ್, ಜಿಗಳಿ ಪ್ರಕಾಶ್, ಸುರೇಶ್ ಕುಣೆಬೆಳಕೇರಿ, ಎ.ಕೆ.ಭೂಮೇಶ್, ವೀರೇಶ್ ಯಾದವಾಡ್, ಎಚ್. ರಾಜೇಶ್, ಇಮ್ತಿಯಾಜ್ ಜಲಾಲ್, ರುದ್ರಗೌಡ ಆಟೋ, ರಾಹುಲ್ ಮೆಹರವಾಡೆ, ಜಿ.ವಿ.ಪ್ರವೀಣ್, ಶ್ವೇತಾ ಬಿ., ಮಂಜುನಾಥ್ ಪೂಜಾರ್, ಸಂತೋಷ ಗುಡಿಮನಿ, ಆರ್. ಮಂಜುನಾಥ್, ಕೃಷ್ಣ ರಾಜೋಳ್ಳಿ, ಚಂದ್ರಶೇಖರ್ ಕುಂಬಾರ್ ಇತರರು ಹಾಜರಿದ್ದರು.

- - -

-18HRR 01 & 01A:

ಹರಿಹರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಗೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ನಗರಸಭೆ ಹಾಗೂ ಶಾಸಕ ಬಿ.ಪಿ.ಹರೀಶ್ ಅವರಿಗೆ ಮನವಿ ನೀಡಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ