ಕನ್ನಡಪ್ರಭ ವಾರ್ತೆ ಭಾರತೀನಗರಗ್ರಾಮೀಣ ಸೊಗಡಿನ ಚಕ್ಕಡಿ ಓಟದ ಸ್ಪರ್ಧೆಗೆ ಮನ್ನಣೆ ಅಗತ್ಯ. ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ಬೊಪ್ಪಸಮುದ್ರ ಗ್ರಾಮದಲ್ಲಿ ಉದಯ ಕಲಾ ಕ್ರೀಡಾ ಬಳಗದಿಂದ ಆಯೋಜಿಸಿದ್ದ ಪ್ರಥಮ ವರ್ಷದ ರಾಜ್ಯ ಮಟ್ಟದ ಚಕ್ಕಡಿಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.ಇತ್ತೀಚಿಗೆ ಕ್ರಿಕೆಟ್‌ಗೆ ಸಿಗುವಷ್ಟು ಮನ್ನಣೆ ಗ್ರಾಮೀಣ ಕ್ರೀಡೆಗಳಿಗೆ ಸಿಗುತ್ತಿಲ್ಲ. ದೇಶಿ ಮತ್ತು ಗ್ರಾಮೀಣ ಕ್ರೀಡೆಗಳಿಗೂ ಸಹ ಹೆಚ್ಚಿನ ಮನ್ನಣೆ ಸಿಗುವಂತಾಗಬೇಕು. ಎತ್ತಿನಗಾಡಿ ಓಟದ ಸ್ಪರ್ಧೆ ಕೂಡ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೂಡ ನಡೆಯುವಂತಾಗಬೇಕೆಂದು ಅಭಿಪ್ರಾಯವ್ಯಕ್ತಪಡಿಸಿದರು.
ಎತ್ತಿನಗಾಡಿ ಓಟದ ಸ್ಪರ್ಧೆ ಈಗಿನ ದಿನಮಾನಗಳಲ್ಲಿ ಕಣ್ಮರೆಯಾಗುತ್ತಿದೆ. ರೈತರು ಹಸುಗಳನ್ನು ಸಾಕುವುದು ಅಷ್ಟೇ ಅಲ್ಲ ಅದನ್ನು ಪಾಲನೆ ಪೋಷಣೆ ಮಾಡುವುದು ತುಂಬಾ ಅಗತ್ಯ. ನಾವೆಲ್ಲರೂ ಬದುಕಬೇಕಾದರೆ ಜನ ಸಂಖ್ಯೆಯ ಜೊತೆಗೆ ಪಶುಸಂತತಿ ಹೆಚ್ಚಾಗಬೇಕು ಎಂದರು.ಚಕ್ಕಡಿಗಾಡಿ ಓಟದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ:
ಸ್ಪರ್ಧೆಯಲ್ಲಿ 72 ಜೋಡಿ ಕರುಗಳು ಭಾಗವಹಿಸಿದ್ದರು. ಪ್ರಥಮ ಬಹುಮಾನ ಬೊಪ್ಪಸಮುದ್ರ ವೇಗದೂತ ಮೈಸೂರು ರಾಣಿಗೆ 44,444 ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ಕೂಡ್ಲುಗುಪ್ಪಗೆ ತ್ರಿಬಲ್ 9 ಬ್ರಹ್ಮಕಲ್ಕಿಗೆ 33,333 ರು. ನಗದು ಮತ್ತು ಆಕರ್ಷಕ ಟ್ರೋಫಿ, ತೃತೀಯ ಬಹುಮಾನ ಬೊಪ್ಪಸಮುದ್ರ ಸಾಬ್ರುಕರ ಕಾಟಿಗೆ 22,222 ಮತ್ತು ಆಕರ್ಷಕ ಟ್ರೋಫಿ, ನಾಲ್ಕನೇ ಬಹುಮಾನ ಮಂಡ್ಯ ಚಿಕ್ಕಾಡೆ ಚಿಕ್ಯ ಕಾಳಿಗೆ 11,111 ಮತ್ತು ಆಕರ್ಷಕ ಟ್ರೋಫಿ, 5 ನೇ ಬಹುಮಾನ ವಡೆಹ್ಯಾಡ್ರಹಳ್ಳಿ ರುಕ್ಕುಗೆ 5,555 ಮತ್ತು ಆಕರ್ಷಕ ಟ್ರೋಫಿ, 6 ನೇ ಬಹುಮಾನ ಸುಣ್ಣದದೊಡ್ಡಿ ಜೈಮಾರುತಿ ಸರ್ಪಗೆ 4,444 ಮತ್ತು ಆಕರ್ಷಕ ಟ್ರೋಫಿ, ೭ನೇ ಬಹುಮಾನ ಟಿ.ಎಂ.ಹೊಸೂರು ಬಿರುಗಾಳಿಗೆ 3,333 ಮತ್ತು ಆಕರ್ಷಕ ಟ್ರೋಫಿ, ೮ನೇ ಬಹುಮಾನ ಹಿಟ್ಲರ್ ಕೆಂಪೇಗೌಡ್ರು ಪಿ.ಕುಮಾರ್‌ದಶಕುಪ್ಪೆ 2,222 ಮತ್ತು ಆಕರ್ಷಕ ಟ್ರೋಫಿ ಪಡೆದುಕೊಂಡರು.ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ ಹಾಗೂ ಜೆಡಿಎಸ್ ಯುವ ಮುಖಂಡ ಅಣ್ಣೂರು ನವೀನ್ ಬಹುಮಾನ ವಿತರಣೆ ಮಾಡಿದರು. ಮುಖಂಡರಾದ ಕೆ.ಟಿ.ಸುರೇಶ್, ತಿಟ್ಟಮಾರನಹಳ್ಳಿ ಶ್ರೀನಿವಾಸ್, ಮುಡೀನಹಳ್ಳಿ ತಿಮ್ಮೇಗೌಡ, ತೊರೆ ಬೊಮ್ಮನಹಳ್ಳಿ ಶ್ರೀನಿವಾಸ್, ವಿನುಕುಮಾರ್, ಕಾರ್ಯಕ್ರಮದ ಆಯೋಜಕ ಬೊಪ್ಪಸಮುದ್ರ ಗೌರಿಶಂಕರ, ಪುನೀತ್, ಸುಪ್ರೀತ್, ನಂದೀಶ್ ಸೇರಿದಂತೆ ಹಲವರಿದ್ದರು.