ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ನಿಂದ ಜನರಿಗೆ ಅನುಕೂಲ

KannadaprabhaNewsNetwork | Published : Mar 15, 2024 1:16 AM

ಸಾರಾಂಶ

ಇಂಡಿ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಇಂಡಿಯಿಂದ ರಾಜಧಾನಿ ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ ಓಡುವ ಕನಸು ಇಂದು ನನಸಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಇಂಡಿಯಿಂದ ರಾಜಧಾನಿ ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ ಓಡುವ ಕನಸು ಇಂದು ನನಸಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇಂಡಿ ಘಟಕದಿಂದ ಇಂಡಿಯಿಂದ ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ಇಂಡಿಯಿಂದ ಬೆಂಗಳೂರಿಗೆ ಸುಗಮವಾಗಿ ತೆರಳು ಸಾರಿಗೆ ಸಂಸ್ಥೆಯಿಂದ ಬಸ್‌ನ ವ್ಯವಸ್ಥೆ, ರೈಲ್ವೆ ಇಲಾಖೆಯಿಂದ ರೈಲು ಹಾಗೂ ಕೆಲವೇ ತಿಂಗಳಲ್ಲಿ ವಿಜಯಪುರದಿಂದ ವಿಮಾನ ಓಡಾಟ ಸೇವೆಯೂ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಇದರ ಸದುಪಯೋಗವಾಗಲಿ ಎಂದರು.

2013 ರಿಂದ ಇತೀಚಿನ ದಿನಗಳಲ್ಲಿ ಇಂಡಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದನ್ನು, ಅವರಿಗೆ ಖಾಸಗಿ ವಾಹನಗಳಿಗಿಂತ ಸರ್ಕಾರಿ ಬಸ್‌ನ ಅನುಕೂಲ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಸ್ಲೀಪರ್‌ ಕೋಚ್‌ ಬಸ್‌ ಸೇವೆ ಆರಂಭಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ಪ್ರಶಾಂತ ಕಾಳೆ, ಜಟ್ಟಪ್ಪ ರವಳಿ ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ ಓಡಿಸಬೇಕೆಂಬುವುದಾಗಿತ್ತು. ಜನರ ಆಸೆಯನ್ನು ಈಡೇರಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಎಸಿ ಅಬೀದ್‌ ಗದ್ಯಾಳ, ಘಟಕ ವ್ಯವಸ್ಥಾಪಕ ಎಸ್.ಬಿ.ಬಿರಾದಾರ, ವಿಠ್ಠಲ ನಡುವಿನಮನಿ, ಸಿದ್ದು ನಡಗೇರಿ, ಅರವಿಂದ ತರಡಿ, ಪಟ್ಟಣಶೆಟ್ಟಿ, ಜಟ್ಟೆಪ್ಪ ರವಳಿ, ಜಾವೀದ್‌ ಮೋಮಿನ, ಸತೀಶ ಕುಂಬಾರ, ಇಲಿಯಾಸ್‌ ಬೋರಾಮಣಿ, ಸೋಮು ಮ್ಯಾಕೇರಿ, ಭೀಮಾಶಂಖರ ಮೂರಮನ, ಸಂತೋಷ ಪರಸೆನವರ, ಶೇಖರ ಶಿವಶರಣ ,ಸಂಜೀವ ಚವ್ಹಾಣ ಮೊದಲಾದವರು ಇದ್ದರು.ಇಂಡಿಯಿಂದ ಬೆಂಗಳೂರಿಗೆ ಪ್ರಯಾಣಿಸಬೇಕಾದರೇ ಖಾಸಗಿ ವಾಹನಗಳ ಮೊರೆ ಹೋಗುವ ಅನಿವಾರ್ಯ ಇತ್ತು ಮತ್ತು ಇತ್ತಿಚೀನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನಿಯವಾಗಿ ಹೆಚ್ಚಾಗಿರುವುದರಿಂದ ಬೆಂಗಳೂರು ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಯ ಸಮಸ್ಯೆ ಕಾಡುತ್ತಿತ್ತು. ಜನರ ಭಾವನೆಯನ್ನು ಅರಿತು ಸ್ಲೀಪರ್‌ ಕೋಚ್‌ ಬಸ್‌ಗೆ ಚಾಲನೆ ನೀಡಲಾಗಿದೆ.

- ಯಶವಂತರಾಯಗೌಡ ಪಾಟೀಲ,

ಶಾಸಕರು.ಇಂಡಿಯಿಂದ ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ ಓಡಿಸಬೇಕೆಂದು ಬಹಳಷ್ಟು ಕಾಳಜಿ ವಹಿಸಿ, ಈ ಬಸ್‌ಗೆ ಇಂದು ಚಾಲನೆ ನೀಡಿದ್ದಾರೆ. ಸ್ಲೀಪರ್‌ ಕೊಚ್‌ ಬಸ್‌ ಇಂಡಿ ಬಸ್‌ ನಿಲ್ದಾಣದಿಂದ ಸಂಜೆ 6.15 ಹೊರಟು ಮರುದಿನ ಬೆಳಗ್ಗೆ 6.30 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಸಂಜೆ 8 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.15 ಗಂಟೆಗೆ ಇಂಡಿ ತಲುಪಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.

-ಸಂಗಮೇಶ ಬಿರಾದಾರ,
ಘಟಕ ವ್ಯವಸ್ಥಾಪಕರು.

Share this article