ರಾಮಸಮುದ್ರದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಕ್ರಿಕೆಟ್ ಪಂದ್ಯಾವಳಿ
ಕನ್ನಡಪ್ರಭ ವಾರ್ತೆ ಚಾಮರಾಜನಗರರಾಮಸಮುದ್ರ ಕಿಚ್ಚ ಸುದೀಪ್ ಸೇನಾ ಸಮಿತಿ ( ಕೆಎಸ್ಎಸ್ಎಸ್) ವತಿಯಿಂದ ಆಯೋಜಿಸಿದ ಮೂರು ದಿನಗಳ ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾವಳಿಲ್ಲಿ ಅಮಚವಾಡಿ ಕೂಲ್ ಬಾಯ್ಸ್ ಕ್ರಿಕೆಟ್ ತಂಡ ಪ್ರಥಮ ಸ್ಥಾನ ಪಡೆದು ಶ್ರೀಮಹರ್ಷಿ ವಾಲ್ಮೀಕಿ ಕಪ್ ಅನ್ನು ತನ್ನ ಮುಡಿಗೇಡಿಸಿಕೊಂಡಿದೆ. ಕಿಚ್ಚ ಸುದೀಪ್ ಸೇನಾ ಸಮಿತಿ ತಂಡ ದ್ವಿತೀಯ ಸ್ಥಾನ ಪಡೆದು ಟ್ರೋಫಿ ಪಡೆದು ತೃಪ್ತಿಪಟ್ಟುಕೊಂಡಿದೆ.ನಗರದ ರಾಮಸಮುದ್ರ ಬಡಾವಣೆಯ ದೀನಬಂಧು ಶಾಲೆಯ ಸಮೀಪದ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಹಾಗೂ ನಾಯಕ ಜನಾಂಗದ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಎರಡು ತಂಡಗಳಿಗೂ ಟ್ರೋಫಿ ವಿತರಿಸಿದರು.ವಾಲ್ಮೀಕಿ ಅವರು ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಾರೆ: ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಪ್ರಥಮ ಸ್ಥಾನ ಪಡೆದ ಅಮಚವಾಡಿ ಕೂಲ್ ಬಾಯ್ಸ್ ಕ್ರಿಕೆಟ್ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣ ಬರೆಯುವ ಮೂಲಕ ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟ ಮಹಾಪುರುಷರು. ಅಂತಹ ಮಹಾಪುರುಷರ ಹೆಸರಿನಲ್ಲಿ ರಾಮಸಮುದ್ರ ಕಿಚ್ಚಸುದೀಪ್ ಸೇನಾ ಸಮಿತಿಯು ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಅಯೋಜನೆ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು. ಕ್ರೀಡೆಯಿಂದ ಉತ್ತಮ ಆರೋಗ್ಯ ವೃದ್ಧಿ: ನಾಯಕ ಜನಾಂಗದ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ದ್ವಿತೀಯ ಸ್ಥಾನ ಪಡೆದ ಕಿಚ್ಚಸುದೀಪ್ ಸೇನಾ ಸಮಿತಿ ಕ್ರಿಕೆಟ್ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿ, ದೇಶ, ರಾಜ್ಯದಲ್ಲಿ ಎಲ್ಲ ಆಟಗಳಿಗಿಂತ ಕ್ರಿಕೆಟ್ ದೊಡ್ಡ ಕ್ರೀಡೆಯಾಗಿದೆ. ನಾನು ಕೂಡ ಕಬಡ್ಡಿ ಆಟಗಾರರಾಗಿ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೇನೆ. ಕ್ರೀಡಾ ಚಟುವಟಿಕೆಯಿಂದ ಸದೃಢದೇಹ, ಉತ್ತಮ ಆರೋಗ್ಯ ಹೊಂದಬಹುದು. ಈ ವೇಳೆ ನಗರಸಭಾ ಸದಸ್ಯ ಶಿವರಾಜ್, ಬಿಜೆಪಿ ಮುಖಂಡ ನಟರಾಜು, ಸರ್ವೇಯರ್ ರಮೇಶ್, ಶಿಕ್ಷಕ ಮಹೇಶ್, ಲಿಂಗರಾಜು, ಜಯಕುಮಾರ್, ರವಿ, ರಂಗಸ್ವಾಮಿ, ಪ್ರಜ್ವಲ್,ಶಿವು, ಪ್ರಮೋದ್, ಕ್ರಿಕೆಟ್ ಆಟಗಾರರು, ಕ್ರಿಕೆಟ್ ಪ್ರೇಮಿಗಳ ಭಾಗವಹಿಸಿದ್ದರು.