ಡಿಸಿಸಿ ಬ್ಯಾಂಕ್ 13 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ

KannadaprabhaNewsNetwork |  
Published : Jun 21, 2024, 01:09 AM ISTUpdated : Jun 21, 2024, 12:48 PM IST
voting up

ಸಾರಾಂಶ

ಶಿವಮೊಗ್ಗ ಡಿಸಿಸಿ ಬ್ಯಾಂಕ್‍ಗೆ ವಿವಿಧ ಕ್ಷೇತ್ರಗಳಿಂದ ಒಟ್ಟು 13 ನಿರ್ದೇಶಕರ ಆಯ್ಕೆಗೆ ಜೂ.28 ರಂದು ಚುನಾವಣೆ ನಡೆಯಲಿದೆ.

 ಶಿವಮೊಗ್ಗ :  ಡಿಸಿಸಿ ಬ್ಯಾಂಕ್ 13 ನಿರ್ದೇಶಕರ ಸ್ಥಾನದ ಆಯ್ಕೆಗೆ ಜೂ.28 ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಅಂತಿಮವಾಗಿದ್ದು ಒಟ್ಟು 35 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್‍ಗೆ ವಿವಿಧ ಕ್ಷೇತ್ರಗಳಿಂದ ಒಟ್ಟು 13 ನಿರ್ದೇಶಕರ ಆಯ್ಕೆ ನಡೆಯಲಿದೆ. ಪ್ರತಿ ತಾಲೂಕಿಗೆ ಒಬ್ಬರಂತೆ ವಿವಿಧ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ 7 ಪ್ರತಿನಿಧಿಗಳು, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು, ಸಂಸ್ಕರಣ ಸಂಘಗಳ ವತಿಯಿಂದ ಇಬ್ಬರು ಸದಸ್ಯರು, ಪಟ್ಟಣ ಸಹಕಾರ ಸಂಘಗಳು ಮತ್ತು ವ್ಯವಸಾಯೇತರ ಸಹಕಾರ ಸಂಘಗಳ ವತಿಯಿಂದ ಇಬ್ಬರು, ಇನ್ನಿತರೆ ಸಹಕಾರ ಸಂಘಗಳ ವತಿಯಿಂದ ಇಬ್ಬರು ಸದಸ್ಯರು ಸೇರಿದಂತೆ 13 ಸದಸ್ಯರ ಆಯ್ಕೆ ನಡೆಯಲಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ 7 ಸ್ಥಾನಗಳಿಗೆ 14 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಶಿವಮೊಗ್ಗ ತಾಲೂಕಿನಿಂದ ಒಂದು ಕ್ಷೇತ್ರಕ್ಕೆ ಕೆ.ಪಿ. ದುಗ್ಗಪ್ಪಗೌಡ, ಎಂ. ಶ್ರೀಕಾಂತ್, ಜೆ. ಶಿವನಂಜಪ್ಪ ಸೇರಿದಂತೆ ಮೂವರು, ಭದ್ರಾವತಿ ತಾಲೂಕಿನಿಂದ ಒಂದು ಕ್ಷೇತ್ರಕ್ಕೆ ಎಚ್.ಎಲ್. ಷಡಾಕ್ಷರಿ, ಸಿ. ಹನುಮಂತಪ್ಪ ಸೇರಿದಂತೆ ಇಬ್ಬರು, ತೀರ್ಥಹಳ್ಳಿ ತಾಲೂಕಿನಿಂದ ಒಂದು ಕ್ಷೇತ್ರಕ್ಕೆ ಬಸವಾನಿ ವಿಜಯದೇವ್, ಕೆ.ಸ್. ಶಿವಕುಮಾರ್ ಸೇರಿದಂತೆ ಇಬ್ಬರು, ಶಿಕಾರಿಪುರದ ಒಂದು ಸ್ಥಾನಕ್ಕೆ ಅಗಡಿ ಅಶೋಕ್, ಎಸ್.ಪಿ. ಚಂದ್ರಶೇಖರಗೌಡ ಸೇರಿದಂತೆ ಇಬ್ಬರು, ಸೊಬರದ ಒಂದು ಸ್ಥಾನಕ್ಕೆ ಕೆ.ಪಿ. ರುದ್ರೇಗೌಡ, ಶಿವಮೂರ್ತಿಗೌಡ ಸೇರಿದಂತೆ ಇಬ್ಬರು, ಸಾಗರ ಕ್ಷೇತ್ರದ ಒಂದು ಸ್ಥಾನಕ್ಕೆ ಗೋಪಾಲಕೃಷ್ಣ ಬೇಳೂರು, ರತ್ನಾಕರ ಹೊನಗೋಡು ಸೇರಿದಂತೆ ಇಬ್ಬರು ಹಾಗೂ ಹೊಸನಗರ ತಾಲೂಕಿನ ಒಂದು ಕ್ಷೇತ್ರಕ್ಕೆ ಎಂ.ಎ.ಪರಮೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ.

ಹಾಗೆಯೇ ಕೃಷಿ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಕ್ಷೇತ್ರದ 2 ಸ್ಥಾನಗಳಿಗೆ 6 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಶಿವಮೊಗ್ಗ ಉಪ ವಿಭಾಗದಿಂದ ಹಾಲಿ ಬ್ಯಾಂಕಿನ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಆರ್. ವಿಜಯಕುಮಾರ್, ಜಿ.ಈ. ವಿರೂಪಾಕ್ಷಪ್ಪ, ಸಾಗರ ಉಪವಿಭಾಗದಿಂದ ಜಿ.ಎನ್. ಸುಧೀರ್, ಎಚ್. ಮಲ್ಲಿಕ್, ಬಿ.ಡಿ. ಭೂಕಾಂತ್, ಪಟ್ಟಣ ಸಹಕಾರ ಬ್ಯಾಂಕುಗಳು ಹಾಗೂ ವ್ಯವಸಾಯೇತರ ಪತ್ತಿನ ಸಂಘಗಳ 2 ಸ್ಥಾನಗಳಿಗೆ 6 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಶಿವಮೊಗ್ಗ ಉಪವಿಭಾಗದಿಂದ ಎಸ್.ಕೆ. ಮರಿಯಪ್ಪ, ಎಸ್.ಪಿ. ದಿನೇಶ್, ಜಿ.ಎಂ. ವಿಜಯಕುಮಾರ್, ಟಿ.ಎಸ್. ದುಗ್ಗೇಶ್, ಸಾಗರ ಉಪವಿಭಾಗದಿಂದ ಎಚ್.ಎಸ್. ರವೀಂದ್ರ, ಡಿ.ಎಲ್. ಬಸವರಾಜ್. ಇತರೆ ಸಹಕಾರ ಸಂಘಗಳ 2 ಕ್ಷೇತ್ರಗಳಿಗೆ 9 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಶಿವಮೊಗ್ಗ ಉಪವಿಭಾಗದಿಂದ ಕೆ.ಎಲ್. ಜಗದೀಶ್ವರ, ಡಿ. ಆನಂದ, ಆರ್.ಸಿ. ನಾಯ್ಕ, ಹೆಚ್.ಬಿ. ದಿನೇಶ್, ಜೆ.ಪಿ. ಯೋಗೀಶ್, ಎಸ್.ಎನ್. ಮಹಾಲಿಂಗಶಾಸ್ತಿ, ಹೆಚ್.ಜಿ. ಮಲ್ಲಯ್ಯ ಹಾಗೂ ಸಾಗರ ಉಪವಿಭಾಗದ ವತಿಯಿಂದ ಟಿ. ಶಿವಶಂಕರಪ್ಪ, ಎನ್.ಡಿ.ಹರೀಶ್ ನಾಮಪತ್ರ ಸಲ್ಲಿಸಿದ್ದಾರೆ.

ಗುರುವಾರ ನಾಮಪತ್ರ ಸಲ್ಲಿಕೆ ಕೊನೆ ದಿನವಾಗಿತ್ತು. ಉಳಿದಂತೆ ಜೂ. 22 ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಅದೇ ದಿನ ಪ್ರಕಟಿಸಲಾಗುತ್ತದೆ. ಜೂ.28 ರಂದು ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಕಟ್ಟಡದಲ್ಲಿ ಮತದಾನ ನಡೆಯಲಿದೆ. ಮತದಾನ ಮುಗಿಯುತ್ತಿದ್ದಂತೆ ಎಣಿಕೆ ಕಾರ್ಯ ನಡೆಯಲಿದ್ದು, ಎಣಿಕೆ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಫಲಿತಾಂಶ ಪ್ರಕಟಿಸಲಾಗುತ್ತದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ