ಸಹಕಾರ ಸಂಘದಿಂದ ಬಡವರಿಗೆ ಅನುಕೂಲ

KannadaprabhaNewsNetwork |  
Published : Sep 03, 2025, 01:00 AM IST
2 ಟಿವಿಕೆ 1 - ತುರುವೇಕೆರೆಯ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ 25 ನೇ ವರ್ಷದ ಬೆಳ್ಳಿಹಬ್ಬ ಮಹೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಸಹಕಾರ ಸಂಘಗಳಲ್ಲಿ ಬಡವರಿಗೆ ಅನುಕೂಲವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ , ತುರುವೇಕೆರೆ

ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಸಹಕಾರ ಸಂಘಗಳಲ್ಲಿ ಬಡವರಿಗೆ ಅನುಕೂಲವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ 25ನೇ ವರ್ಷದ ಬೆಳ್ಳಿಹಬ್ಬ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಹಕಾರ ಸಂಘಗಳು ಹೆಚ್ಚು ಬೆಳವಣಿಗೆಯಾಗಬೇಕಿದೆ. ಹೆಚ್ಚು ಜನರು ಸಹಕಾರ ಸಂಘದಲ್ಲಿ ಸದಸ್ಯರಾಗುವ ಜೊತೆಗೆ ತಮ್ಮ ವ್ಯವಹಾರ ಮಾಡಬೇಕು. ಸಹಕಾರ ಸಂಘಗಳು ಆದಾಯಗಳಿಸಿದರೆ ಸದಸ್ಯರಿಗೂ ವಿವಿಧ ರೀತಿಯಲ್ಲಿ ಹಣಕಾಸಿನ ನೆರವು ಸಿಗಲಿದೆ. ಕೆಲವು ಸಹಕಾರ ಸಂಘಗಳು ಪ್ರಾರಂಭವಾದ ಕೆಲವೇ ವರ್ಷಗಳಲ್ಲೇ ಮುಚ್ಚಿ ಹೋಗುತ್ತವೆ. ಆದರೆ ಬಸವೇಶ್ವರ ಪತ್ತಿನ ಸಹಕಾರ ಸಂಘ 25 ವರ್ಷ ಉತ್ತಮ ವ್ಯವಹಾರ ಮಾಡಿ ಆದಾಯಗಳಿಸಿದೆ ಇದು ಒಂದು ಸಾಧನೆಯೇ ಸರಿ ಎಂದರು. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ವ್ಯವಹಾರ ಮಾಡುವ ಬದಲು ನಮ್ಮ ಸಹಕಾರ ಸಂಘಗಳಲ್ಲಿ ಹೆಚ್ಚು ವ್ಯವಹಾರ ಮಾಡಿ ಸಹಕಾರ ಸಂಘಗಳನ್ನು ಬೆಳಸಬೇಕು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ದಿವ್ಯ ಸಾನಿಧ್ಯ ವಹಿಸಿದ್ದ ಸಂಘದ ಅಧ್ಯಕ್ಷರು ಹಾಗೂ ಕೆರೆಕೋಡಿ ರಂಗಾಫುರ ಸುಕ್ಷೇತ್ರ ಗುರುಪರದೇಶೀಕೇಂದ್ರ ಸ್ವಾಮಿಗಳು ಮಾತನಾಡಿ, ಎಲ್ಲರ ಸಹಕಾರದಿಂದ ಮಾತ್ರ ಸಹಕಾರ ಕ್ಷೇತ್ರ ಸಹಕಾರ ಸಂಘಗಳು ಅಭಿವೃದ್ದಿ ಹೊಂದಲು ಸಾಧ್ಯ. ಬಸವೇಶ್ವರ ಪತ್ತಿನ ಸಹಕಾರ ಸಂಘವನ್ನು ಕೆಲವು ಮಂದಿ ಕೇವಲ 3 ಲಕ್ಷ ರು.ಗಳಲ್ಲಿ ಸ್ಥಾಪನೆ ಮಾಡಿರುವ ಸಂಘ ಇದು. ಇಂದು ಕೋಟ್ಯಂತರ ರು. ವ್ಯವಹಾರ ಮಾಡುವಂತಾಗಿದೆ. 25 ವರ್ಷದಲ್ಲಿ ಉತ್ತಮ ಆದಾಯದಲ್ಲಿ ಸಂಘ ನಡೆಯುತ್ತಿದೆ. ಸದಸ್ಯರ ಸಹಕಾರದಿಂದ ಇನ್ನು ಹೆಚ್ಚಿನ ಲಾಭಗಳಿಸಿ ಸದಸ್ಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಲಿ ಎಂದು ಸಲಹೆ ನೀಡಿದರು. ಸಂಘದ ನಿರ್ದೇಶಕ ವೀರೇಂದ್ರ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಪ್ರಾರಂಭ ಹಾಗೂ ವ್ಯವಹಾರದ ಬಗ್ಗೆ ತಿಳಿಸಿದರು. ಶ್ರೀ ಗೋಡೆಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶಿಕೇಂದ್ರ ಸ್ವಾಮಿಗಳು ಹಾಗೂ ಗುರುಕುಲಾನಂದಾಶ್ರಮ ಮಠದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ತುಮುಲ್ ಮಾಜಿ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಅಖಿಲ ಭಾರತ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಮುಖಂಡರಾದ ಎಂ.ಡಿ.ಮೂರ್ತಿ, ಸಂಘದ ಸ್ಥಾಪಕ ಅಧ್ಯಕ್ಷರಾದ ನಂಜಪ್ಪ, ಮಾಜಿ ಅಧ್ಯಕ್ಷರಾದ ವಿಜಯಕುಮಾರ್, ಬಾಣಸಂದ್ರ ರಾಜಣ್ಣ, ಆರ್.ಮಲ್ಲಿಕಾರ್ಜುನ್, ಮರಿಯಪ್ಪ, ತಿಮ್ಮಯ್ಯ, ಬಿಂದು, ಬಸವರಾಜು, ಶಿವಕುಮಾರ್ ಸಂಘದ ಉಪಾಧ್ಯಕ್ಷ ಶಿವಶಂಕರಯ್ಯ, ನಿರ್ದೇಶಕರಾದ ಗುರುಲಿಂಗಮೂರ್ತಿ, ಶಿವರುದ್ರಪ್ಪ, ಶಿವಬಸವಯ್ಯ, ಶ್ರೀಕಂಠಯ್ಯ, ನಂದೀಶ್, ಗಿರಿಯಪ್ಪ, ಮಹೇಶ್, ಲೋಕೇಶ್, ಸುಶೀಲಾ, ಸಂದ್ಯಾ, ಆಶಾನಾಗರಾಜು, ಶಿವಶಂಕರಪ್ಪ, ಯೋಗಾನಂದ್, ಸಿಇಓ ವಿದ್ಯಾಶ್ರೀ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಸಹಕಾರ ಸಂಘದ ಸದಸ್ಯರು ಇದ್ದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ