-ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅಭಿಮತ । ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವದ 2 ನೇ ದಿನದ ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ, ಹೊಸದುರ್ಗ
ದುರಾಸೆಯ ಫಲವಾಗಿ ಉನ್ನತ ಸ್ಥಾನದಲ್ಲಿರುವವರಿಂದಲೇ ಭ್ರಷ್ಟಾಚಾರ ಹಾಗೂ ದುಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ಸಾಣೇಹಳ್ಳಿಯ ಶಿವಸಂಚಾರ ಕಲಾ ಸಂಘದಿಂದ ರಾಷ್ಟ್ರೀಯ ನಾಟಕೋತ್ಸವದ 2 ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.ದುರಾಸೆಯ ಫಲ ಇಂದು ಮಾಲಿನ್ಯ ಹೆಚ್ಚಾಗಲು ಕಾರಣವಾಗಿದ್ದು ಬಾಹ್ಯ ಮಾಲಿನ್ಯವನ್ನು ಸರಿ ಪಡಿಸಬಹುದು. ಆದರೆ, ಮನೋ ಮಾಲಿನ್ಯವನ್ನು ಸರಿಪಡಿಸುವುದು ಕಷ್ಠ. ಎಲ್ಲಿಯವರೆಗೆ ಮನೋ ಮಾಲಿನ್ಯ ಸರಿಯಾಗುವುದಿಲ್ಲ ಅಲ್ಲಿಯವರೆಗೆ ಪರಿಸರ ಮಾಲಿನ್ಯ ಸರಿಪಡಿಸಲು ಸಾಧ್ಯವಿಲ್ಲ ಎಂದರು.
ಪರಿಸರ ಪ್ರೇಮಿ ಡಾ. ಸಂಜೀವ್ ಕುಲಕರ್ಣಿ ಮಾತನಾಡಿ, ಮನುಷ್ಯ ಬದುಕು ಕಟ್ಟಿಕೊಳ್ಳಲು ಪ್ರಾರಂಭಿಸಿದಾಗಿನಿಂದ ಪರಿಸರದ ವಿನಾಶ ಪ್ರಾರಂಭಗೊಂಡಿತು. ಪ್ರಗತಿಯ ಹೆಸರಿನಲ್ಲಿ ಅರಣ್ಯ ನಾಶ ಮಾಡುತ್ತಿದ್ದೇವೆ. ಇದರಿಂದ ತಾಪಮಾನ ಹೆಚ್ಚಾಗುತ್ತಿದೆ. ಇದೆ ಪರಿಸ್ಥಿತಿ ಮುಂದುವರೆದರೆ ಮುಂದಿನ 40-50 ವರ್ಷಗಳಲ್ಲಿ ಜೀವ ಸಂಕುಲ ಸಂಪೂರ್ಣ ನಶಿಸಿಹೊಗುತ್ತದೆ ಎಂದರು.ಭೂಮಿಯ ಮೇಲೆ ಪ್ರಕೃತಿಗೆ ಆಗುತ್ತಿರುವ ಅಪಚಾರಕ್ಕೆ ಮುಂದಿನ 30 ವರ್ಷಗಳಲ್ಲಿ ಕೃಷಿ ಸಂಪರ್ಣ ನಶಿಸಿದರು ಆಶ್ಚರ್ಯ ಪಡಬೇಕಿಲ್ಲ ಇದನ್ನೆಲ್ಲಾ ಸರಿಪಡಿಸಲು ಸರ್ಕಾರ ಗಳಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರು ತಮ್ಮ ಕೈಲಾದ ರೀತಿಯಲ್ಲಿ ಪರಿಸರ ಸಂರಕ್ಷಣೆಗೆ ಮುಂದಾದರೆ ಮಾತ್ರ ಪರಿಸರ ಸಂರಕ್ಷಣೆ ಸಾದ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಡಾ ಧನಂಜಯ ಸರ್ಜಿ ಮಾತನಾಡಿ, ಉಸಿರು ಮತ್ತು ಹೆಸರಿನ ನಡುವೆ ಇರುವುದೇ ಜೀವನ. ಮನುಷ್ಯನಿಗೆ ಉತ್ತಮ ಸಂಸ್ಕೃತಿ , ಸಂಸ್ಕಾರ ಕಲಿಸಲು ಸಂಪ್ರಾದಾಯಿಕ ಆಚರಣೆಗಳು ಬೇಕು. ಮೈ ನೀರಿನಿಂದ ನೆನೆದರೆ ಬಟ್ಟೆ ಬದಲಾಯಿಸಬಹುದು ಮೈ ಬೆವರಿನಿಂದ ನೆನೆದರೆ ಇತಿಹಾಸ ಬದಲಿಸಬಹುದು ಎಂದರು.ಕಾರ್ಯಕ್ರಮದಲ್ಲಿ ಬಸವಕಲ್ಯಾಣದ ಅಂತರಾಷ್ಟ್ರೀಯ ಲಿಂಗಾಯಿತ ಧರ್ಮ ಕೇಂದ್ರದ ಡಾ ಗಂಗಾಂಭಿಕ ಅಕ್ಕ ಸಾನಿಧ್ಯ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಎಂ ಜಿ ಮೂಳೆ, ದಾವಣಗೆರೆ ಡಿಸಿ ಜಿ ಎಂ ಗಂಗಾಧರ ಸ್ವಾಮಿ , ಕೊಪ್ಪಳದ ಉಪ ಕುಲಪತಿ ಬಿ ಕೆ ರವಿ ಅತಿಥಿಗಳಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ವಿವಿದ ಪ್ರಶಸ್ತಿ ಪುರಸ್ಕೃತರಾದ ಎನ್. ಎಸ್. ಶಂಕರ್, ಆರ್ ಜಿ ನಾಗರಾಜ್, ಕಲಾವತಿ, ಡಾ ಸಂಜಯ್, ಮುರುಡಯ್ಯ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ದುಮ್ಮಿಯ ಜ್ಞಾನಜ್ಯೋತಿ ಶಾಲೆಯ ಮಕ್ಕಳು ಹಾಗೂ ಶ್ರೀಮತಿ ನಿಸರ್ಗ ಸಂಜಯ್ ನೃತ್ಯರೂಪಕ ನಡೆಸಿಕೊಟ್ಟರು. ಕೊನೆಯಲ್ಲಿ ಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತ ಕೆ ಎಸ್ ಡಿಎಲ್ ಚಂದ್ರು ನಿರ್ದೇಶನದ ಪರಸಂಗದ ಗೆಂಡೆತಿಮ್ಮ ನಾಟಕವನ್ನು ಬೆಂಗಳೂರಿನ ರೂಪಾಂತರ ಕಲಾವಿದರು ಅಭಿನಯಿಸಿದರು.-----
ಪೋಟೋ, 5 ಎಚ್‌ಎಸ್‌ಡಿ3: ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 2 ನೇ ದಿನದ ಕಾರ್ಯಕ್ರಮದಲ್ಲಿ ದುಮ್ಮಿಯ ಜ್ಞಾನಜ್ಯೋತಿ ಶಾಲೆಯ ಮಕ್ಕಳು ನಡೆಸಿಕೊಟ್ಟ ನೃತ್ಯರೂಪಕ.----
ಪೋಟೋ, 5 ಎಚ್‌ಎಸ್‌ಡಿ4: ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 2 ನೇ ದಿನದ ಕಾರ್ಯಕ್ರಮದಲ್ಲಿ ವಿವಿದ ಪ್ರಶಸ್ತಿ ಪುರಸ್ಕೃತರಾದ ಎನ್ ಎಸ್ ಶಂಕರ್, ಆರ್ ಜಿ ನಾಗರಾಜ್, ಕಲಾವತಿ, ಡಾ ಸಂಜಯ್, ಮುರುಡಯ್ಯ ಅವರನ್ನು ಅಭಿನಂದಿಸಲಾಯಿತು.----
.......ಕೋಟ್....ರಾಜರ ಮನರಂಜನೆಯ ಕಲೆ ನೃತ್ಯವನ್ನು 12 ನೇ ಶತಮಾನದಲ್ಲಿ ಶರಣರು ಜನರ ಪರಿವರ್ತನೆಯ ಮಾರ್ಗವನ್ನಾಗಿ ಮಾಡಿದರು. ಪ್ರಸ್ತುತ ಕಾಲದಲ್ಲಿ ಲಿಂಗಾಯಿತ ಸಂಸ್ಕೃತಿಯನ್ನು ಹೊಯ್ಯುವ ರಾಯಭಾರಿಗಳಾಗಿ ಸಾಣೇಹಳ್ಳಿ ಶ್ರೀಗಳು ಇದ್ದಾರೆ.
- ಡಾ. ಗಂಗಾಂಭಿಕ ಅಕ್ಕ. ಬಸವಕಲ್ಯಾಣದ ಅಂತರಾಷ್ಟ್ರೀಯ ಲಿಂಗಾಯಿತ ಧರ್ಮ ಕೇಂದ್ರ.-----