ಸಾಂಸ್ಕೃತಿ ನಗರಿಯಲ್ಲಿ ಸರ್ವಂ ಸಂಗೀತ-ತಾಳಮಯಂ

KannadaprabhaNewsNetwork |  
Published : Sep 28, 2025, 02:00 AM IST
105 | Kannada Prabha

ಸಾರಾಂಶ

ಶ್ರೀನೀಲಾದ್ರಿ ಕುಮಾರ್ ಅಮೋಘವಾಗಿ ಸಿತಾರ್ ನುಡಿಸಿ ಪ್ರೇಕ್ಷಕರು ತಲೆತೂಗುವಂತೆ ಮಾಡಿದರು.

ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವ ಅಂಗವಾಗಿ ನಗರದ ವಿವಿಧ ವೇದಿಕೆಗಳಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಶನಿವಾರ ಪ್ರೇಕ್ಷಕರನ್ನು ರಂಜಿಸಿತು.ಅರಮನೆ ಮುಂಭಾಗದ ವೇದಿಕೆ ಸೇರಿದಂತೆ ವಿವಿಧೆಡೆ ವೇದಿಕೆಗಳನ್ನು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಶಿಳ್ಳೆ ಚಪ್ಪಾಳೆ ಮೂಲಕ ಕಲಾವಿದರನ್ನು ಕಲಾರಸಿಕರು ಪ್ರೋತ್ಸಾಹಿಸಿದರು.ಅರಮನೆ ಮುಂಭಾಗದ ವೇದಿಕೆಯಲ್ಲಿ ಗಾಯಕಿ ಸಿಂಚನ ದಿಕ್ಷೀತ್ ಅವರು ಕಾಯೋ ಶ್ರೀ ಗೌರಿ ಕರುಣ ಲಹರಿ, ಹೈದಿನಿ ನಂದಿನಿ ನಂದಿತಾ ವೇದಿನಿ... ಮಹಿಸಾಸೂರ ಮರ್ದಿನಿ, ದೇವ ಶ್ರೀ ಗಣೇಶ, ಸೂಜುಗಾದ ಸೂಜು ಮಲ್ಲಿಗೆ... ಮಹದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ... ಹಾಡಿನ ಮೂಲಕ ಮೋಡಿ ಮಾಡಿದರು.ಡೆನ್ನಾನಾ ಡೆನ್ನಾನಾ, ಎಲ್ಲಿ ಕಾಣೆ ಎಲ್ಲಿ ಕಾಣೆ ಯಲ್ಲವ್ವನ ನಿನ್ನ ಎಲ್ಲಿ ಕಾಣೆ.., ಎದೆ ತುಂಬಿ ಹಾಡಿದನು ಅಂದು ನಾನು, ಬಾಳ ಬಂಗಾರ ನೀನು... ಹಣೆಯ ಸಿಂಗಾರ ನೀನು.., ಬೊಂಬೆ ಹೇಳುತೈತೆ ಮತ್ತೇ ಹೇಳುತೈತೆ ನೀನೇ ರಾಜಕುಮಾರ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಮೊದಲಾದ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನ ಗೆದ್ದರು.ಶ್ರೀನೀಲಾದ್ರಿ ಕುಮಾರ್ ಅಮೋಘವಾಗಿ ಸಿತಾರ್ ನುಡಿಸಿ ಪ್ರೇಕ್ಷಕರು ತಲೆತೂಗುವಂತೆ ಮಾಡಿದರು. ಡ್ರಮ್ಸ್ ನಲ್ಲಿ ಲೂಹಿ ಜಿನೊ ಬ್ಯಾಂಕ್ಸ್, ತಬಲ ಪಂಡಿತ್ ಸತ್ಯಜೀತ್ ತಲವಲ್ಕರ್, ಬಾಸೂರಿಯಲ್ಲಿ ರಿಷಿಕೇಶ್ ಮಜೊಂಧಾರ್, ಕೀ ಬೋರ್ಡ್, ಕೊಳಲು ವಾದಕರು ತಮ್ಮ ಝಲಕ್ ಪ್ರದರ್ಶಿಸಿ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಧಾನಪರಿಷತ್ತು ಸದಸ್ಯ ಡಾ.ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್ ಮೊದಲಾದವರು ಕಾರ್ಯಕ್ರಮ ವೀಕ್ಷಿಸಿದರು. ಸಂಗೀತ- ನೃತ್ಯ ರೂಪಕಂಜಗನ್ಮೋಹನ ಅರಮನೆಯಲ್ಲಿ ಜಾನಪದ ಗೀತೆ, ಜಯಹೇ ನಾಲ್ವಡಿ ಗೀತ ನೃತ್ಯರೂಪಕ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಬಯಲಾಟ ಪ್ರದರ್ಶನವಾಯಿತು.ಕಲಾಮಂದಿರದಲ್ಲಿ ಕಂಸಾಳೆ, ಜನಪದ ಗೀತೆ, ಅರೆಭಾಷೆಯ ಸಿರಿ ಸಂಸ್ಕೃತಿ ನಾಟ್ಯ ಮಿಲನ ನೃತ್ಯಶಾಲೆಯ ನೃತ್ಯರೂಪಕ, ಸುಗಮ ಸಂಗೀತ, ಭರತನಾಟ್ಯ ನಡೆಯಿತು. ಕಿರು ರಂಗಮಂದಿರದಲ್ಲಿ ಭರತನಾಟ್ಯ, ಆಳಿದ ಮಾಸ್ವಾಮಿಗಳು ನಾಟಕ ಹಾಗೂ ಅಭಿರಾಮ್ ಕಿರುನಾಟಕ ಪ್ರದರ್ಶನವಾಯಿತು.ಗಾನಭಾರತಿಯಲ್ಲಿ ಕೊಡವ ನೃತ್ಯ, ಶಾಸ್ತ್ರೀಯ ಸಂಗೀತ, ತಬಲವಾದನ, ತತ್ವಪದ ಗಾಯನ, ಸುಗಮ ಸಂಗೀತ, ನಾದಬ್ರಹ್ಮ ಸಂಗೀತ ಸಭಾದಲ್ಲಿ ಸ್ಯಾಕ್ಸೋಫೋನ್, ಭರತನಾಟ್ಯ, ತತ್ವಪದ ಗಾಯನ, ದಾಸ ದಸರಾ- ದಾಸ ವಾಣಿ, ಒಡಿಸ್ಸಿ ನೃತ್ಯವು ಗಮನ ಸೆಳೆಯಿತು.ಚಿಕ್ಕಗಡಿಯಾರ ವೇದಿಕೆಯಲ್ಲಿ ಸೋಬಾನಿ ಪದ, ಕಿನ್ನರಿ ಜೋಗಿ ಪದ, ಜಗ್ಗಲಗಿ ಮೇಳ, ಕರಡಿ ಮಜಲು, ಜನಪದ ಗಾಯನ ಮೋಡಿ ಮಾಡಿತು. ಇನ್ನೂ ಪುರಭವನದಲ್ಲಿ ಗಯ ಚರಿತ್ರೆ ಕೃಷ್ಣಾರ್ಜುನ ಯುದ್ಧ- ಪೌರಾಣಿಕ ನಾಟಕ, ಕಿವುಡ ಮಾಡಿದ ಕಿತಾಪತಿ- ಸಾಮಾಜಿಕ ನಾಟಕ ಹಾಗೂ ಸ್ಮಶಾನ ಕುರುಕ್ಷೇತ್ರ ನಾಟಕ ಪ್ರದರ್ಶನವಾಯಿತು.ರಮಾಗೋವಿಂದ ರಂಗಮಂದಿರದಲ್ಲಿ ಕೀಲುಕುದುರೆ, ಭಾವಗೀತೆ ಗಾಯನ, ಸುಗಮ ಸಂಗೀತ, ತರಂಗಿಣಿ- ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಹಾಗೂ ಸುಯೋಧನ ನಾಟಕವು ಪ್ರೇಕ್ಷಕರನ್ನು ರಂಜಿಸಿತು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ