ಸರ್ಕಾರಿ ಶಾಲೆ ಉಳಿಸಲು ವಿದ್ಯಾರ್ಥಿಗಳಿಗೆ ಸಹಕಾರ: ಕಾಳಿಂಗಪ್ಪ ವೆಲ್ಪೇರ್ ಅಸೋಸಿಯೇಷನ್‌ನ ಎಚ್.ಕೆ.ಮಂಜುನಾಥ್

KannadaprabhaNewsNetwork |  
Published : Jun 15, 2024, 01:00 AM IST
14ಎಚ್ಎಸ್ಎನ್13 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಳಿಂಗಪ್ಪ ವೆಲ್ಪೇರ್ ಅಸೋಸಿಯೇಷನ್ ಮುಖ್ಯಸ್ಥ ಹೆಚ್.ಕೆ. ಮಂಜುನಾಥ್. | Kannada Prabha

ಸಾರಾಂಶ

‘ನಮ್ಮ ನಡಿಗೆ ಸರಕಾರಿ ಶಾಲೆಯ ಕಡೆಗೆ’ ಘೋಷಣೆಯಲ್ಲಿ ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಗುರಿ ಹೊಂದುವ ಮೂಲಕ ವಿವಿಧ ಸರ್ಕಾರಿ ಶಾಲೆಗೆ ಸಹಕಾರ ಕೊಡಲಾಗಿದೆ ಎಂದು ಆಲೂರು ತಾಲೂಕಿನ ಹಂಜಿಳಿಗೆ ಗ್ರಾಮದ ಕಾಳಿಂಗಪ್ಪ ವೆಲ್ಪೇರ್ ಅಸೋಸಿಯೇಷನ್ ಮುಖ್ಯಸ್ಥ ಎಚ್.ಕೆ.ಮಂಜುನಾಥ್ ತಿಳಿಸಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

4 ಸಾವಿರ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ

ಕನ್ನಡಪ್ರಭ ವಾರ್ತೆ ಹಾಸನ

‘ನಮ್ಮ ನಡಿಗೆ ಸರಕಾರಿ ಶಾಲೆಯ ಕಡೆಗೆ’ ಘೋಷಣೆಯಲ್ಲಿ ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಗುರಿ ಹೊಂದುವ ಮೂಲಕ ವಿವಿಧ ಸರ್ಕಾರಿ ಶಾಲೆಗೆ ಸಹಕಾರ ಕೊಡಲಾಗಿದೆ ಎಂದು ಆಲೂರು ತಾಲೂಕಿನ ಹಂಜಿಳಿಗೆ ಗ್ರಾಮದ ಕಾಳಿಂಗಪ್ಪ ವೆಲ್ಪೇರ್ ಅಸೋಸಿಯೇಷನ್ ಮುಖ್ಯಸ್ಥ ಎಚ್.ಕೆ.ಮಂಜುನಾಥ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ‘೨೦೨೪ರ ವರ್ಷದಲ್ಲಿ ಗುರಿ ಹೊಂದಿದ್ದು, ಒಟ್ಟು ೪ ಸಾವಿರ ವಿದ್ಯಾರ್ಥಿಗಳಿಗೆ ೩೦ ಸಾವಿರ ನೋಟ್ ಪುಸ್ತಕಗಳು ಹಾಗೂ ೧೧೦೦ ಬ್ಯಾಗ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಗುರಿ ಹೊಂದಿದ್ದೇವೆ. ಆಲೂರು ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಹಾಗೂ ೧೬೧ ಶಾಲೆಗಳು, ೨ ಹೈಸ್ಕೂಲ್‌ಗಳು ಸೇರಿವೆ. ನನಗೆ ಸಮಾಜ ಸೇವೆಯ ತುಡಿತ ಸುಮಾರು ೪೦ ನಲವತ್ತು ವರ್ಷಗಳ ಹಿಂದೆಯೇ ಇತ್ತು. ಐ.ಟಿ. ಕೆಲಸ ಪ್ರಾರಂಭಿಸಿದಾಗಲೇ ನಿರ್ಧರಿಸಿದ್ದರಂತೆ, ತಾವು ೫೦ನೇ ವರ್ಷ ದಾಟುತ್ತಿದ್ದಂತೆ ತಮ್ಮ ಕಾರ್ಪೋರೆಟ್ ಕೆಲಸದಿಂದ ನಿವೃತ್ತಿ ತಾವಾಗಿಯೆ ತೆಗೆದುಕೊಂಡು ಸಮಾಜಕ್ಕೆ ಎನಾದರೂ ಮಾಡಬೇಕೆಂದು ಇವರು ಆಯ್ಕೆ ಮಾಡಿಕೊಂಡಿದ್ದು, ಶಿಕ್ಷಣ ಜತೆಗೆ ಆ ಸಮಯದಲ್ಲಿ ಊರಿಗೆ ಬಂದಾಗ ಗಮನಿಸಿದ್ದು ಏನಂದರೆ ಸುತ್ತಮುತ್ತಲಿನ ಊರುಗಳಲ್ಲಿ ಸರ್ಕಾರಿ ಶಾಲೆಗಳು ಹಾಜರಾತಿಯ ಕೊರೆತೆಯಿಂದ ಮುಚ್ಚುತ್ತಿರುವುದು. ಸ್ನೇಹಿತರೊಂದಿಗೆ ಚರ್ಚಿಸಿ ಸರ್ಕಾರಿ ಶಾಲೆಗಳನ್ನ ಉಳಿಸಿಕೊಳ್ಳಲು ತಮ್ಮಿಂದ ಏನು ಮಾಡಲು ಸಾದ್ಯವೆಂದು ಯೋಚಿಸಿ, ಸರ್ಕಾರದಿಂದ ಏನು ಸೌಲಭ್ಯಗಳು ಸಿಗುವುದಿಲ್ಲವೋ ಅವುಗಳನ್ನು ನಾವು ನೀಡಿದರೆ, ಈ ಶಾಲೆಗಳಲ್ಲಿ ನೂರಕ್ಕೆ ನೂರರಷ್ಟು ಉಚಿತವಾಗಿ ಶಿಕ್ಷಣ ಸಿಕ್ಕಂತೆ ಆಗುತ್ತದೆ’ ಎಂದು ಹೇಳಿದರು.

‘೨೦೧೨ರಲ್ಲಿ ತಮ್ಮ ಸ್ವಂತ ಊರಾದ ಹಂಜಿಳಿಗೆ ಸರ್ಕಾರಿ ಪ್ರಾಥಮಿಕ ಶಾಲೆಯ ೧೮ ಮಕ್ಕಳಿಗೆ ನೋಟ್‌ ಬುಕ್‌ಗಳು, ಲೇಖನಿ ಸಮಾಗ್ರಿಗಳು, ಬ್ಯಾಗ್‌ಗಳನ್ನು ಉಚಿತವಾಗಿ ಕೊಡುವುದಕ್ಕೆ ಪ್ರಾರಂಭಿಸಿದೆ. ಇದಕ್ಕಾಗಿ ಇವರು ‘ನಮ್ಮ ನಡಿಗೆ ಸರ್ಕಾರಿ ಶಾಲೆಯ ಕಡೆಗೆ’ ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ಅದಕ್ಕಾಗಿ ಇವರು ತಮ್ಮ ಹುಟ್ಟೂರು ಹಾಗೂ ತಂದೆಯವರ ಹೆಸರಿನಲ್ಲಿ ಹಂಜಳಿಗೆ ಕಾಳಿಂಗಪ್ಪ ವೆಲ್‌ಪೇರ್ ಅಸೋಷಿಯೇಷನ್ ಸಂಸ್ಥೆಯನ್ನು ಹುಟ್ಟುಹಾಕಿ ಈಗ ಸುಮಾರು ೪೦೦೦ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗಿದೆ’ ಎಂದು ತಿಳಿಸಿದರು.

‘ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇರಬಾರದೆಂದು ೧೧ ಸ್ಮಾರ್ಟ ಕ್ಲಾಸ್‌ಗಳನ್ನು ತೆರೆದು ಮೊದಲನೆ ತರಗತಿಯಿಂದಲೇ ಮಕ್ಕಳು ಕಂಪ್ಯೂಟರ್ ತಂತ್ರಜ್ಞಾನವನ್ನು ಪಡೆಯುವಂತೆ ಮಾಡಲಾಯಿತು. ೨೦೧೪ರಲ್ಲೇ ಇವರು ಸ್ವಂತ ಊರಾದ ಹಂಜಿಳಿಗೆಯಲ್ಲಿ ಮೊದಲನೆ ಸ್ಮಾರ್ಟಿ ಪ್ರಾರಂಬಿಸಿಲಾಗಿದೆ. ಇವರ ಕನಸು ಇಡೀ ಆಲೂರು ತಾಲೂಕಿನಲ್ಲಿ ಡಿಜಿಟಲ್ ಶಿಕ್ಷಣವನ್ನು ಸ್ಮಾರ್ಟ್‌ ಕ್ಲಾಸ್ ಮುಖಾಂತರ ಮಾಡಿ ತೋರಿಸಬೇಕೆನ್ನುವುದು. ತಮ್ಮಂತೆ ಇತರರು ಅವರವರ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದೆ ಬರಬೇಕೆನ್ನುವುದು ಮುಖ್ಯ ಉದ್ದೇಶವಾಗಿದೆ. ಹಾಸನ ತಾಲೂಕು, ಚಿಕ್ಕಮಗಳೂರು, ತುಮಕೂರು, ಶಿವಮೋಗ್ಗ, ಮೈಸೂರು, ಚಾಮರಾಜನಗರ ಜಿಲ್ಲೆಯ ಶಾಲೆಗಳಿಗೂ ಕೂಡ ಈ ವ್ಯವಸ್ಥೆಯನ್ನು ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಹೆರಗು ರಮೇಶ್, ಸತೀಶ್, ದಾಸೇಗೌಡ ಇತರರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ