ದಾದಿಯರ ದಿನಾಚರಣೆ । ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ । ಪ್ರಯೋಗಾಲಯ ತಂತ್ರಜ್ಞರ ದಿನ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರ ಸೇವೆ ಬಹಳ ಅತ್ತಮೂಲ್ಯವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೆನಹಳ್ಳಿ ಲೋಕೇಶ್ ತಿಳಿಸಿದ್ದಾರೆ.
ಪಟ್ಟಣದ ಮೈಸೂರು ರಸ್ತೆಯ ಡಾಕ್ಟರ್ ಅಂಬೇಡ್ಕರ್ ಭವನದಲ್ಲಿ ವೈದ್ಯ ಇನ್‌ಸ್ಟಿಟ್ಯೂಟ್ ಆಫ್ ನಸಿಂಗ್ ಅಂಡ್ ಪ್ಯಾರಾಮೆಡಿಕಲ್ ಜಂಟಿಯಾಗಿ ಆಯೋಜಿಸಿದ ದಾದಿಯರ ದಿನಾಚರಣೆ ಮತ್ತು ಪ್ರಯೋಗಾಲಯ ತಂತ್ರಜ್ಞರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.‘ವೈದ್ಯರಿಗಿಂತ ದಾದಿಯರ ಸೇವೆಯು ಅತ್ಯಮೂಲ್ಯವಾಗಿದೆ. ಯಾವುದೇ ಆಸ್ಪತ್ರೆಗೆ ತೆರಳಿದರೆ ಮೊದಲು ದಾದಿಯರು ರೋಗಿಯನ್ನು ಆರೈಕೆ ಮಾಡಿ ನಂತರ ಅವರ ಯೋಗಕ್ಷೇಮವನ್ನು ವಿಚಾರಿಸಿ ವೈದ್ಯರ ಬಳಿ ಕರೆತರುತ್ತಾರೆ. ನಂತರ ರೋಗಿಯ ದೇಹದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವೈದ್ಯರಿಗೆ ಸಂಪೂರ್ಣ ವಿವರಣೆ ನೀಡಲು ಸಹಕಾರಿಯಾಗಿದ್ದಾರೆ. ಜತೆಗೆ ವೈದ್ಯರಿಗಿಂತ ರೋಗಿಯ ಜೊತೆ ಹೆಚ್ಚಿನ ಒಡನಾಟವನ್ನು ದಾದಿಯರು ಹೊಂದಿರುತ್ತಾರೆ. ಅಲ್ಲದೆ ಎಷ್ಟು ಮಕ್ಕಳು ತಮ್ಮ ತಂದೆ ತಾಯಿಯರನ್ನು ಪೋಷಣೆ ಮಾಡದೆ ದಾದಿಯರ ನೆರವನ್ನು ಕೂಡ ಆಲಿಸುತ್ತಿದ್ದಾರೆ. ಆದರೂ ಯಾವುದೇ ರೀತಿಯ ಅಸೂಯೆ ಇಟ್ಟುಕೊಳ್ಳದೆ ವಯೋವೃದ್ಧರನ್ನು ಆರೈಕೆ ಮಾಡುವಲ್ಲಿ ದಾದಿಯರ ಪಾತ್ರ ಪ್ರಮುಖವಾಗಿದೆ’ ಎಂದು ಬಣ್ಣಿಸಿದರು.
‘ಇಂದು ಮನುಷ್ಯನ ಆರೋಗ್ಯ ಸ್ಥಿತಿ ದಿನೇ ದಿನೇ ವ್ಯತ್ಯಾಸಗಳು ಕಂಡು ಬರುತ್ತವೆ. ಆದರೆ ಆರೋಗ್ಯವನ್ನು ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ. ನೀವು ರೋಗಿಯನ್ನು ಆರೈಕೆ ಮಾಡಿ ನಿಮ್ಮ ಭಾವನಾತ್ಮಕ ಪ್ರೀತಿಯ ಮಾತುಗಳನ್ನು ಆಡಿದರೆ ಸಾಕು, ರೋಗಿಯು ಗುಣಮುಕ್ತನಾಗುವ ಸಾಧ್ಯತೆಗಳು ಇರುತ್ತವೆ’ ಎಂದು ಹೇಳಿದರು.ಮಾಜಿ ಪುರಸಭಾ ಸದಸ್ಯ ಶಶಿಧರ್ ಮಾತನಾಡಿ, ‘ದಾದಿಯರು ನಮ್ಮ ಭಾರತ ದೇಶವನ್ನು ಕಾಯುವ ಯೋಧರಿಗೆ ಸಮಾನರು. ನಾವು ಇಂದು ಸುಖವಾಗಿದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರ ಪಾತ್ರ ಪ್ರಮುಖವಾಗಿದೆ. ಅದೇ ರೀತಿ ನಾವು ಆರೋಗ್ಯಕರವಾಗಿದ್ದೇವೆ ಎಂದರೆ ದಾದಿಯರ ಪಾತ್ರವೂ ಕೂಡ ಮುಖ್ಯವಾಗಿದೆ. ಏಕೆಂದರೆ ನಮ್ಮ ಆರೈಕೆಯಲ್ಲಿ ದಾದಿಯರ ಪಾತ್ರ ಬಹುಮುಖ್ಯ. ನಮ್ಮ ಜೊತೆಯಲ್ಲಿದ್ದವರೇ ನಮ್ಮನ್ನು ಆರೈಕೆ ಮಾಡುವುದು ಕಷ್ಟವಿದೆ. ಅದರಲ್ಲೂ ಆಸ್ಪತ್ರೆಗಳಲ್ಲಿ ಯಾವುದೇ ರೋಗವಿದ್ದರೂ ಕೂಡ ಅದನ್ನು ಗಣನೆಗೆ ತೆಗೆದುಕೊಳ್ಳದೆ ನಮ್ಮೊಂದಿಗೆ ವಿಶ್ವಾಸ ಹಾಗೂ ಸಹನೆಯಿಂದ ರೋಗಿಯ ಜತೆ ಒಡನಾಟದ ಮೂಲಕ ಆರೈಕೆಯಲ್ಲಿ ತೊಡಗುವುದೇ ಒಂದು ದೊಡ್ಡ ಸಂಗತಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿದರೆ ಮೊದಲು ಸಿಗುವುದೇ ದಾದಿಯರು. ಅವರು ಮೊದಲು ನಮ್ಮ ಯೋಗ ಕ್ಷೇಮವನ್ನು ವಿಚಾರಿಸಿ ರೋಗಗಳ ಲಕ್ಷಣಗಳ ಬಗ್ಗೆ ಆರೈಕೆ ಮಾಡಿ, ಪೋಷಿಸಿ ನಂತರ ವೈದ್ಯರ ಬಳಿ ಕರೆದೊಯ್ದು ಮುಂದಿನ ಆರೈಕೆಗೆ ಮುಂದಾಗುತ್ತಾರೆ. ಆದರೆ ಆರೈಕೆ ಗಿಂತ ಅವರು ಮಾತನಾಡುವ ಪ್ರೀತಿಯ ಮಾತುಗಳಲ್ಲೇ ಸುಮಾರು ಶೇಕಡ ೫೦ ರಷ್ಟು ರೋಗಿಯು ಗುಣಮುಕ್ತನಾಗುತ್ತಾರೆ’ ಎಂದರು.ವೈದ್ಯ ಸ್ಕೂಲ್ ಆಫ್ ಪ್ಯಾರಾಮೆಡಿಕಲ್ ಅಂಡ್ ನರ್ಸಿಂಗ್ ಪ್ರಾಂಶುಪಾಲ ಅರುಣ್ ಕುಮಾರ್, ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಹಿರಿಯ ದಾದಿ ನೀಲಮ್ಮ ಇತರರು ಹಾಜರಿದ್ದರು.