ಕಾನೂನು ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನ ಅವಶ್ಯ: ಜಿ.ಎಸ್. ಪಲ್ಲೇದ

KannadaprabhaNewsNetwork |  
Published : Jan 28, 2024, 01:17 AM IST
ಕಾರ್ಯಕ್ರಮವನ್ನು ಉದ್ದೇಶಿಸಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ.ಎಸ್.ಪಲ್ಲೇದ ಮಾತನಾಡಿದರು  | Kannada Prabha

ಸಾರಾಂಶ

ಭಾರತ ಸ್ವಾತಂತ್ರ್ಯವಾಗುವ ಸಮಯದಲ್ಲಿ ವಕೀಲರ ಪಾತ್ರ ಹಿರಿದಾಗಿತ್ತು. ವಕೀಲಿಕಿ ಮಾಡುವವರೇ ಜಾಸ್ತಿ ಹೋರಾಟದಲ್ಲಿದ್ದರು. ಅಂತಹ ವೃತ್ತಿಯನ್ನು ಮಾಡುವ ಕಾನೂನು ವಿದ್ಯಾರ್ಥಿಗಳಾದ ನೀವು ಸದಾ ಅಧ್ಯಯನಶೀಲರಾಗಬೇಕು ಎಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಜಿ.ಎಸ್. ಪಲ್ಲೇದ ಹೇಳಿದರು.

ಗದಗ: ಭಾರತ ದೇಶ ಸ್ವಾತಂತ್ರ್ಯವಾಗುವ ಸಮಯದಲ್ಲಿ ವಕೀಲರ ಪಾತ್ರ ಹಿರಿದಾಗಿತ್ತು. ಸಾತಂತ್ರ್ಯ ಹೋರಾಟದಲ್ಲಿ ವಕೀಲಿಕಿ ಮಾಡುವವರೇ ಜಾಸ್ತಿ ಹೋರಾಟದಲ್ಲಿದ್ದರು. ಅಂತಹ ವೃತ್ತಿಯನ್ನು ಮಾಡುವ ಕಾನೂನು ವಿದ್ಯಾರ್ಥಿಗಳಾದ ನೀವು ಸದಾ ಅಧ್ಯಯನಶೀಲರಾಗಬೇಕು ಎಂದು ಹಿರಿಯ ನಿವೃತ್ತ ನ್ಯಾಯಾಧೀಶ ಹಾಗೂ ಗ್ರಾಹಕರ ರಕ್ಷಣಾ ವೇದಿಕೆಯ ಹಿರಿಯ ಸದಸ್ಯ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಜಿ.ಎಸ್. ಪಲ್ಲೇದ ಹೇಳಿದರು. ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ 74ನೇ ಗಣರಾಜೋತ್ಸವದ ಧ್ವಜಾರೋಹಣ ನೆರವೇರಿಸಿ, ನಂತರ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.. ಭಾರತದ ಸಂವಿಧಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದ ಅವಿಭಾಜ್ಯ ಅಂಗವಾಗಿ ಪರಿವರ್ತಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಲು ಹೆಜ್ಜೆಯನ್ನು ಹಾಕಬೇಕು. ನಮ್ಮ ಸಂವಿಧಾನದಡಿ ರೂಪಿಸಿರುವ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ದೇಶವನ್ನು ಸಮರ್ಥವಾಗಿ ಮುನ್ನಡೆಸಿ ಸರ್ವರಿಗೂ ಸಮಾನ ಅವಕಾಶಗಳನ್ನು ಲಭ್ಯವಾಗುವಂತೆ ಮಾಡಿದೆ ಎಂದರು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಅದನ್ನು ಓದುತ್ತಿದ್ದಾರೆ ಹೊರತು, ಸಂವಿಧಾನದ ಮಹತ್ವ ಹಾಗೂ ಸಾರಾಂಶ ಅರ್ಥೈಸಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ವಂಶಪಾರಂಪರ್ಯ ವೃತ್ತಿ ತ್ಯಜಿಸಿ, ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ಉನ್ನತ ಹುದ್ದೆ ಅಲಂಕರಿಸುವ ಅವಕಾಶ ಮಾಡಿ ಕೊಟ್ಟಿರುವುದು ನಮ್ಮ ಸಂವಿಧಾನದ ಹಿರಿಮೆಯಾಗಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾನೂನು ಮಹಾವಿದ್ಯಾಲಯದ ಪ್ರಾರ್ಚಾಯ ಜೈಹನುಮಾನ ಎಚ್.ಕೆ. ಮುಂತಾದವರು ಮಾತನಾಡಿದರು. ಈ ವೇಳೆ ಗಣರಾಜೋತ್ಸವದ ಅಂಗವಾಗಿ ಜರುಗಿದ ಪ್ರಬಂಧ ಸ್ಪರ್ಧೆ, ಕ್ವಿಜ್ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಹ ಪ್ರಾಧ್ಯಾಪಕಿ ಡಾ. ಜ್ಯೋತಿ ಸಿ.ವಿ. ನಡೆಸಿಕೊಟ್ಟರು, ಭಾಷಣ ಸ್ಪರ್ಧೆಯಲ್ಲಿ ಚನ್ನಪ್ಪ ಕಂದಗಲ್ಲ ಪ್ರಥಮ, ವಿಜಯಕುಮಾರ ಬಂಡಿ ದ್ವಿತೀಯ, ರುಕ್ಷಾನಾ ಮ್ಯಾಗೇರಿ ತೃತೀಯ ‌ಸ್ಥಾನ ಪಡೆದುಕೊಂಡರು. ಕ್ವೀಜ್ ಸ್ಪರ್ಧೆಯಲ್ಲಿ ಸಂತೋಷ ಭದ್ರಾಪೂರ ಪ್ರಥಮ, ಪ್ರಮೋದ್ ಮುಂಡರಗಿ ದ್ವಿತೀಯ, ಶರಣಪ್ಪ ಭದ್ರಾಪೂರ ತೃತೀಯ ಸ್ಥಾನ ಪಡೆದುಕೊಂಡರು. ಪ್ರಬಂಧ ಸ್ಪರ್ಧೆಯಲ್ಲಿ ಆಕಾಶ ಭದ್ರಾಪೂರ ಪ್ರಥಮ, ಸಂತೋಷ ಭದ್ರಾಪೂರ ದ್ವಿತೀಯ, ಸಿಕಂದರ‌ ಆರಿ ತೃತೀಯ ಸ್ಥಾನ ಪಡೆದುಕೊಂಡರು. ಸ್ವಾಮಿ ವಿವೇಕಾನಂದರ ಜನ್ಮ ದಿನದ ನಿಮಿತ್ತ ಜರುಗಿದ ಭಾಷಣ ಸ್ಪರ್ಧೆಯಲ್ಲಿ ಮುಕ್ತಾ ಹಡಪದ ಪ್ರಥಮ, ಪ್ರಮೋದ್ ಮುಂಡರಗಿ ದ್ವಿತೀಯ, ಸಿಕಂದರ ಆರಿ ತೃತೀಯ ಸ್ಥಾನ‌ ಪಡೆದುಕೊಂಡು ಬಹುಮಾನ ಮತ್ತು ಪಾರಿತೋಷಕವನ್ನು ಪಡೆದುಕೊಂಡರು.

ಸಹ ಪ್ರಾಧ್ಯಾಪಕ ಡಾ.‌ ಸಂತೋಷ ಪಾಟೀಲ, ಶರತ್ ಡಿ., ಡಿ.ಎಲ್. ಬಿಳಗಿ, ಡಾ.ಸಿ.ಬಿ. ರಣಗಟ್ಟಿಮಠ, ಬಿ.ಸಿ. ಜಾಲಿಗಿಡದ, ಎಸ್.ಎಸ್. ಅರಕೇರಿ, ಎ.ಎಸ್. ದಂಡಗಿ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು‌ ಪಾಲ್ಗೊಂಡಿದ್ದರು. ಎಸ್.ಟಿ.‌ಮೂರಶಿಳ್ಳಿನ ಸ್ವಾಗತಿಸಿದರು. ಚೈತ್ರಾ ಗೌಡ್ರ ಪ್ರಾರ್ಥಿಸಿದರು. ಐಕ್ಯೂಎಸ್ ಸಂಯೋಜಕ, ಡಾ. ವಿಜಯ ಮುರದಂಡೆ ವಂದಿಸಿದರು. ಮುಕ್ತಾ ಹಡಪದ ನಿರೂಪಿಸಿದರು.‌

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌