ಕಲಬುರಗಿಯಲ್ಲಿ 23 ರಂದು ಸಂವಾದ: ಮುರಲೀಧರ ಕರಲಗೀಕರ್‌

KannadaprabhaNewsNetwork |  
Published : Jan 21, 2024, 01:33 AM IST
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿವಿಲ್‌ ಇಂಜಿನಿಯರ್‌ ಸ್ಟಿಯರಿಂಗ್‌ ಕಮೀಟಿ ಸದಸ್ಯ ಮುರಲೀಧರ ಕರಲಗೀಕರ್‌ ಅವರು ಕೆಪಿಸಿಇಎ ಕಾಯ್ದೆ ಜಾರಿಗೆ ಆಗ್ರಹಿಸಿ ಜ. 23 ರಂದು ಕಲಬುರಗಿಯಲ್ಲಿ ನಡೆಯುತ್ತಿರುವ ಸಂವಾದ ಸಮಾವೇಶದ ಕುರಿತು ಮಾಹಿತಿ ನೀಡಿದರು. | Kannada Prabha

ಸಾರಾಂಶ

ಕರ್ನಾಟಕ ವೃತ್ತಿಪರ ಸಿವಿಲ್‌ ಇಂಜಿನಿಯರ್‌ ಕಾಯಿದೆ ಜಾರಿಗೆ ಆಗ್ರಹಿಸಿ ಒಮ್ಮತಾಭ್ರಿಪ್ರಾಯ ರೂಪಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿರುವ ಕರ್ನಾಟಕ ರಾಜ್ಯ ವೃತ್ತಿಪರ ಸಿವಿಲ್‌ ಇಂಜಿನಿಯರ್‌ ಸ್ಟಿಯರಿಂಗ್‌ ಕಮಿಟಿಯವರು ಜ.23ರಂದು ಕಲಬುರಗಿಯಲ್ಲಿ ಇದೇ ವಿಷಯವಾಗಿ ಸಂವಾದ ಆಯೋಜಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕರ್ನಾಟಕ ವೃತ್ತಿಪರ ಸಿವಿಲ್‌ ಇಂಜಿನಿಯರ್‌ ಕಾಯಿದೆ ಜಾರಿಗೆ ಆಗ್ರಹಿಸಿ ಒಮ್ಮತಾಭ್ರಿಪ್ರಾಯ ರೂಪಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿರುವ ಕರ್ನಾಟಕ ರಾಜ್ಯ ವೃತ್ತಿಪರ ಸಿವಿಲ್‌ ಇಂಜಿನಿಯರ್‌ ಸ್ಟಿಯರಿಂಗ್‌ ಕಮಿಟಿಯವರು ಜ.23ರಂದು ಕಲಬುರಗಿಯಲ್ಲಿ ಇದೇ ವಿಷಯವಾಗಿ ಸಂವಾದ ಆಯೋಜಿಸಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಮೀಟಿಯ ಸದಸ್ಯರಾದ ಮುರಲೀಧರ ಕರಲಗೀಕರ್‌ ಅವರು, ಪ್ರಸ್ತುತ, ಸಿವಿಲ್‌ ಇಂಜಿನಿಯರಿಂಗ್‌ ವೃತ್ತಿಯೊಂದನ್ನು ಹೊರತುಪಡಿಸಿ ಉಳಿದೆಲ್ಲ ವೃತ್ತಿಗಗಳನ್ನು ಅಂದರೆ ವಕೀಲ, ವೈದ್ಯಕೀಯ, ಆಯುರ್ವೇದ, ದಂತವೈದ್ಯಕೀಯ, ಆರ್ಕಿಟೆಕ್ಚರ್, ಲೆಕ್ಕಪರಿಶೋಧಕ, ಮುಂತಾದವುಗಳನ್ನು ಕಾನೂನಾತ್ಮಕವಾಗಿ ಗುರುತಿಸಲ್ಪಟ್ಟು ಶಾಸನಬದ್ಧ ಮಂಡಳಿಗಳಿಂದ ನಿಯಂತ್ರಿಸಲ್ಪಡುತ್ತವೆ.

ಆದರೆ ಇಂತಹ ಒಂದು ವೃತ್ತಿಪರತೆಯ ಕಾನೂನಾತ್ಮಕ ಮತ್ತು ಶಾಸನಬದ್ಧ ಮಂಡಳಿ ಸಿವಿಲ್‌ ಇಂಜಿನಿಯರಿಂಗ್‌ ವೃತ್ತಿಗೆ ಇಲ್ಲದಂತಾಗಿದೆ. ಅದಕ್ಕೇ ಇದೇ ಬೇಡಿಕೆ ಇಟ್ಟುಕೊಂಡು ಜನೇವರಿ ತಿಂಗಳಲ್ಲೇ ಕಲಬುರಗಿಯಿಂದ ಶುರುವಾಗಿ ಬೆಂಗಳೂರು, ಬೆಳಗಾವಿ, ಮೈಸೂರುಗಳಲ್ಲಿಯೂ ಸಂವಾದ, ಸಮಾವೇಶ ನಡೆಸಲಾಗುತ್ತಿದೆ. ಇದರಿಂದ ವ್ಯಾಪಾಕ ಅಭಿಪ್ರಾಯ ಹುಟ್ಟುಹಾಕಿ ಸರಕಾರದ ಗಮನ ಸೆಳೆಯುವುದೇ ಪ್ರಯತ್ನವಾಗಿದೆ ಎಂದಿದ್ದಾರೆ.

ಇವೆಲ್ಲ ಸಂವಾದಗಳ ನಂತರ ಕರ್ನಾಟಕದ 5 ಲಕ್ಷ ಸಿವಿಲ್‌ ಇಂಜಿನಿಯರ್‌ಗಳಿಂದ ಸದರಿ ಕಾಯಿದೆ ಯನ್ನು ಜಾರಿಗೆೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಾಗುತ್ತದೆ ಎಂದು ಹೇಳಿದ್ದಾರೆ.

ನಿಯಂತ್ರಣವಿಲ್ಲದ ಇಂತಹ ಪರಿಸ್ಥಿತಿಯಿಂದಾಗಿ ಸಿವಿಲ್ಇಂ ಜಿನಿಯರಿಂಗ್‌ ವೃತ್ತಿ ಸೂಕ್ತ ಅರ್ಹತೆ ಹೊಂದಿಲ್ಲದ ವ್ಯಕ್ತಿಗಳಿಂದ (Quacks)ತುಂಬಿಕೊಂಡಿದೆ. ಇದರಿಂದಾಗಿ ಅಸುರಕ್ಷಿತ, ಸುಸ್ಥಿರವಲ್ಲದ ಮತ್ತು ಆಸಮರ್ಥನೀಯ ಕಟ್ಟಡಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿವೆ. ಅಲ್ಲದೆ ಸಿವಿಲ್ಇಂ ಜಿನಿಯರಿಂಗ್‌ ವೃತ್ತಿಯು ಅಸುರಕ್ಷಿತ, ಸುಸ್ಥಿರವಲ್ಲದ ಮತ್ತು ಆಸಮರ್ಥನೀಯ ನಿಯಮಾವಳಿಗಳಿಂದ ತುಂಬಿಕೊಂಡಿದೆ.

ಇಂತಹ ನಿಯಮಾವಳಿಗಳಿಂದಾಗಿ ಮತ್ತಷ್ಟು ಸಂಕಷ್ಟಗಳನ್ನು ಕೆಳ ಮತ್ತು ಮಧ್ಯಮ ವರ್ಗದ 98% ಜನ ಅನುಭವಿಸಬೇಕಾಗಿದೆ. ಇದಕ್ಕೆಲ್ಲ ಸಸದರಿ ಕಾಯಿದೆ ಪರಿಹಾರವಾಗಿದೆ ಎಂದು ಮುರಲೀಧರ ಹೇಳಿದ್ದಾರೆ. ಈಗಾಗಲೇ 2006 ರಲ್ಲೇ ಗುಜರಾತ್‌ನಲ್ಲಿ ಈ ಕಾಯ್ದೆ ಜಾರಿಯಾಗಿದೆ. ಕರ್ನಾಟಕದಲ್ಲಿಯೂ ಕರಡು ಸಿದ್ಧವಾಗಿದೆ. ಅದನ್ನು ಜಾರಿ ಮಾಡಬೇಕಷ್ಟೆ ಎಂದರು.

ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಗ್ಯಾಟ್‌ನಲ್ಲಿ 2001ರಲ್ಲಿ ಒಡಂಬಡಿಕೆಯೊಂದನ್ನು ಸಿದ್ಧಪಡಿಸಿ, ಅದರಂತೆಎಲ್ಲ ವಿಶ್ವಸಂಸ್ಥೆ ರಾಷ್ಟ್ರಗಳು ತಮ್ಮ ದೇಶಗಳ ಮತ್ತು ರಾಜ್ಯಗಳ ಪರಿಮಿತಿಯಲ್ಲಿ ವೃತ್ತಿಪರತೆಯನ್ನು ಕಾನೂನಾತ್ಮಕ ಮತ್ತುಶಾಸನಬದ್ಧ ಕಾಯ್ದೆಗಳ ಅಡಿಯಲ್ಲಿ ತರಲು ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದವು.

ಅದರಂತೆ ಎಲ್ಲ ಸದಸ್ಯ ರಾಷ್ಟ್ರಗಳು ತಮ್ಮ ದೇಶಗಳಲ್ಲಿನ ವೃತ್ತಿಗಳನ್ನು ಕಾನೂನಾತ್ಮಕ ಕಾಯ್ದೆಗಳ ಅಡಿಯಲ್ಲಿ ತಂದಿವೆ. ಆದರೆ ಭಾರತದಲ್ಲಿ ಮಾತ್ರ ಸಿವಿಲ್ಇಂ ಜಿನಿಯರಿಂಗ್‌ ವೃತ್ತಿಯನ್ನು ಬಿಟ್ಟುಉಳಿದೆಲ್ಲ ವೃತ್ತಿಗಳನ್ನು ಮೇಲೆ ತಿಳಿಸಿದಂತೆ ಕಾನೂನಾತ್ಮಕವಾಗಿ ಗುರುತಿಸಲ್ಪಟ್ಟು ಶಾಸನ ಬದ್ಧವಾದ ರೀತಿಯಲ್ಲಿ ನಿಯಂತ್ರಿಸಲ್ಪಟ್ಟಿವೆ.

ಕರ್ನಾಟಕದಲ್ಲಿ 5 ಲಕ್ಷ ವೃತ್ತಿಪರ ಸಿವಿಲ್‌ ಇಂಜಿನಿಯರುಗಳು ಈ ಕೆಪಿಸಿಇಎ ಕಾಯ್ದೆಯನ್ನುಆದಷ್ಟುಬೇಗನೆ ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ವಿನಂತಿಸಿಕೊಳ್ಳುತ್ತಿದ್ದು ಅಭಿಪ್ರಾಯ ರೂಪಿಸಲು ಜ. 23 ರಂದು ಕಲ್ಯಾಣ ಕರ್ನಾಟಕದ 500 ರಷ್ಟು ಸಿವಿಲ್ಇಂಜಿನಿಯರ್‌ಗಳು ಕಲಬುರಗಿಯಲ್ಲಿ ಸೇರಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರಗೆ ಪಾಲ್ಗೊಳ್ಳುತ್ತಿರುವ ಮೇಳದಲ್ಲಿ ಸಂದರ್ಭದಲ್ಲಿ ಲಾ ಕಮಿಷನ್ ಸಿದ್ಧಪಡಿಸಿದ ಕರಡು ಕಾನೂನು ಪ್ರತಿಯನ್ನು ಪ್ರಚುರಪಡಿಸಲಾಗುತ್ತದೆ ಎಂದು ಮುರಲೀಧರ ಕರಲಗೀಕರ್‌ ಹೇಳಿದ್ದಾರೆ.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ