ಕಾಸ್ಮೊಸ್ ಪುಷ್ಪ ಕೃಷಿಯತ್ತ ವಾಲಿದ ರೈತ

KannadaprabhaNewsNetwork | Published : Dec 9, 2023 1:15 AM

ಸಾರಾಂಶ

ರೈತರು ಅಲ್ಪ ಬೆಳೆಯಾದ ಪುಷ್ಪ ಕೃಷಿಯತ್ತ ವಾಲುತ್ತಿದ್ದು, ಉತ್ತಮ ನಿರ್ವಹಣೆ ಮಾಡಿದರೆ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಸಮೀಪದ ಮಡಿಕೇರಿ, ಬೆನಕನಾಳ, ಯರಗೇರಾ ಸೇರಿದಂತೆ ನಾನಾ ಗ್ರಾಮಗಳಲ್ಲಿ ರೈತರು ಪುಷ್ಪ ಕೃಷಿಯತ್ತ ವಾಲುತ್ತಿದ್ದಾರೆ. ಸದ್ಯ ಮಡಿಕೇರಿ ಗ್ರಾಮದ ರೈತ ಈಶಪ್ಪ ಈಳಗೇರ ಕಾಸ್ಮೊಸ್ ಹೂ ಬೆಳೆದು ಉತ್ತಮ ಇಳುವರಿ ಪಡೆದು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಸಾವಯವ ವಿಧಾನದಲ್ಲಿ ತಮ್ಮ ಒಂದು ಎಕರೆ ನೀರಾವರಿ ಜಮೀನಿನಲ್ಲಿ ಕಾಸ್ಮೊಸ್ ಬೆಳೆ ಬೆಳೆದು ಉತ್ಕೃಷ್ಟ ಮಟ್ಟದ ಹೂಗಳನ್ನು ಬಿಡುತ್ತಿದ್ದು, ಕಡಿಮೆ ಖರ್ಚಿನಲ್ಲಿ ಬೆಳೆದ ಕಾಸ್ಮೊಸ್ ಹೂವಿನ ಬೆಳೆಯಲ್ಲಿ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಏಕನಾಥ ಮೆದಿಕೇರಿಕನ್ನಡಪ್ರಭ ವಾರ್ತೆ ಹನುಮಸಾಗರರೈತರು ಅಲ್ಪ ಬೆಳೆಯಾದ ಪುಷ್ಪ ಕೃಷಿಯತ್ತ ವಾಲುತ್ತಿದ್ದು, ಉತ್ತಮ ನಿರ್ವಹಣೆ ಮಾಡಿದರೆ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಸಮೀಪದ ಮಡಿಕೇರಿ, ಬೆನಕನಾಳ, ಯರಗೇರಾ ಸೇರಿದಂತೆ ನಾನಾ ಗ್ರಾಮಗಳಲ್ಲಿ ರೈತರು ಪುಷ್ಪ ಕೃಷಿಯತ್ತ ವಾಲುತ್ತಿದ್ದಾರೆ. ಸದ್ಯ ಮಡಿಕೇರಿ ಗ್ರಾಮದ ರೈತ ಈಶಪ್ಪ ಈಳಗೇರ ಕಾಸ್ಮೊಸ್ ಹೂ ಬೆಳೆದು ಉತ್ತಮ ಇಳುವರಿ ಪಡೆದು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಸಾವಯವ ವಿಧಾನದಲ್ಲಿ ತಮ್ಮ ಒಂದು ಎಕರೆ ನೀರಾವರಿ ಜಮೀನಿನಲ್ಲಿ ಕಾಸ್ಮೊಸ್ ಬೆಳೆ ಬೆಳೆದು ಉತ್ಕೃಷ್ಟ ಮಟ್ಟದ ಹೂಗಳನ್ನು ಬಿಡುತ್ತಿದ್ದು, ಕಡಿಮೆ ಖರ್ಚಿನಲ್ಲಿ ಬೆಳೆದ ಕಾಸ್ಮೊಸ್ ಹೂವಿನ ಬೆಳೆಯಲ್ಲಿ ಲಾಭದ ನಿರೀಕ್ಷೆಯಲ್ಲಿದ್ದಾರೆ.ಹೂವಿನತ್ತ ರೈತರ ಚಿತ್ತ:ಈ ಭಾಗದ ರೈತರು ಮೊದಲು ಚೆಂಡು ಹೂ, ಕಲ್ಲಂಗಡಿ, ಸೂರ್ಯಕಾಂತಿ, ಮೆಕ್ಕೆ, ದಾಳಿಂಬೆ, ವೀಳ್ಯದೆಲೆ ಬೆಳೆಯುತ್ತಿದ್ದರು. ಆದರೆ ಸದ್ಯ ಕಾಸ್ಮೊಸ್ ಹೂವಿನತ್ತ ಗಮನ ಹರಿಸಿದ್ದಾರೆ. ಈ ಹೂವಿನಲ್ಲಿ ಗುಲಾಬಿ, ಬಿಳಿ, ನೀರುಗುಲಾಬಿ, ಹಳದಿ ಹೀಗೆ ಆಕರ್ಷಕವಾಗಿ ಬಣ್ಣ ಬಣ್ಣಗಳಲ್ಲಿ ಹೂ ಬೆಳೆಯಲಾಗುತ್ತಿದೆ.ಹೂ ಬಿಡಿಸುವ ವಿಧಾನ:ಕಾಸ್ಮೊಸ್ ಹೂ ಬೆಳೆದ ಮೇಲೆ ಅದರಿಂದ ಬೀಜಗಳನ್ನು ಬೇರ್ಪಡಿಸಲಾಗುತ್ತದೆ. ಬೇರೆ ಹೂಗಳಾದ್ರೆ ಹೂಗಳನ್ನು ಕೀಳಬಹುದು. ಆದರೆ ಇದು ವಿಭಿನ್ನವಾಗಿರುತ್ತದೆ. ಬಿಡಿಸುವಾಗ ಉದ್ದವಾದ ಬಟ್ಟೆಯನ್ನು ನೆಲಕ್ಕೆ ಹಾಕಬೇಕು. ನಂತರ ಹೂಗಳನ್ನು ಬಟ್ಟೆಯಲ್ಲಿ ಹಾಕಿದಾಗ ಬೀಜಗಳು ಬೀಳುತ್ತವೆ. ಹೀಗೆ ಮಾಡಿದಾಗ ೧ ಕ್ವಿಂಟಲ್ ಬೀಜಕ್ಕೆ ₹೩೨ ಸಾವಿರ ಬೆಲೆ ಇದೆ. ಕಂಪನಿಯವರು ಖುದ್ದು ಆಗಮಿಸಿ ಬೀಜಗಳನ್ನು ತೂಕ ಮಾಡಿ ಕೊಂಡ್ಯೊಯ್ಯುತ್ತಾರೆ.ಖರ್ಚು ವೆಚ್ಚ:ಬೇರೆ ಬೆಳೆಗೆ ಹೋಲಿಸಿದರೆ ಇದರಲ್ಲಿ ಖರ್ಚು ಕಡಿಮೆಯಿದೆ. ಇದು ಅಲ್ಪಾವಧಿ ಬೆಳೆಯಾಗಿದ್ದು, ಸಸಿ ನೆಟ್ಟು ಎರಡು ತಿಂಗಳಿನಲ್ಲಿ ಫಸಲು ಆರಂಭವಾಗುತ್ತದೆ, ಅಲ್ಪಾವಧಿಯಲ್ಲಿ ಹೆಚ್ಚು ಲಾಭ ಪಡೆಯಬಹುದಾಗಿದೆ. ಬೆಳೆಯ ಹಣವನ್ನು ಕಂಪನಿಯವರು ರೈತರ ಖಾತೆಗೆ ನೇರವಾಗಿ ಜಮೆ ಮಾಡುತ್ತಾರೆ.ಕಾಸ್ಮೊಸ್ ಹೂಗಳನ್ನು ಈ ಭಾಗದಲ್ಲಿ ಬೀಜಗಳಿಗೆ ಮಾತ್ರ ಬೆಳೆಯಲಾಗುತ್ತದೆ. ಇದು ಕಂಪನಿಯವರೊಂದಿಗೆ ಮಾತುಕತೆಯಾಗಿರುತ್ತದೆ. ಆದರೆ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಹಾಯಧನದಲ್ಲಿ ಪೈಪ್‌ಲೈನ್‌ಗಳನ್ನು ಮಾತ್ರ ಕೊಡಲಾಗುತ್ತದೆ. -ದುರ್ಗಾಪ್ರಸಾದ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ.

Share this article